ಬಿಸಿ ಬಿಸಿ ಸುದ್ದಿ

ಸಹಕಾರಿ ಸಂಘಗಳು ಬಡ ವ್ಯಾಪಾರಸ್ಥರ ಬದುಕಿಗೆ ಆಸರೆಯಾಗಿವೆ- ಬಸವರಾಜ ಮತ್ತಿಮಡು

ಶಹಾಬಾದ:ಸಹಕಾರಿ ಬ್ಯಾಂಕುಗಳು ಸ್ಥಳೀಯ ಬಡ ವ್ಯಾಪಾರಸ್ಥರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ನೀಡಿ ಅವರ ಬದುಕಿಗೆ ಆಸರೆಯಾಗಿವೆ ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಹೇಳಿದರು.

ಅವರು ಶನಿವಾರ ನಗರದ ಶಹಾಬಾದ ಪತ್ತಿನ ಸಹಕಾರ ಸಂಘದ 11ನೇ ವಾರ್ಷಿಕ ಮಹಾಸಭೆಯ ನಿಮಿತ್ತ ಆಯೋಜಿಸಲಾದ ಕಾರ್ಯಕ್ರಮದ ಉದ್ಘಾಟಕರಾಗಿ ಮಾತನಾಡಿದರು.

ಬಡವರು, ಮಧ್ಯಮವರ್ಗದವರು ಸಾಲ ತೀರಿಸುವಲ್ಲಿ ತೋರಿಸುವ ಬದ್ಧತೆ ಹಾಗೂ ಪ್ರಾಮಾಣಿಕತೆಯನ್ನು ಇಂದು ಶ್ರೀಮಂತರು ತೋರಿಸುತ್ತಿಲ್ಲ.ಇಂದು ನಗರದ ಎರಡು ಕಾಖರ್ಾನೆ ಬಂದ್ ಆಗಿವೆ. ಸಾಲ ಕೊಡಲು ಜನರು ಮುಂದಾಗುತ್ತಿಲ್ಲ.ಆದರೂ ಇಲ್ಲಿನ ಸಹಕಾರಿ ಬ್ಯಾಂಕ್ ಸಾಲ ನೀಡಿ, ಸ್ವಾವಲಂಬಿಯಾಗಿ ಬದುಕಲು ನೆರವು ನೀಡುತ್ತಿದೆ. ಅದರ ಮಧ್ಯೆ ಸಾಲ ಪಡೆದ ಮೇಲೆ ಅದನ್ನು ತೀರಿಸುವುದು ಗ್ರಾಹಕನ ಮುಖ್ಯ ಕರ್ತವ್ಯ. ಗ್ರಾಹಕರ ಸಹಕಾರದಿಂದಲೇ ಸಹಕಾರಿ ಬ್ಯಾಂಕಗಳು ಅಭಿವೃದ್ಧಿಯನ್ನು ಸಾಧಿಸುತ್ತಿವೆ. ಸರಕಾರದಿಂದ ಹಾಗೂ ನನ್ನ ವ್ಯಯಕ್ತಿಕವಾಗಿ ಏನಾದರೂ ಸಹಾಯ ಬೇಕಾದರೆ ಮಾಡುತ್ತೆನೆ.ಅಲ್ಲದೇ ನಗರದ ಎರಡು ಕಾರ್ಖಾನೆಗಳನ್ನು ಪುನರ್ ಆರಂಭಿಸಲು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದೆನೆ ಎಂದರು.

ಎಸ.ಬಿ.ಐ ಬ್ಯಾಂಕ್ ವ್ಯವಸ್ಥಾಪಕ ನಾಗರಾಜ.ವಿ ಮಾತನಾಡಿ, ಒಂದು ಸಹಕಾರಿ ಸಂಘಗಳು ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಬೇಕಾದರೆ ಸಂಘದ ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗದ ಪ್ರಾಮಾಣಿಕ ದುಡಿಮೆ ಹಾಗೂ ಪಾರದರ್ಶಕ ಆಡಳಿತ ನಡೆಸುವುದು ಅಷ್ಟೇ ಅವಶ್ಯಕ. ಇಂದು ಎಷ್ಟೋ ಬ್ಯಾಂಕುಗಳು ಹುಟ್ಟಿವೆ.ಅಷ್ಟೇ ನೆಲಕಚ್ಚಿ ಹೋಗಿವೆ.ಅದಕ್ಕೆ ಮೂಲ ಕಾರಣ ಅದರ ಮೇಲೆ ರಾಜಕೀಯ ಪ್ರಭಾವವೇ ಹೊರತು ಮತ್ತೊಂದರಿಂದಲ್ಲ. ಪ್ರಾಮಾಣಿಕತೆ ಮತ್ತು ಕ್ರೀಯಾಶೀಲತೆಯಿಂದ ಕೆಲಸ ಮಾಡುವ ಮೂಲಕ ಸಂಘದ ಅಬಿವೃದ್ಧಿಗೆ ಮುಂದಾಗಿ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಅಪ್ಪಾ ಇನ್ಸಟ್ಯೂಟ ಆಫ್ ಟೆಕನಾಲಜಿಯ ವಿದ್ಯಾರ್ಥಿ  ಬಿಇ ಮೆಕ್ಯಾನಿಕಲನಲ್ಲಿ  ಕಲಬುರಗಿ ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯಕ್ಕೆ 6ನೇ ರಾಂಕ್ ಪಡೆದ ಶಹಾಬಾದನ ಆಶಿರ್ ಪಟೇಲ್/ಡಾ.ಅಮಹ್ಮದ್ ಪಟೇಲ್ ಅವರನ್ನು ಸನ್ಮಾನಿಸಲಾಯಿತು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ್ ಮರ್ಚಂಟ, ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಜೆಡಿಎಸ್ ಅಧ್ಯಕ್ಷ ರಾಜ ಮಹ್ಮದ್ ರಾಜಾ, ಸಹಕಾರ ಸಂಘದ ಉಪಾಧ್ಯಕ್ಷ ಲೋಹಿತ್ ಕಟ್ಟಿ ಮಾತನಾಡಿದರು.ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶರಣು ವಸ್ತ್ರದ್ ಅಧ್ಯಕ್ಷತೆ ವಹಿಸಿದ್ದರು.
ಶರಣು ವಸ್ತ್ರದ್ ನಿರೂಪಿಸಿದರು, ಶಿವಾನಂದ ಪಾಟೀಲ ಸ್ವಾಗತಿಸಿದರು, ಶ್ರೀಧರ ಜೋಷಿ ವಂದಿಸಿದರು.

ಸಂಘದ ಆಡಳಿ ಮಂಡಳಿ ಸದಸ್ಯರಾದ ಡಾ.ಅಹ್ಮದ್ ಪಟೇಲ್,ನಿಂಗಣ್ಣ ಹುಳಗೋಳಕರ್, ಸದಾನಂದ ಕುಂಬಾರ, ಸಂಗೀತಾ ಶರಣಪ್ಪ ಜೋಗೂರ, ಸುನಂದಾ ನಾಗಣ್ಣ ಪಾಟೀಲ,ನಾರಾಯಣರೆಡ್ಡಿ ದಂಡಗುಲಕರ್, ಜಗದೀಶ ಪಾಟೀಲ, ಕಾರ್ಯನಿರ್ವಾಹಕ ವ್ಯವಸ್ಥಾಪಕ ನಿಂಗಣ್ಣ ಸಂಗಾವಿಕರ್ ಸೇರಿದಂತೆ ನೂರಾರು ಷೇರು ಹೂಡಿಕೆದಾರರು ಪಾಲ್ಗೊಂಡಿದ್ದರು.

emedia line

Recent Posts

371 (ಜೆ) ವಿಧಿಯ ನಿಬಂಧನೆಗಳ ಪರಿಣಾಮಕಾರಿ ಅನುμÁ್ಠನಕ್ಕೆ ಒತ್ತಾಯ

ಕಲಬುರಗಿ: ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯು, ಬೆಂಗಳೂರಿನಲ್ಲಿ ಕಲ್ಯಾಣ ಕರ್ನಾಟಕ ಭಾಗದ ಚುನಾಯಿತ ಪ್ರತಿನಿಧಿಗಳು ಮತ್ತು ಸಚಿವರ ಸಭೆ ನಡೆಸಿ,…

50 mins ago

ಮರಗಮ್ಮ ದೇವಿ ಮೂರ್ತಿ ಗಂಗಾಸ್ನಾನ | ಎಂಟು ಗಂಟೆಗಳ ಕಾಲ ಮೆರವಣಿಗೆ

ಸುರಪುರ: ಇಲ್ಲಿಯ ರಂಗಂಪೇಟೆ-ತಿಮ್ಮಾಪುರದ ಆರಾಧ್ಯ ದೇವತೆ ಮರಗಮ್ಮ ದೇವಿಯ ನೂತನ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ದೇವಿಯ ಬೆಳ್ಳಿಯ ಮೂರ್ತಿ ಗಂಗಾಸ್ನಾನ…

55 mins ago

ಒತ್ತಡ ನಿಭಾಯಿಸಲು ಪರಿಹಾರ ಒದಗಿಸುವುದು ಯುವ ಸ್ಪಂದನೆ ಉದ್ದೇಶ

ಸುರಪುರ: ಯುವ ಸಬಲೀಕರಣ, ಅರೋಗ್ಯ ಜೀವನಶೈಲಿ,ಲೈಂಗಿಕತೆ ಮತ್ತು ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ನಿಭಾಯಿಸುತ್ತಿರುವ ಸವಾಲುಗಳು, ಭಾವನಾತ್ಮಕ ಸಮಸ್ಯೆಗಳು ಭಾವನೆಗಳ ನಿಭಾಯಿಸುವಿಕೆ,ನೆನಪಿನ…

59 mins ago

ಶಹಾಬಾದ: ಸಂಪೂರ್ಣತಾ ಅಭಿಯಾನ ಉತ್ಸವಕ್ಕೆ ಚಾಲನೆ

ಶಹಾಬಾದ: ನೀತಿ ಆಯೋಗವು ಮಾನವ ಅಭಿವೃದ್ಧಿ ಸೂಚಕಗಳಲ್ಲಿ ಹಿಂದುಳಿದ ತಾಲೂಕಗಳಿಗೆ ಆರೋಗ್ಯ, ಪೆÇೀಷಣೆ, ಕೃಷಿ ಮೇಲೆ ಕೇಂದ್ರೀಕರಿಸಿದ ಸಂಪೂರ್ಣತಾ ಅಭಿಯಾನ…

1 hour ago

ಗಿಡ-ಮರಗಳ ಸಂರಕ್ಷಣೆ ಮಾಡದಿದ್ದರೇ ಪ್ರಕೃತಿಗೆ ಗಂಡಾಂತರ ತಪ್ಪಿದ್ದಲ್ಲ

ಶಹಾಬಾದ: ಕೇವಲ ಒಂದು ದಿನ ವನಮಹೋತ್ಸವ ಪರಿಸರ ದಿನಾಚರಣೆಯಂತಹ ಕಾರ್ಯಕ್ರಮ ಮಾಡಿದರೆ ಸಾಲದು, ಬದಲಾಗಿ ಗಿಡ-ಮರಗಳ ಸಂರಕ್ಷಣೆ ಮಾಡುವುದು ಅವಶ್ಯವಾಗಿದೆ.…

1 hour ago

ಬಡವರ ಪರವಾಗಿ ಕೆಲಸ ಮಾಡಿದ ದೀಮಂತ ನಾಯಕ ಬಾಬು ಜಗಜೀವನರಾಮ

ಶಹಾಬಾದ: ತುಳಿತಕ್ಕೆ ಒಳಗಾದವರ ಹಾಗೂ ಬಡವರ ಪರವಾಗಿ ಕೆಲಸ ಮಾಡಿದ ದೀಮಂತ ನಾಯಕ ಬಾಬು ಜಗಜೀವನರಾಮರಾಗಿದ್ದರು ಎಂದು ಕಾರ್ಮಿಕ ಪ್ರಧಾನ…

1 hour ago