ಶಹಾಬಾದ:ಹೊನಗುಂಟಾ ಗ್ರಾಮದ ಭೀಮನಗರದ ದಲಿತ ಸಮುದಾಯದವರಿಗೆ ಸರಕಾರದಿಂದ ರುದ್ರಭೂಮಿ ಒದಗಿಸಬೇಕೆಂದು ಒತ್ತಾಯಿಸಿ ಸೋಮವಾರ ದಲಿತ ವಿದ್ಯಾರ್ಥಿ ಒಕ್ಕೂಟದ ವತಿಯಿಂದ ತಹಸೀಲ್ದಾರ ಸುರೇಶ ವರ್ಮಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ದಲಿತ ವಿದ್ಯಾರ್ಥಿ ಒಕ್ಕೂಟದ ತಾಲೂಕಾ ಸಂಚಾಲಕ ಪೂಜಪ್ಪ ಮೇತ್ರೆ, ಈಗಾಗಲೇ ಹೊನಗುಂಟಾ ಗ್ರಾಮದ ಭೀಮನಗರದಲ್ಲಿ ಸುಮಾರು 150ಕ್ಕೂ ಹೆಚ್ಚು ದಲಿತ ಸಮುದಾಯಗಳಿವೆ.ಅದರಲ್ಲಿ ಸರಿಸುಮಾರು ಏಳೆಂಟು ಜನರಿಗೆ ಮಾತ್ರ ಸ್ವಂತ ಭೂಮಿ ಹೊಂದಿದ್ದು, ಉಳಿದವರಿಗೆ ಭೂಮಿಯಿಲ್ಲದ ಕಾರಣ ಶವ ಸಂಸ್ಕಾರ ಮಾಡಲು ತೊಂದರೆಯಾಗುತ್ತಿದೆ.ಸುಮಾರು ಹತ್ತು ದಶಕಗಳಿಂದ ಭೂಮಿ ಇದ್ದವರಿಗೆ ಮನವಿ ಮಾಡಿ ಶವ ಸಂಸ್ಕಾರ ಮಾಡುತ್ತ ಬಂದಿದ್ದೆವೆ.ಈಗ ನಮ್ಮ ದಲಿತ ಸಮುದಾಯದವರಿಗೆ ಸರಕಾರದಿಂದ ರುದ್ರಭೂಮಿ ಒದಗಿಸಿದರೇ ಬಹಳ ಅನುಕೂಲವಾಗುತ್ತದೆ.ಕೂಡಲೇ ಈ ಬಗ್ಗೆ ಕ್ರಮಕೈಗೊಳ್ಳಬೇಕೆಂದು ತಹಸೀಲ್ದಾರರಿಗೆ ಮನವಿ ಮಾಡಿದರು.
ದಲಿತ ವಿದ್ಯಾರ್ಥಿ ಒಕ್ಕೂಟದ ಸಂಘಟನಾ ಸಂಚಾಲಕ ಶರಣಬಸಪ್ಪ.ಎಮ್,ರಾಘವೇಂದ್ರ ಗುಡೂರ್, ಮಲ್ಲಿಕಾರ್ಜುನ ಗಿರೇನೂರ, ಸಂತೋಷ ಹಾದಿಮನಿ,ಅರ್ಜುನ ಮೇತ್ರೆ, ಮೈಲಾರಿ ಓಣಿ, ಬಸವರಾಜ ಶಾಸ್ತ್ರಿ, ಚಂದ್ರಾಮ ಹಲಕಟ್ಟಿ, ನಾಗಪ್ಪ ನ್ಯಾವಿನಿ, ವಿಶ್ವ ಯನಗುಂಟಿ, ಮೌನೇಶ ಕೌಂಟಿಗಿ, ನಿಂಗಪ್ಪ ನ್ಯಾವಿನಿ, ಚನ್ನಮಲ್ಲಪ್ಪ, ಶಿವಯೋಗಿ ಜುಂಜನಿ ಇತರರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…