ಸುರಪುರ: ರಾಜ್ಯದ ಸಮಗ್ರ ಅಭಿವೃಧ್ಧಿ ಎಂಬುದು ಕೇವಲ ಬಿಜೆಪಿ ಪಕ್ಷದಿಂದ ಸಾಧ್ಯವಿದೆ.ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶದ ಅಭಿವೃದ್ಧಿಗಾಗಿ ಇಡೀ ತಮ್ಮ ಬದುಕನ್ನು ಸವೀಸಿದ ಒಬ್ಬ ಧೀಮಂತ ನಾಯಕರಾಗಿದ್ದಾರೆ.ಅಲ್ಲದೆ ಯಡಿಯೂರಪ್ಪನವರು ಈ ರಾಜ್ಯ ಕಂಡ ಮೇಧಾವಿ ಮುಖ್ಯಮಂತ್ರಿಯಾಗಿದ್ದಾರೆ ಎಂದು ಶಾಸಕ ನರಸಿಂಹ ನಾಯಕ (ರಾಜುಗೌಡ) ಮಾತನಾಡಿದರು.
ತಾಲೂಕಿನ ಆಲ್ದಾಳ ಗ್ರಾಮದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಬಿಜೆಪಿಗೆ ಸೇರ್ಪಡೆಗೊಳಿಸಿಕೊಂಡು ಮಾತನಾಡಿದ ಅವರು,ನಮ್ಮ ಸರಕಾರ ರಾಜ್ಯದ ಅಭಿವೃಧ್ಧಿಗಾಗಿ ಅನೇಕ ಯೋಜನೆಗಳನ್ನು ನೀಡಿದೆ,ಅಲ್ಲದೆ ನಾನು ಕೂಡ ತಾಲೂಕಿನ ಅಭೀವೃಧ್ಧಿಗಾಗಿ ಗ್ರಾಮಗಳಲ್ಲಿ ಸಿಸಿ ರಸ್ತೆ ಶಾಲೆ ಸಮುದಾಯ ಭವನ ಕುಡಿಯುವ ನೀರು ಮತ್ತು ನೀರಾವರಿಗಾಗಿ ಅಪಾರ ಪ್ರಮಾಣದ ಅನುದಾನವನ್ನು ತಂದು ರೈತರ ನೆರವಿಗೆ ಸದಾಕಾಲ ಇರುವುದಾಗಿ ತಿಳಿಸಿದರು.
ನಂತರ ಮುಖಂಡರಾದ ರಾಜಗೋಪಾಲ ನಾಯಕ ಜಹಾಗಿರದಾರ ಲಕ್ಷ್ಮಣ ಕಟ್ಟಿಮನಿ ಮಂಜುನಾಥ ಕಟ್ಟಿಮನಿ ರಾಮಣ್ಣ ಕಟ್ಟಿಮನಿ ದುರಗಪ್ಪ ಕಟ್ಟಿಮನಿ ದುರಗಪ್ಪ ಹುಣಸಗಿ ಮುದಕಪ್ಪ ಚಿನ್ನಾಕಾರ ಹೈಯಾಳಪ್ಪ ಕಟ್ಟಿಮನಿ ಕಾಶಿನಾತ ದಿವಾಕರ ರಾಘವೇಂದ್ರ ಕಟ್ಟಿಮನಿ ಸೇರಿದಂತೆ ಅನೇಕರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ರಾಜಾ ಹನಮಪ್ಪ ನಾಯಕ (ತಾತಾ) ಜಿಲ್ಲಾ ಪಂಚಾಯತಿ ಸದಸ್ಯ ಬಸವರಾಜ ಸ್ಥಾವರಮಠ ಮಾಜಿ ಜಿ.ಪಂ ಅಧ್ಯಕ್ಷ ಯಲ್ಲಪ್ಪ ಕುರಕುಂದಿ ಹೆಚ್.ಸಿ.ಪಾಟೀಲ ಎಪಿಎಂಸಿ ಅಧ್ಯಕ್ಷ ದೇವಣ್ಣ ಮಲಗಲದಿನ್ನಿ ಸುರಪುರ ಮಂಡಲ ಅಧ್ಯಕ್ಷ ಮೇಲಪ್ಪ ಗುಳಗಿ ಶಾಂತಗೌಡ ಚೆನ್ನಪಟ್ಟಣ ಸಿದ್ದನಗೌಡ ಕರಿಬಾವಿ ಸಾಬಣ್ಣ ಪೂಜಾರಿ ಬಾಲಗೌಡ ಸೇರಿದಂತೆ ಅನೇಕರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…