ಕಲಬುರಗಿ: ಜಿಲ್ಲೆಯ ಮೊದಲನೇ ಹಂತದಲ್ಲಿ ಡಿಸೆಂಬರ್ 22 ರಂದು ನಡೆಯುವ 6 ತಾಲೂಕಿನ 126 ಗ್ರಾಮ ಪಂಚಾಯತಿಗಳ 2220 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸಲು ಜಿಲ್ಲಾಧಿಕಾರಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಚುನಾವಣಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರು ಸೋಮವಾರ ಅಧಿಸೂಚನೆ ಹೊರಡಿಸಿದ್ದಾರೆ.
ಮೊದಲನೇ ಹಂತದಲ್ಲಿ ಕಲಬುರಗಿ ತಾಲೂಕಿನ 28, ಆಳಂದ ತಾಲೂಕಿನ 36, ಅಫಜಲಪೂರ ತಾಲೂಕಿನ 28, ಕಮಲಾಪೂರ ತಾಲೂಕಿನ 16, ಕಾಳಗಿ ತಾಲೂಕಿನ 14 ಹಾಗೂ ಶಹಾಬಾದ ತಾಲೂಕಿನ 4 ಗ್ರಾಮ ಪಂಚಾಯತಿಗಳು ಸೇರಿದಂತೆ ಒಟ್ಟು 126 ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಯಲಿದೆ.
ನಾಮಪತ್ರಗಳನ್ನು ಸಲ್ಲಿಸಲು ಡಿಸೆಂಬರ್ 11 ಕೊನೆಯ ದಿನವಾಗಿದ್ದು, ಡಿಸೆಂಬರ್ 12 ರಂದು ನಾಮಪತ್ರಗಳ ಪರಿಶೀಲನಾ ಕಾರ್ಯ ನಡೆಯಲಿದೆ. ಡಿಸೆಂಬರ್ 14 ರಂದು ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಕೊನೆ ದಿನವಾಗಿರುತ್ತದೆ. ಮತದಾನ ಅವಶ್ಯವಿದ್ದರೆ ಡಿಸೆಂಬರ್ 22 ರಂದು ಬೆಳಿಗ್ಗೆ 7 ರಿಂದ ಸಾಯಂಕಾಲ 5 ಗಂಟೆಯವರೆಗೆ ಮತ್ತು ಮರು ಮತದಾನದ ಅವಶ್ಯವಿದ್ದರೆ ಡಿಸೆಂಬರ್ 24 ರಂದು ನಡೆಸಲಾಗುವುದು. ಮತ ಎಣಿಕೆಯು ಡಿಸೆಂಬರ್ 30 ರಂದು ಬೆಳಿಗ್ಗೆ 8 ಗಂಟೆಯಿಂದ ತಾಲೂಕು ಕೇಂದ್ರಗಳಲ್ಲಿ ನಡೆಸಲಾಗುವುದು.
ತಾಲೂಕುವಾರು ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿ ಸಂಖ್ಯೆ, ಗ್ರಾಮದ ಹೆಸರು ಹಾಗೂ ಸದಸ್ಯ ಸ್ಥಾನಗಳ ವಿವರ ಇಂತಿದೆ.
ಕಲಬುರಗಿ ತಾಲೂಕು: 01-ಅವರಾದ(ಬಿ) (17 ಸ್ಥಾನ), 02-ಅಲಗೋಡ (11 ಸ್ಥಾನ), 03-ಕಲ್ಲಹಂಗರಗಾ (20 ಸ್ಥಾನ), 04-ಕುಮಸಿ (16 ಸ್ಥಾನ), 05-ಭೂಪಾಲ ತೆಗನೂರ-(24 ಸ್ಥಾನ), 06-ಹರಸೂರ (17 ಸ್ಥಾನ), 07-ಶ್ರೀನಿವಾಸ ಸರಗಡಿ (19 ಸ್ಥಾನ), 08-ಸಣ್ಣೂರ (25 ಸ್ಥಾನ), 09-ನಂದೂರ (ಕೆ) (18 ಸ್ಥಾನ), 10-ಕುಸನೂರ-(19 ಸ್ಥಾನ) , 11-ಹಾಗರಗಾ (15 ಸ್ಥಾನ), 12-ನಂದಿಕೂರ (32 ಸ್ಥಾನ), 13-ಖಣದಾಳ (21 ಸ್ಥಾನ), 14-ಫರಹತಾಬಾದ (20 ಸ್ಥಾನ), 15-ಸರಡಗಿ(ಬಿ) (16 ಸ್ಥಾನ), 16-ಕಿರಣಗಿ (14 ಸ್ಥಾನ), 17-ಫಿರೋಜಾಬಾದ (16 ಸ್ಥಾನ), 18-ಕವಲಗಾ (ಬಿ) (16 ಸ್ಥಾನ), 19-ಬಸವಪಟ್ಟಣ (17 ಸ್ಥಾನ), 20-ಮಿಣಜಗಿ (15 ಸ್ಥಾನ), 21-ಹೇರೂರ (ಬಿ) (15 ಸ್ಥಾನ), 22-ಪಟ್ಟಣ ( 18 ಸ್ಥಾನ), 23- ಭೀಮಳ್ಳಿ (29 ಸ್ಥಾನ), 24-ಶರಣಸಿರಸಗಿ (17 ಸ್ಥಾನ), 25-ಮೇಳಕುಂದಾ.ಬಿ (21 ಸ್ಥಾನ), 26-ಸಾವಳಗಿ ಬಿ. (20 ಸ್ಥಾನ), 27-ಕಡಣಿ (9 ಸ್ಥಾನ) ಹಾಗೂ 28-ತಾಜಸುಲ್ತಾನಪುರ (26 ಸ್ಥಾನ).
ಆಳಂದ ತಾಲೂಕು: 01-ಆಳಂಗಾ (12 ಸ್ಥಾನ), 02-ತಡೋಳಾ (14 ಸ್ಥಾನ), 03-ಖಜೂರಿ (17 ಸ್ಥಾನ), 04-ಹೋದಲೂರ (21 ಸ್ಥಾನ), 05-ರುದ್ರವಾಡಿ (25 ಸ್ಥಾನ), 06-ಬೆಳಮಗಿ (16 ಸ್ಥಾನ), 07-ಭೋದನಾ (15 ಸ್ಥಾನ), 08-ಕಮಲಾನಗರ (18 ಸ್ಥಾನ), 09-ಚಿಂಚನಸೂರ (16 ಸ್ಥಾನ), 10-ಗೋಳಾ ಬಿ. (14 ಸ್ಥಾನ), 11-ನರೋಣಾ (20 ಸ್ಥಾನ), 12-ಹಳ್ಳಿಸಲಗರ (16 ಸ್ಥಾನ), 13-ಕೋಡಲಹಂಗರಗಾ (12 ಸ್ಥಾನ), 15-ತಡಕಲ (19 ಸ್ಥಾನ), 17-ಮುನ್ನಳ್ಳಿ (14 ಸ್ಥಾನ), 18-ಕಿಣ್ಣಿಸುಲ್ತಾನ್ (22 ಸ್ಥಾನ), 20-ಪಡಸಾವಳಿ (15 ಸ್ಥಾನ), 21-ಹೆಬಳಿ (17 ಸ್ಥಾನ), 22-ಸರಸಂಬಾ (17 ಸ್ಥಾನ), 23-ಹಿರೋಳಿ (16 ಸ್ಥಾನ), 24-ಸಾವಳೇಶ್ವರ (13 ಸ್ಥಾನ), 25-ದರ್ಗಾಶಿರೂರ (12 ಸ್ಥಾನ), 26-ಮೋಘಾ ಕೆ. (11 ಸ್ಥಾನ), 27-ಮಾದನ ಹಿಪ್ಪರಗಾ (24 ಸ್ಥಾನ), 28-ನಿಂಬಾಳ (15 ಸ್ಥಾನ), 29-ಹಡಗಲಿ (16 ಸ್ಥಾನ), 30-ಯಳಸಂಗಿ (19 ಸ್ಥಾನ), 31-ಮಾಡಿಯಾಳ (17 ಸ್ಥಾನ), 32-ಕವಲಗಾ (14 ಸ್ಥಾನ), 33-ಜಿಡಗಾ (19 ಸ್ಥಾನ), 35-ಕೋರಳ್ಳಿ (19 ಸ್ಥಾನ), 36-ಧಂಗಾಪುರ (13 ಸ್ಥಾನ), 39-ನಿಂಬರ್ಗಾ (24 ಸ್ಥಾನ), 40-ಸುಂಟನೂರ (13 ಸ್ಥಾನ), 41-ಕಡಗಂಚಿ (21 ಸ್ಥಾನ), 42-ಕೆರಿಅಂಬರ್ಗಾ (14 ಸ್ಥಾನ).
ಅಫಜಲಪುರ ತಾಲೂಕು: 01-ಮಣ್ಣೂರ (33 ಸ್ಥಾನ), 02-ರಾಮನಗರ (08 ಸ್ಥಾನ), 03-ಮಾಶಾಳ (28 ಸ್ಥಾನ), 04-ಕರಜಗಿ (20 ಸ್ಥಾನ), 05-ಉಡಚಾಣ (18 ಸ್ಥಾನ), 06-ಅಳ್ಳಗಿ ಬಿ. (13 ಸ್ಥಾನ), 07-ಗೌರ ಬಿ. (15 ಸ್ಥಾನ), 08-ಭಂಕಲಗಾ (20 ಸ್ಥಾನ), 09-ಬಳೂರ್ಗಿ (15 ಸ್ಥಾನ), 10-ಬಡದಾಳ (17 ಸ್ಥಾನ), 11-ಮಲ್ಲಾಬಾದ (21 ಸ್ಥಾನ), 12-ನಂದರಗಾ (18 ಸ್ಥಾನ), 13-ಕಲ್ಲೂರ (20 ಸ್ಥಾನ), 14-ಘತ್ತರಗಾ (16 ಸ್ಥಾನ), 15-ಆನೂರ (09 ಸ್ಥಾನ), 16-ತೆಲ್ಲೂರ (14 ಸ್ಥಾನ), 17-ರೇವೂರ ಬಿ. (16 ಸ್ಥಾನ), 18-ದೇವಲ ಗಾಣಗಾಪುರ (20 ಸ್ಥಾನ), 19-ಅತನೂರ (17 ಸ್ಥಾನ), 20-ಚೌಡಾಪುರ (18 ಸ್ಥಾನ), 21-ಭೈರಾಮಡಗಿ (15 ಸ್ಥಾನ), 22-ಮದರಾ ಬಿ. (16 ಸ್ಥಾನ), 23-ಕೋಗನೂರ (16 ಸ್ಥಾನ), 24-ಗೂಡೂರು (22 ಸ್ಥಾನ), 25-ಹಸರಗುಂಡಗಿ (20 ಸ್ಥಾನ), 26-ಬಂದರವಾಡ (17 ಸ್ಥಾನ), 27-ಗೊಬ್ಬುರ ಬಿ. (18 ಸ್ಥಾನ), 28-ಬಿದನೂರ (18 ಸ್ಥಾನ).
ಕಮಲಾಪುರ ತಾಲೂಕು: 01-ಡೊಂಗರಗಾಂವ (18 ಸ್ಥಾನ), 02-ಕಿಣ್ಣಿಸಡಕ (17 ಸ್ಥಾನ), 04-ಸೊಂತ (19 ಸ್ಥಾನ), 05-ಓಕಳಿ (16 ಸ್ಥಾನ), 06-ಕಲಮೂಡ (20 ಸ್ಥಾನ), 07-ಮಹಾಗಾಂವ (24 ಸ್ಥಾನ), 08-ಕುರಿಕೋಟಾ (14 ಸ್ಥಾನ), 09-ಜಿವಣಗಿ (17 ಸ್ಥಾನ), 10-ನಾಗೂರ (16 ಸ್ಥಾನ), 11-ಹೊಳಕುಂದಾ (15 ಸ್ಥಾನ), 12-ಬಬಲಾದ ಐ.ಕೆ. (16 ಸ್ಥಾನ), 13-ವಿ.ಕೆ. ಸಲಗರ (13 ಸ್ಥಾನ), 14-ಅಂಬಲಗಾ (15 ಸ್ಥಾನ), 15-ಶ್ರೀಚಂದ (18 ಸ್ಥಾನ), 16-ಲಾಡಮುಗುಳಿ (12 ಸ್ಥಾನ), 18-ಚೇಂಗಟಾ (20 ಸ್ಥಾನ).
ಕಾಳಗಿ ತಾಲೂಕು: 01-ಅರಣಕಲ (16 ಸ್ಥಾನ), 02-ಬೆಡಸೂರ (10 ಸ್ಥಾನ), 03-ಕಂದಗೋಳ (12 ಸ್ಥಾನ), 04-ಹೆಬ್ಬಾಳ (21 ಸ್ಥಾನ), 05-ಚಿಂಚೋಳಿ ಎಚ್. (11 ಸ್ಥಾನ), 06-ಗೋಟುರ (21 ಸ್ಥಾನ), 07-ಕೊಡದೂರ (18 ಸ್ಥಾನ), 08-ರಾಜಾಪೂರ (15 ಸ್ಥಾನ), 09-ಟೆಂಗಳಿ (19 ಸ್ಥಾನ), 10-ಕೋರವಾರ (16 ಸ್ಥಾನ), 12-ಹಲಚೇರಾ (28 ಸ್ಥಾನ), 13-ಕೋಡ್ಲಿ (24 ಸ್ಥಾನ), 14-ರಟಕಲ (20 ಸ್ಥಾನ), 15-ಪಸ್ತಾಪುರ (8 ಸ್ಥಾನ).
ಶಹಾಬಾದ ತಾಲೂಕು: 01-ಭಂಕೂರ (31 ಸ್ಥಾನ), 02-ಮರತೂರ (20 ಸ್ಥಾನ), 03-ತೊನಸಳ್ಳಿ ಎಸ್. (22 ಸ್ಥಾನ), 04-ಹೊನಗುಂಟಾ (17 ಸ್ಥಾನ).
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…