ಶರಣರ ವಚನಗಳು ಮನುಕುಲದ ದಾರಿದೀಪವಾಗಿವೆ : ಹಾರಕೂಡ ಶ್ರೀಗಳು

ಕಲಬುರಗಿ: ಸಕಲ ಜೀವಾತ್ಮರಿಗೆ ಲೇಸನ್ನೆ ಬಯಸಿದ ಬಸವಾದಿ ಶರಣರ ವಚನಗಳು ಮನುಕುಲದ ದಾರಿದೀಪವಾಗಿವೆ,ಅವುಗಳನ್ನು ಅರಿತು ನಡೆದಾಗ ಜಗತ್ತಿನ ಏಳಿಗೆ ಸಾಧ್ಯವಾಗುತ್ತದೆ ಎಂದು ಹಾರಕೂಡ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ. ಚೆನ್ನವೀರ ಶಿವಾಚಾರ್ಯರು ಅಭಿಪ್ರಾಯಪಟ್ಟರು.

ನಗರದ ಅಂಬಾರಾಯ ಅಷ್ಠಗಿ ಯವರ ಮನೆಯಲ್ಲಿ “ಮಹಾಮನೆ” ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಇಂದಿನ ಸಂಕಷ್ಟಮಯ ಸಂದರ್ಭದಲ್ಲಿ ಪ್ರಕೃತಿಯನ್ನು ಆರಾಧಿಸುವುದರ ಜೋತೆಗೆ ಭಕ್ತಿ ಮಾರ್ಗದ ಮೂಲಕ ಮನುಷ್ಯ ನೆಮ್ಮದಿಯನ್ನು ಕಂಡು ಕೊಳ್ಳಬಹುದಾಗಿದೆ ಎಂದು ಶ್ರೀಗಳು ನುಡಿದರು. ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಅಂಬಾರಾಯ ಅಷ್ಠಗಿ ಮಾತನಾಡಿ, ಪೂಜ್ಯರಾದ ಹಾರಕೂಡ ಶ್ರೀಗಳು ನಮ್ಮ ಮನೆಗೆ ಬಂದು ಆಶೀರ್ವಚನ ನೀಡಿರುವುದು ಇಲ್ಲಿ ಉಪಸ್ಥಿತರಿರುವ ಸಕಲ ಭಕ್ತರ ಸೌಭಾಗ್ಯ ಎಂದರು.

ಮುಂದುವರೆದು ಮಾತನಾಡಿದ ಅವರು, ಇಂದಿನ ವಿಷಮ ಪರಿಸ್ಥಿತಿಯಲ್ಲಿ ಶರಣರ ವಚನಗಳು ಹಾಗೂ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು ಈ ದೇಶಕ್ಕೆ ನೀಡಿದ ಸಂವಿಧಾನವು ಮನುಕುಲದ ಸ್ವಚ್ಛ ಮತ್ತು ಆನಂದಮಯ ಬದುಕಿಗೆ ದಿವ್ಯೌಷಧವಾಗಿವೆ. ಬಸವಾದಿ ಶರಣರ ವಚನಗಳು ಹಾಗೂ ಡಾ.ಅಂಬೇಡ್ಕರ್ ರು ರಚಿಸಿದ ಸಂವಿಧಾನ ಸೂರ್ಯ ಚಂದ್ರರಿರುವ ವರೆಗೆ ಪ್ರಚಲಿತವಾಗಿರುತ್ತವೆ ಎಂದು ಅಂಬಾರಾಯ ಅಷ್ಠಗಿ ಅಭಿಪ್ರಾಯಿಸಿದರು.ಈ ಸಂದರ್ಭದಲ್ಲಿ ಕುಮಾರಿ ಅನುಷ್ಕಾ ಅಷ್ಠಗಿ ಹಾಗೂ ಆರಾಧ್ಯ ಅಷ್ಠಗಿ ಶರಣರ ವಚನಗಳನ್ನು ವಾಚಿಸಿದರು.

ಈ ಸಂದರ್ಭದಲ್ಲಿ ಶ್ರೀಗಳ ಆಪ್ತ ಕಾರ್ಯದರ್ಶಿ ಅಪ್ಪಣ್ಣ, ಪತ್ರಿಕಾ ಛಾಯಾಗ್ರಾಹಕ ರಾಜು ಕೋಷ್ಠಿ, ಕಲಬುರಗಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಸುಜಾತಾ ಅಂಬಾರಾಯ ಅಷ್ಠಗಿ, ಬಿಜೆಪಿ ಮುಖಂಡ ಹಾಗೂ ಚಿಂತಕ ಪ್ರೊ.ಯಶವಂತರಾಯ ಅಷ್ಠಗಿ, ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷರಾದ ಶಿವ ಅಷ್ಠಗಿ, ವನೀತಾ ಅಷ್ಠಗಿ, ಶ್ರೀಮಂತ ಕೋಟ್ರೆ, ಸುನಿಲ್ ಕೋಟ್ರೆ, ಪ್ರಿಯಾಂಕಾ ಅಷ್ಠಗಿ, ವಿಜೇತಾ ಕೋಟ್ರೆ, ಅಶುತೋಷ, ಅನಿರುದ್ಧ ಅನುಷ್ಕಾ, ಆರಾಧ್ಯ ಮತ್ತು ಆರುಷ ಸೇರಿದಂತೆ ಇತರರಿದ್ದರು.

emedialine

Recent Posts

ರಾಜ್ಯೋತ್ಸವ ಪ್ರಶಸ್ತಿ ಪಡೆದ ಕನ್ನಡ ಸಾಹಿತ್ಯ ಸಂಘ 82ನೇ ನಾಡಹಬ್ಬ

ಸುರಪುರ: ರಾಜ್ಯದಲ್ಲಿಯೇ ಅತ್ಯುತ್ತಮವಾದ ಕನ್ನಡ ಸಾಹಿತ್ಯ ಸಂಘ ಎಂದು ಸರಕಾರ ಗುರುತಿಸಿ ಕಳೆದ ವರ್ಷ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ,ಇದಕ್ಕೆ ಅನೇಕ…

1 hour ago

ದಸರಾ ಸಿ.ಎಂ ಕಪ್ ಕ್ರೀಡಾಕೂಟಕ್ಕೆ ಶಾಸಕ ಅಲ್ಲಂಪ್ರಭು ಪಾಟೀಲ್ ಚಾಲನೆ

ಕಲಬುರಗಿ: ನಗರದ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ದಸರಾ ಸಿ.ಎಂ ಕಪ್ ಕ್ರೀಡಾಕೂಟಕ್ಕೆ ಶಾಸಕ ಅಲ್ಲಂಪ್ರಭು ಪಾಟೀಲ್ ಅವರು ಚಾಲನೆ…

1 hour ago

ಪರಿಷತ್ತಿನ ಸಲಕರಣೆಗಳ ಖರೀದಿಗಾಗಿ 5 ಲಕ್ಷ ರೂ. ಅನುದಾನದ: ಎಂಎಲ್ಸಿ ಕಮಕನೂರ ಭರವಸೆ

ಕಲಬುರಗಿ: ಸದಾ ಕನ್ನಡಪರ ಚಟುವಟಿಕೆಗಳನ್ನು ಕೈಗೊಳ್ಳುತ್ತಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ಮಾಣಗೊಂಡಿರುವ ಸಾಹಿತ್ಯ ಮಂಟಪಕ್ಕೆ ಅಗತ್ಯವಿರುವ ಸಲಕರಣೆಗಳ ಖರೀದಿಗೆ…

3 hours ago

ತಳವಾರ ನೌಕರಿಗಾಗಿ ಸಿಂಧುತ್ವ ಪ್ರಮಾಣ ಪತ್ರ ಇತರೆ ಸಮಸ್ಯೆಗಳ ಪರಿಹಾರಕ್ಕೆ ಸಚಿವರಿಗೆ ಮನವಿ

ಬೆಂಗಳೂರು: ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕ ಕಲಬುರಗಿ ವತಿಯಿಂದ ರವಿವಾರ ತಳವಾರ ಸಮುದಾಯದ ಸರಕಾರಿ ನೌಕರರ ಸಿಂಧುತ್ವ…

3 hours ago

ಜೀವನದಲ್ಲಿ ಸವಾರ್ಂಗೀಣ ಸ್ವಾಸ್ಥ್ಯ ಸಾಧಿಸಲು ಭಾರತೀಯ ಜ್ಞಾನ ವ್ಯವಸ್ಥೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರ

ಕಲಬುರಗಿ; ಪ್ರಾಚೀನ ಭಾರತೀಯ ಜ್ಞಾನ ವ್ಯವಸ್ಥೆಯು ಜೀವನದಲ್ಲಿ ಸವಾರ್ಂಗೀಣ ಆರೋಗ್ಯ ಮತ್ತು ಸ್ವಾಸ್ಥ್ಯವನ್ನು ಸಾಧಿಸಲು ಎಲ್ಲಾ ಸಮಸ್ಯೆಗಳಿಗೆ ಉತ್ತರ ಮತ್ತು…

3 hours ago

ಕಾವ್ಯ ದೊಂಬರಾಟವಲ್ಲ: ಕಾವ್ಯ ಸಂಸ್ಕೃತಿ ಯಾನಕ್ಕೆ ಚಾಲನೆ

ಕಲಬುರಗಿ: 'ಕಾವ್ಯ ದೊಂಬರಾಟವಲ್ಲ. ನಿಜವಾದ ಹಸಿವು ಗುರುತಿಸುವುದು ಕಾವ್ಯ' ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.‌ಬಸವರಾಜ ಸಾದರ ಅಭಿಪ್ರಾಯ…

4 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420