ಬಿಸಿ ಬಿಸಿ ಸುದ್ದಿ

ಐತಿಹಾಸಿ ಕೊಂಚುರು ಹನುಮಾನ ಜಾತ್ರೆ ರದ್ದು

ವಾಡಿ: ಕೋವಿಡ್ ಹಾಗೂ ಗ್ರಾಮ ಪಂಚಾಯಯಿ ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆ ಪಟ್ಟಣದ ಹತ್ತಿರದ ಐತಿಹಾಸಿ ಕೊಂಚುರು ಹನುಮಾನ ಜಾತ್ರಾ ಮಹೋತ್ಸವ ರದ್ದು ಮಡಿರುವುದಾಗಿ ಚಿತ್ತಾಪುರ ತಹಶೀಲ್ದಾರರ ಉಮಾಕಾಂತ ಹಳ್ಳೆ ತಿಳಿಸಿದ್ದಾರೆ.

ಜಾತ್ರೆ ನಿಮಿತ್ತ ದೇವಸ್ಥಾನ ಸಭಾಂಗಣದಲ್ಲಿ ಆಯೋಜಿಸಿದ  ಶಾಂತಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕೋವಿಡ್-19 ಕಾರಣದಿಂದಾಗಿ ಜಿಲ್ಲಾಡಳಿತ ಜಾತ್ರೆ, ಸಭೆ ಸಮಾರಂಭಗಳನ್ನು ನಡೆಯದಂತೆ ಸೂಚಿಸಿರುವ ಹಿನ್ನೆಲ್ಲೆ, ಈ ವರ್ಷ ಹಲವು ಜಾತ್ರೆಗಳು ರದ್ದು ಪಡಿಸಲಾಗಿದ್ದು, ಈ ನಿಟ್ಟಿನಲ್ಲಿ ಕೊಂಚೂರು ಗ್ರಾಮದಲ್ಲಿ ನಡೆಯುವ ಹನುಮಾನ ಜಾತ್ರೆ ಸಹ ರದ್ದು ಪಡಿಸಲಾಗಿದೆ ಎಂದು ತಿಳಿಸಿದ ಅವರು ಜಾತ್ರೆಯ ಸಂಪ್ರದಾಯದಂತೆ ದೇವಸ್ಥಾನದ ಸಮಿತಿ ವತಿಯಿಂದ ಸರಳ ಹಾಗೂ ಸಾಂಕೇತಿಕವಾಗಿ ಆಚರಿಸುವಂತೆ ಕೊಂಚೂರು, ಬಳವಡಿಗಿ, ಚಾಮನೂರ ಹಾಗೂ ನರಿಬೋಳ ಗ್ರಾಮಸ್ಥರಿಗೆ ಸೂಚಿಸಿದ್ದಾರೆ.

ಜಾತ್ರೆ ಸರಳ ಆಚರಣೆ ತೀರ್ಮಾನಿಸಿರುವುದರಿಂದ ಡಿ.14ರಂದಿ ಕಾರ್ತಿಕ ಹುಣ್ಣಿಮೆಯಂದು ನಡೆಯುವ ಪಲ್ಲಕ್ಕಿ ಉತ್ಸವಕ್ಕೆ ಕೇವಲ 15 ಜನರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ನಿಗದಿತ ಸಮಯದಲ್ಲಿ ಪಲ್ಲಕ್ಕಿ ಉತ್ಸವ ನೆರವೇರಿಸಲು ಗ್ರಾಮಸ್ಥರು ಸಹಕಾರಿಸುವಂತೆ ಕೋರಿದ್ದಾರೆ.

ಡಿ.29 ಹಾಗೂ 30ರಂದು ನಡೆಯುವ ಉಚ್ಚಾಯಿ ಹಾಗೂ ರಥೋತ್ಸವ ಸಂಪೂರ್ಣ ರದ್ದು ಮಾಡಲಾಗಿದೆ. ದೇವಸ್ಥಾನ ಕಮಿಟಿ ಸದಸ್ಯರಿಂದ ಸಂಪ್ರದಾಯದಂತೆ, ಸಂಕೇತವಾಗಿ ರಥಕ್ಕೆ ಪೂಜೆ ಸಲ್ಲಿಸಿ ಸರಳವಾಗಿ ಆಚರಿಸವಂತೆ ಅವರು ಹೇಳಿದರು.

ಬಳವಡಗಿ ಯಲ್ಲಮ್ಮ ದೇವಸ್ಥಾನ ದರ್ಶನಕ್ಕೆ ಅವಕಾಶವಿಲ್ಲ. ಪ್ರತಿ ವರ್ಷ ಕೊಂಚೂರ ಜಾತ್ರೆ ದಿನದಂದೆ ಕೊಂಚೂರು ಗ್ರಾಮದ ಕೊಗಳತೆ ದೂರದಲ್ಲಿರುವ ಬಳವಡಿ ಗ್ರಾಮದಲ್ಲಿ ಯಲ್ಲಮ್ಮ ಜಾತ್ರೆ ಸಹ ರದ್ದು ಮಾಡಲಾಗಿದ್ದು, ಡಿ. 28,29  ಹಾಗೂ 30 ಮೂರು ದಿನಗಳ ಕಾಲ ಸಾರ್ವಜನಿಕರ ದರ್ಶನ ನಿರ್ಭಂದಿಸಿ, ಯಾವುದೇ ಸಾಂಪ್ರದಾಯಿಕ ಕಾರ್ಯಕ್ರಮಗಳು ನಡೆಸದಂತೆ ಆದೇಶ ನೀಡಿದರು.

ಗುಡಂಗಡಿ ತೆರೆಯಲು ಅವಕಾಶವಿಲ್ಲ:  ಜಾತ್ರೆ‌ ರದ್ದಾದ ಕಾರಣ ಗ್ರಾಮಸ್ಥರಾಗಲಿ ಅಥವೆ ಬೇರೆಡೆಯಿಂದ ಬಂದು ಆಟಿಕೆ ಸಾಮಾನು, ಸ್ಟಿಟ್ ಸೇರಿದಂತೆ ಇತರೆ ಅಂಗಡಿಗಳನ್ನು ಹಾಕಲು ಅವಕಾಶ ಇರುವುದಿಲ್ಲ ಎಂದು ತಿಳಸಿದ್ದಾರೆ‌.

ಚಿತ್ತಾಪುರ ಸಿಪಿಐ ಕೃಷ್ಣಪ್ಪ ಕಲ್ಲದೇವರು, ವಾಡಿ ಠಾಣೆ ಪಿಎಸ್ ಐ ವಿಜಯಕುಮಾರ್ ಬಾವಗಿ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಗ್ರಾಮದ ಪ್ರಮುಖರಾದ ಜುಮ್ಮಣ್ಣ ಪೂಜಾರಿ, ದೇವಸ್ಥಾನ ಟ್ರಸ್ಟ್ ಕಾರ್ಯದರ್ಶಿ ವಿಜಯಕುಮಾರ್ ಕುಲಕರ್ಣಿ, ಮಲ್ಲಣ್ಣಗೌಡ ಪೊಲೀಸ್ ಪಾಟೀಲ ಬಳವಡಗಿ, ಗಿರಿಮಲ್ಲಪ್ಪ ಕಟ್ಟಿಮನಿ, ರುದ್ರಮುನಿ ಮಠಪತಿ, ಖಾದರ್ ಪಟೇಲ್, ರಾಜಶೇಖರ ಪಠಪತಿ, ಅರವಿಂದ ಸಾಹುಕಾರ, ಚನ್ನು ಸುಣಗಾರ, ವಿಲಾಸ ಕುಲಕರ್ಣಿ, ಗೋವಿಂದಪ್ಪ ಸಾಹು, ರಮೇಶ. ಡಿ.ಸಿ. ಶಾಂತಿ ಸಭೆಯಲ್ಲಿ ಉಪಸ್ಥಿತರಿದ್ದರು.

emedialine

Recent Posts

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

7 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

7 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

9 hours ago

ವಾಡಿ: “ತಾಯಿ ಹೆಸರಲ್ಲಿ ಒಂದು ಸಸಿ” ಅಭಿಯಾನ

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…

9 hours ago

ವಾಡಿ: ಶ್ಯಾಮ್‌ ಪ್ರಸಾದ್ ಮುಖರ್ಜಿ ಜಯಂತಿ, ಬಾಬು ಜಗಜೀವನ್ ರಾಮ್ ಪುಣ್ಯಸ್ಮರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…

9 hours ago

ನಾಳೆ ವಾಡಿಯಲ್ಲಿ ಕವಿಗೋಷ್ಠಿ

ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಜುಲೈ ಇಂದು ಬೆಳಿಗ್ಗೆ 10:00 ಗಂಟೆಗೆ ಪಟ್ಟಣದ ಡಾ. ಅಂಬೇಡ್ಕರ್…

10 hours ago