ಬಿಸಿ ಬಿಸಿ ಸುದ್ದಿ

ಸರ್ಕಾರವೇ ನೇರವಾಗಿ ಲೂಟಿ ಹೊಡೆಯಲು ದಾರಿ ಮಾಡಿಕೊಡುವ ನೂತನ ವಿಧೇಯಕ: ಆಮ್ ಆದ್ಮಿ ಪಕ್ಷ

ಬೆಂಗಳೂರು: ಸರ್ಕಾರ ತಂದಿರುವ ಬಿಬಿಎಂಪಿ ನೂತನ ವಿದೇಯಕ ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರವನ್ನು ಅಡಗಿಸುವ ಹಾಗೂ ನಿಧಾನಕ್ಕೆ ಕಸಿಯುವ ಹುನ್ನಾರವಾಗಿದೆ. ಅನೇಕ ದೇಶಗಳು ತಮ್ಮ ಒಟ್ಟು ಬಜೆಟ್ಟಿನ ಶೇ 27 ರಷ್ಟು ಹಣವನ್ನು ಮೀಸಲಿಟ್ಟು ಸ್ಥಳೀಯ ಸಂಸ್ಥೆಗಳ ಮೂಲಕ ಯೋಜನೆಗಳನ್ನು ಅನುಷ್ಟಾನಗೊಳಿಸುತ್ತವೆ, ಆದರೆ ಈ ದೂರ್ತ ಬಿಜೆಪಿ ಸರ್ಕಾರ ಸ್ಥಳೀಯ ಸಂಸ್ಥೆಗಳ ಅಧಿಕಾರವನ್ನೇ ಕಿತ್ತುಕೊಂಡು ಇಲ್ಲೂ ವ್ಯಾಪಕವಾದ ಲೂಟಿಗೆ ದಾರಿ ಮಾಡಿಕೊಟ್ಟಿದೆ ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಹೇಳಿದರು.

ಶುಕ್ರವಾರ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು, ಪಾಲಿಕೆ ಸದಸ್ಯರ ಆಸ್ತಿ ವಿವರವನ್ನು ಮೇಯರ್‌ಗೆ ಸಲ್ಲಿಸಬೇಕು ಎಂದು ಹೇಳಿ ಸದಸ್ಯರನ್ನು ರಕ್ಷಿಸುವ ಹುನ್ನಾರ ಅಡಗಿದೆ. ಲೋಕಾಯುಕ್ತ, ಸರ್ಕಾರದ ಮುಖ್ಯ ಪ್ರಧಾನ ಕಾರ್ಯದರ್ಶಿಗಳಿಗೆ ಆಸ್ತಿ ವಿವರವನ್ನು ಪ್ರತಿ ವರ್ಷ ಕಡ್ಡಾಯವಾಗಿ ಸಲ್ಲಿಸದಿದ್ದರೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು ಎನ್ನುವ ಅಂಶವನ್ನು ಸೇರಿಸಬೇಕು. ಕಳೆದ ಬಾರಿ ಸುಮಾರು 120 ಕ್ಕೂ ಹೆಚ್ಚು ಸದಸ್ಯರು ಆಸ್ತಿ ವಿವರ ಸಲ್ಲಿಸದೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.

ಶಾಸಕರ, ಸಂಸದರ ಚೇಲಾಗಳು, ಪಕ್ಷದಗಳಲ್ಲಿ ಇರುವ ಅತೃಪ್ತರನ್ನು ತೃಪ್ತಿ ಪಡಿಸಲು 15 ವಲಯಗಳಾಗಿ ವಿಂಗಡಿಸಿ ವ್ಯಾಪಕ ಭ್ರಷ್ಟಾಚಾರಕ್ಕೆ ಅನುವು ಮಾಡಿಕೊಡಲಾಗಿದೆ. ವಲಯ ಉಸ್ತುವಾರಿಗಳಿಗೆ ಪ್ರತ್ಯೇಕ ಕಚೇರಿ, ಸಿಬ್ಬಂದಿ ಎಂದು ಹೇಳಿ ಜನರ ದುಡ್ಡನ್ನ ವ್ಯರ್ಥವಾಗಿ ಖರ್ಚು ಮಾಡಲು ಸರ್ಕಾರ ಹೊರಟಿದೆ. ಆದ ಕಾರಣ ಈ ವಲಯಗಳನ್ನು 8 ಕ್ಕೆ ಇಳಿಸಬೇಕು ಎಂದರು.

ಎರಡು ಹುದ್ದೆಗಳಲ್ಲಿ ಇರುವವರು ಯಾವ ಸ್ಥಾನವನ್ನು ಉಳಿಸಿಕೊಳ್ಳಬೇಕು ಎನ್ನುವುದನ್ನು 3 ದಿನಗಳಲ್ಲಿ ತಿಳಿಸಬೇಕು ಎಂದು ಆಯ್ಕೆ ಕೊಟ್ಟಿರುವುದು ನೋಡಿದರೆ ಚುನಾವಣೆ ಎನ್ನುವುದು ಮಕ್ಕಳಾಟವೇ ಮುಖ್ಯಮಂತ್ರಿ ಯಡಿಯೂರಪ್ಪನವರೇ, ಈ ಬಾಲಿಶ ತಿದ್ದುಪಡಿಯನ್ನು ತೆಗೆದು ಹಾಕಿ ಒಬ್ಬ ವ್ಯಕ್ತಿ ಒಂದೇ ಕಡೆ ಮಾತ್ರ ಸ್ಪರ್ಧಿಸಬೇಕು ಎಂದು ಹೇಳಿದರು.

ಬೆಂಗಳೂರು ಉಪಾಧ್ಯಕ್ಷ ಸುರೇಶ್ ರಾಥೋಡ್ ಮಾತನಾಡಿ, ಕಸ ನಿರ್ವಹಣೆ ಹಾಗೂ ಇತರೆ ಪ್ರಾಥಮಿಕ ಜವಾಬ್ದಾರಿಗಳಿಂದ ಬಿಬಿಎಂಪಿಯನ್ನು ಹೊರಗಿಡಲಾಗುತ್ತಿದೆ ಇದನ್ನು ಹಿಂಪಡೆದು, ಕಸ ನಿರ್ವಹಣೆಯಂತಹ ಪ್ರಮುಖ ಜವಾಬ್ದಾರಿಗಳನ್ನು ಪ್ರಮುಖ ಕರ್ತವ್ಯಗಳೆಂದು ಪರಿಗಣಿಸಬೇಕು ಎಂದು ಓತ್ತಾಯಿಸಿದರು. ಇದುವರೆಗೂ ಪಾರದರ್ಶಕವಾಗಿ ವಾರ್ಡ್ ಮಟ್ಟದ ಸಭೆಗಳು ಸರಿಯಾಗಿ ನಡೆದ ಉದಾಹರಣೆ ನಮ್ಮ ಮುಂದೆ ಇಲ್ಲ ಈ ಅಂಶದ ಬಗ್ಗೆ ಸರ್ಕಾರ ಗಮನ ಹರಿಸಬೇಕು. ಸ್ಥಳೀಯ ಜನರನ್ನು ಸೇರಿಸಿ ಇಂತಿಷ್ಟು ದಿನಗಳಿಗೆ ಸಭೆ ನಡೆಸುವುದನ್ನು ಕಡ್ಡಾಯ ಮಾಡಬೇಕು.

ಈಗಾಗಲೇ ನಗರೋಥ್ಥಾನ, ನವನಗರೋಥ್ಥಾನ ಹಾಗೂ ಅನೇಕ ಕಾಮಗಾರಿಗಳನ್ನು ಲೋಕೋಪಯೋಗಿ ಇಲಾಖೆ ಹಾಗೂ ಕೆರ್‌ಐಡಿಎಲ್‌ಗೆ ಕೊಟ್ಟು ಲೂಟಿ ಮಾಡುತ್ತಿರುವ ಸರ್ಕಾರ ಎಲ್ಲಾ ಕಾಮಗಾರಿಗಳು ಬಿಬಿಎಂಪಿಯ ಮೂಲಕವೇ ನಡೆಯಬೇಕು ಎನ್ನುವ ಅಂಶವನ್ನು ಪ್ರಮುಖವಾಗಿ ಸೇರಿಸಬೇಕು, ಬೆಂಗಳೂರು ನಗರದ 28 ಶಾಸಕರು ಪಾಲಿಕೆ ಸದಸ್ಯರ ಅಧಿಕಾರ, ಕ್ಷೇತ್ರಾಭಿವೃದ್ದಿಯಂತಹ ವಿಚಾರದಲ್ಲಿ ಹಸ್ತಕ್ಷೇಪ ಮಾಡದಂತೆ ಸೂಚಿಸುವ ಅಂಶವನ್ನು ಸೇರಿಸಬೇಕು ಎಂದರು.

ಶಾಸಕ ಅರವಿಂದ ಲಿಂಬಾವಳಿಯವರು 2021ರ ಜನಗಣತಿ ಆಧರಿಸಿ ಚುನಾವಣೆ ನಡೆಸಬೇಕು ಎಂದು ಹೇಳಿದ್ದಾರೆ. ಈ ಮಾತಿನ ಹಿಂದಿರುವ ಮರ್ಮವೇನು, ಸರ್ಕಾರಕ್ಕೇ ಚುನಾವಣೆ ನಡೆಸಲು ಆಸಕ್ತಿ ಇಲ್ಲವೇ ಅಥವಾ ಸರ್ವಾಧಿಕಾರಿತನವನ್ನು ಹೇರುವ ಹುನ್ನಾರವೇ ಎಂದು ಪ್ರಶ್ನಿಸಿದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

16 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago