ಕಲಬುರಗಿ: ಜಿಲ್ಲೆಯ ಎರಡನೇ ಹಂತದಲ್ಲಿ ಡಿಸೆಂಬರ್ 27 ರಂದು ನಡೆಯುವ 5 ತಾಲೂಕಿನ 116 ಗ್ರಾಮ ಪಂಚಾಯತಿಗಳ 1953 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸಲು ಕಲಬುರಗಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಚುನಾವಣಾಧಿಕಾರಿಗಳಾದ ವಿ.ವಿ.ಜ್ಯೋತ್ಸ್ನಾ ಅವರು ಶುಕ್ರವಾರ ಅಧಿಸೂಚನೆ ಹೊರಡಿಸಿದ್ದಾರೆ.
ಎರಡನೇ ಹಂತದಲ್ಲಿ ಜೇವರ್ಗಿ ತಾಲೂಕಿನ 23, ಸೇಡಂ ತಾಲೂಕಿನ 27, ಚಿತ್ತಾಪೂರ ತಾಲೂಕಿನ 24, ಚಿಂಚೋಳಿ ತಾಲೂಕಿನ 27 ಹಾಗೂ ಯಡ್ರಾಮಿ ತಾಲೂಕಿನ 15 ಸೇರಿದಂತೆ ಒಟ್ಟು 116 ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಯಲಿದೆ.
ನಾಮಪತ್ರಗಳನ್ನು ಸಲ್ಲಿಸಲು ಡಿಸೆಂಬರ್ 16 ಕೊನೆಯ ದಿನವಾಗಿದೆ. ಡಿಸೆಂಬರ್ 17 ರಂದು ನಾಮಪತ್ರಗಳ ಪರಿಶೀಲನಾ ಕಾರ್ಯ ನಡೆಯಲಿದೆ. ಡಿಸೆಂಬರ್ 19 ರಂದು ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಕೊನೆ ದಿನವಾಗಿರುತ್ತದೆ. ಮತದಾನ ಅವಶ್ಯವಿದ್ದರೆ ಡಿಸೆಂಬರ್ 27 ರಂದು ಬೆಳಿಗ್ಗೆ 7 ರಿಂದ ಸಾಯಂಕಾಲ 5 ಗಂಟೆಯವರೆಗೆ ನಡೆಯಲಿದೆ. ಮರು ಮತದಾನದ ಅವಶ್ಯವಿದ್ದರೆ ಡಿಸೆಂಬರ್ 29 ರಂದು ನಡೆಸಲಾಗುವುದು. ಮತ ಎಣಿಕೆ ಕಾರ್ಯವು ಡಿಸೆಂಬರ್ 30 ರಂದು ಬೆಳಿಗ್ಗೆ 8 ಗಂಟೆಯಿಂದ ಆಯಾ ತಾಲೂಕಾ ಕೇಂದ್ರಗಳಲ್ಲಿ ನಡೆಸಲಾಗುತ್ತಿದೆ.
ತಾಲೂಕುವಾರು ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿ ಸಂಖ್ಯೆ, ಗ್ರಾಮದ ಹೆಸರು ಹಾಗೂ ಸದಸ್ಯ ಸ್ಥಾನಗಳ ವಿವರ ಇಂತಿದೆ.
ಜೇವರ್ಗಿ ತಾಲೂಕು: 01-ನೆಲೋಗಿ (21 ಸ್ಥಾನ), 02-ಕಲ್ಲೂರ.ಕೆ. (18 ಸ್ಥಾನ), 03-ಹರವಾಳ (10 ಸ್ಥಾನ), 04-ಕಲ್ಲ ಹಂಗರಗಾ (14 ಸ್ಥಾನ), 05-ಕೋಳಕೂರ (17 ಸ್ಥಾನ), 06-ಕೂಡಿ (18 ಸ್ಥಾನ), 07-ನರಿಬೋಳ (14 ಸ್ಥಾನ), 08-ಗುಡೂರ ಎಸ್.ಎ. (15 ಸ್ಥಾನ), 10-ಆಂದೋಲಾ (18 ಸ್ಥಾನ), 11-ಬಿರಾಳ ಬಿ. (19 ಸ್ಥಾನ), 12-ಕೆಲ್ಲೂರ (20 ಸ್ಥಾನ), 13-ಹರನೂರ (17 ಸ್ಥಾನ), 14-ಗಂವ್ಹಾರ (25 ಸ್ಥಾನ), 15-ಯಾಳವಾರ (25 ಸ್ಥಾನ), 16-ಸೊನ್ನ (08 ಸ್ಥಾನ), 17-ಹಿಪ್ಪರಗಾ ಎಸ್.ಎನ್. (13 ಸ್ಥಾನ), 18-ಮಂದೇವಾಲ (18 ಸ್ಥಾನ), 19-ಜೇರಟಗಿ (15 ಸ್ಥಾನ), 21-ಬಳ್ಳೂಂಡಗಿ (13 ಸ್ಥಾನ), 22-ನೇದಲಗಿ (15 ಸ್ಥಾನ), 23-ಅಂಕಲಗಾ (13 ಸ್ಥಾನ), 24-ಹುಲ್ಲೂರ (11 ಸ್ಥಾನ), 25-ಇಟಗಾ (12 ಸ್ಥಾನ).
ಸೇಡಂ ತಾಲೂಕು: 01-ಮಳಖೇಡ (43 ಸ್ಥಾನ), 02-ಉಡಗಿ (21 ಸ್ಥಾನ), 03-ನೀಲಹಳ್ಳಿ (14 ಸ್ಥಾನ), 04 ಕುಕ್ಕುಂದಾ (14 ಸ್ಥಾನ), 05-ಯಡಗಾ (12 ಸ್ಥಾನ), 05-ತೇಲ್ಕೂರ (13 ಸ್ಥಾನ), 07-ಕುರಕುಂಟಾ (17 ಸ್ಥಾನ), 08-ಮದಕಲ (14 ಸ್ಥಾನ), 09-ಬಟಗೇರಾ ಬಿ. (16 ಸ್ಥಾನ), 10-ರಂಜೋಳ (10 ಸ್ಥಾನ), 11-ಸಿಂದನಮಡು (13 ಸ್ಥಾನ), 12-ಕೋಡ್ಲಾ (17 ಸ್ಥಾನ), 13-ಬೆನಕನÀಳ್ಳಿ (14 ಸ್ಥಾನ), 14-ಹಂದರಕಿ (14 ಸ್ಥಾನ), 15-ದುಗನೂರ (19 ಸ್ಥಾನ), 16-ಕೋಲಕುಂದಾ (19 ಸ್ಥಾನ), 17-ಜಾಕನಪಲ್ಲಿ (15 ಸ್ಥಾನ), 18-ಮದನಾ (16 ಸ್ಥಾನ), 19-ಮುಧೋಳ (24 ಸ್ಥಾನ), 20-ಇಟಕಾಲ (19 ಸ್ಥಾನ), 21-ಕಾನಾಗಡ್ಡಾ (14 ಸ್ಥಾನ), 22-ಮೋತಕಪಲ್ಲಿ (15 ಸ್ಥಾನ), 23-ಮೇದಕ (15 ಸ್ಥಾನ), 24-ಚಂದಾಪುರ (11 ಸ್ಥಾನ), 25-ರಿಬ್ಬನಪಲ್ಲಿ (18 ಸ್ಥಾನ), 26-ಲಿಂಗಂಪಲ್ಲಿ (22 ಸ್ಥಾನ), 27-ಆಡಕಿ (21 ಸ್ಥಾನ).
ಚಿತ್ತಾಪುರ ತಾಲೂಕು: 01-ಗುಂಡಗೂರ್ತಿ (14 ಸ್ಥಾನ), 02-ಇವಣಿ (15 ಸ್ಥಾನ), 03-ಮಾಡಬೂಳ (17 ಸ್ಥಾನ), 04-ದಂಡೋತಿ (21 ಸ್ಥಾನ), 05-ದಿಗ್ಗಾಂವ್ (13 ಸ್ಥಾನ), 06-ಮೋಗಲಾ (09 ಸ್ಥಾನ), 07-ಸಾತನೂರ (14 ಸ್ಥಾನ), 08-ಪೇಠಶಿರೂರ (13 ಸ್ಥಾನ), 09-ಮುಗಳನಾಗಾಂವ (08 ಸ್ಥಾನ), 10-ಭಾಗೋಡಿ (17 ಸ್ಥಾನ), 11-ಮಾಲಗತ್ತಿ (18 ಸ್ಥಾನ), 12-ರಾವುರ (32 ಸ್ಥಾನ), 13-ಕಮರವಾಡಿ (14 ಸ್ಥಾನ), 14-ಕರದಾಳ (15 ಸ್ಥಾನ), 15-ಹಲಕಟ್ಟಾ (20 ಸ್ಥಾನ), 16-ಇಂಗಳಗಿ (20 ಸ್ಥಾನ), 17-ಲಾಡ್ಲಾಪೂರ (16 ಸ್ಥಾನ), 18-ಅಳ್ಳೋಳ್ಳಿ (20 ಸ್ಥಾನ), 19-ಭೀಮನಳ್ಳಿ (16 ಸ್ಥಾನ), 21-ಅಲ್ಲೂರ ಬಿ. (16 ಸ್ಥಾನ), 22-ಯಾಗಾಪೂರ (23 ಸ್ಥಾನ), 23-ನಾಲವಾರ (31 ಸ್ಥಾನ), 24-ಕಡಬೂರ (16 ಸ್ಥಾನ), 26-ಸನ್ನತಿ (12 ಸ್ಥಾನ).
ಚಿಂಚೋಳಿ ತಾಲೂಕು: 01-ವೆಂಕಟಾಪೂರ (22 ಸ್ಥಾನ), 02-ಕುಂಚಾವರಂ (23 ಸ್ಥಾನ), 03-ಶಾದಿಪೂರ (23 ಸ್ಥಾನ), 04-ಮಿರಿಯಾಣ (26 ಸ್ಥಾನ), 05-ಪೋಲಕಪಳ್ಳಿ (11 ಸ್ಥಾನ), 06-ಐನೋಳ್ಳಿ (18 ಸ್ಥಾನ), 07-ದೇಗಲಮಡಿ (15 ಸ್ಥಾನ), 08-ನಾಗಾಯಿದಲಾಯಿ (18 ಸ್ಥಾನ), 09-ಸಾಲೆಬೀರನಳ್ಳಿ (16 ಸ್ಥಾನ), 10-ಹಸರಗುಂಡಗಿ (17 ಸ್ಥಾನ), 11-ಕನಕಪೂರ (23 ಸ್ಥಾನ), 12-ಚಿಮ್ಮಾಯಿದಲಾಯಿ (12 ಸ್ಥಾನ), 13-ಅಣವಾರ (09 ಸ್ಥಾನ), 16-ಶಿರೋಳ್ಳಿ (12 ಸ್ಥಾನ), 17-ಜಟ್ಟೂರ (11 ಸ್ಥಾನ), 18-ನಿಡಗುಂದಾ (15 ಸ್ಥಾನ), 19-ಕೆರೋಳ್ಳಿ (11 ಸ್ಥಾನ), 20-ಸುಲೇಪೇಟ (22 ಸ್ಥಾನ), 21-ಕುಪನೂರ (10 ಸ್ಥಾನ), 22-ಹೊಡೆಬೀರನಳ್ಳಿ (07 ಸ್ಥಾನ), 23-ಗಡಿಕೇಶ್ವಾರ (19 ಸ್ಥಾನ), 24-ಚಿಮ್ಮನಚೋಡ (21 ಸ್ಥಾನ), 25-ಸಲಗರಬಸಂತಪೂರ (18 ಸ್ಥಾನ), 26-ಐನಾಪುರ (22 ಸ್ಥಾನ), 27-ಗಡಿಲಿಂಗದಳ್ಳಿ (17 ಸ್ಥಾನ), 28-ಚಂದನಕೇರಾ (21 ಸ್ಥಾನ), 29-ಗಾರಂಪಳ್ಳಿ ( 14 ಸ್ಥಾನ).
ಯಡ್ರಾಮಿ ತಾಲೂಕು: 01-ಇಜೇರಿ (22 ಸ್ಥಾನ), 02-ಬಿಳವಾರ (12 ಸ್ಥಾನ), 03-ಬಳಬಟ್ಟಿ (21 ಸ್ಥಾನ), 04-ಯಲಗೋಡ (17 ಸ್ಥಾನ), 05-ಆಲೂರ (21 ಸ್ಥಾನ), 07-ಕುಕನೂರ (17 ಸ್ಥಾನ), 08-ಮಳ್ಳಿ (20 ಸ್ಥಾನ), 09-ಕಾಚಾಪೂರ (09 ಸ್ಥಾನ), 10-ವಡಗೇರಾ (15 ಸ್ಥಾನ), 11-ಸುಂಬಡ (13 ಸ್ಥಾನ), 12-ಕುರುಳಗೇರಾ (15 ಸ್ಥಾನ), 13-ಮಾಗಣಗೇರಾ (19 ಸ್ಥಾನ), 14-ಕಡಕೋಳ (19 ಸ್ಥಾನ), 15-ಸಾಥÀಖೇಡ (16 ಸ್ಥಾನ), 16-ಅರಳಗುಂಡಗಿ (25 ಸ್ಥಾನ).
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…