ಬಿಸಿ ಬಿಸಿ ಸುದ್ದಿ

ಸುರಪುರದ ಗರುಡಾದ್ರಿಯಲ್ಲಿ ಗಿರೀಶ್ ಕಾರ್ನಾಡರಿಗೆ ನುಡಿ ನಮನ

ಸುರಪುರ: ’ಗಿರೀಶ್ ಕಾರ್ನಾಡರು ದೇಶ ಕಂಡು ಅದ್ಭುತ ಸಾಹಿತಿ, ನಾಟಕಕಾರ ಮತ್ತು ವೈಚಾರಿಕ ಚಿಂತಕರಾಗಿದ್ದರು,ಅಲ್ಲದೆ ಬಹುಭಾಷಾ ಪರಣಿತಿ ಹೊಂಡಿದ್ದ ಅಪ್ರತಿಮ ನಟ, ಲೇಖಕ, ಅವರಿಂದ ಇನ್ನು ಕನ್ನಡದ ಅನೇಕ ಕಾರ‍್ಯಗಳು ಆಗಬೇಕಾದ ಸಂದರ್ಭದಲ್ಲಿಯೇ ಅವರು ಅಗಲಿದ್ದು ನೋವಿನ ಸಂಗತಿಯಾಗಿದೆ ಎಂದು ಮಾಜಿ ಸಚಿವ ಹಾಗು ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ರಾಜಾ ಮದನಗೋಪಾಲ ನಾಯಕ ನುಡಿದರು.

ಗರುಡಾದ್ರಿ ಕಲಾಮಂದಿರದಲ್ಲಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಸಾಹಿತ್ಯ ಸಂಘದಡಿಯಲ್ಲಿ ನಡೆದ ’ಕಾರ್ನಾಡ ನುಡಿನಮನ’ ಕಾರ್ಯಕ್ರಮದಲ್ಲಿ ಮಾತನಾಡುತ್ತಾ,ಕನ್ನಡಕ್ಕೆ ಏಳನೆ ಜ್ಞಾನಪೀಠ ಪ್ರಶಸ್ತಿ ತಂದು ನಾಡಿನ ಕೀರ್ತಿ ಜಗತ್ತಿಗೆ ಸಾರಿದ ಮಹಾನ್ ಚೇತನ,ಅವರ ಪ್ರತಿಭೆಗೆ ನಾಡು ಸದಾ ಋಣಿಯಾಗಿರಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ಅಧ್ಯಕ್ಷ ಶ್ರೀನಿವಾಸ ಜಾಲವಾದಿ ಮಾತನಾಡಿ, ಕಾರ್ನಾಡ ಕನ್ನಡದ ಅಸ್ಮಿತೆ, ಪ್ರಪಂಚದ ಶ್ರೇಷ್ಠ ನಾಟಕಕಾರರಲ್ಲೊಬ್ಬರು, ಅವರ ವೈಚಾರಿಕತೆ ವಿಭಿನ್ನವಾಗಿತ್ತು. ತುಘಲಕ, ಹಯವದನ, ಯಯಾತಿ ಮೊದಲಾದ ನಾಟಕಗಳ ಮೂಲಕ ಜ್ಞಾನಪೀಠಕ್ಕೇನೇ ಹೊಸ ಆಯಾಮ ನೀಡಿದರು. ಅವರು ಶ್ರೇಷ್ಠ ನಟ, ನಿರ್ದೇಶಕ, ಬರಹಗಾರ, ಚಿತ್ರಕಲಾವಿದ ಆಗಿದ್ದರು, ಅವರ ಸರಳತೆಯ ಪ್ರತೀಕ ಅವರ ಮರಣದಲ್ಲಿ ಇಡೀ ದೇಶ ಕಂಡಿತು, ಕಾರ್ನಾಡ ’ಈಡೀಪಸ್’ ಆಗಿ ಸದಾ ಕಾಡುತ್ತಾರೆ ಎಂದರು.

ಹಿರಿಯ ನ್ಯಾಯವದಿ ನಿಂಗಣ್ಣ ಚಿಂಚೋಡಿ, ಮಲ್ಲಿಕಾರ್ಜುನ ಹಿರೇಮಠ, ಡಾ.ಯಲ್ಲಪ್ಪ ನಾಯಕ, ಮೂರ್ತಿ ಬೊಮ್ಮನಳ್ಳಿ, ಸಾಹಿತಿಬೀರಣ್ಣ ಬಿ.ಕೆ ಮಾತನಾಡಿದರು.ಸಭೆಯ ಆರಂಭದಲ್ಲಿ ಕಾರ್ನಾಡರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಂತರ ಎರಡು ನಿಮಿಷಗಳ ಮವನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಶ್ರೀಹರಿರಾವ್ ಆದ್ವಾನಿ ಪ್ರಾರ್ಥನೆ ಗೀತೆ ಹಾಡಿದರು, ಕಸಾಪ ಗೌರವ ಕಾರ್ಯದರ್ಶಿ ದೇವು ಹೆಬ್ಬಾಳ ನಿರೂಪಿಸಿದರು,ರಾಜಶೇಖರ ದೇಸಾಯಿ ವಂದಿಸಿದರು.

ಸಭೆಯಲ್ಲಿ ಯಲ್ಲಪ್ಪ ಹುಲಕಲ್ಲ, ನಬೀಲಾಲ ಮಕಾನದಾರ, ಕುತ್ಬುದ್ದೀನ್ ಅಮ್ಮಾಪುರ, ಎಚ್.ರಾಠೋಡ, ಶ್ರೀಹರಿರಾವ ಆದೋನಿ, ಜಯಲಲಿತಾ ಪಾಟೀಲ, ಹಸೀನಾಬಾನು, ಸೋಮರೆಡ್ಡಿ ಕಟ್ಟಿ, ಬಸವರಾಜ ಗೋಗಿ, ಮಲ್ಲಿಕಾರ್ಜುನ ಜೆಟಗಿಮಠ, ಮನೋಹರ ಕುಂಟೋಜಿ, ಮುದ್ದಣ್ಣ ಅಪ್ಪಗೋಳ, ಪ್ರಕಾಶ ಅಲಬನೂರ, ಬಸವರಾಜ ಕೊಡೇಕಲ್ಲ, ಶರಣಬಸಪ್ಪ ಯಾಳವಾರ, ಚನ್ನಪ್ಪ, ಶ್ರೀಶೈಲ, ಸಾಹೇಬರೆಡ್ಡಿ, ಸಿದ್ಧಯ್ಯ ಹಿರೇಮಠ, ತಿರುಪತಿ, ರಾಮಣ್ಣ ಮಾಸ್ಟರ್, ಪೆದ್ದಪ್ಪ, ಶ್ರೀಕರ, ಶೇಖರ ಸೇರಿದಂತೆ ಅನೇಕರಿದ್ದರು.

ತಾ. ಕಸಾಪ ಗೌ. ಕಾರ‍್ಯದರ್ಶಿಗಳಾದ ದೇವು ಹೆಬ್ಬಾಳ ಕಾರ‍್ಯಕ್ರಮ ನಿರೂಪಿಸಿದರು, ರಾಜಶೇಖರ ದೇಸಾಯಿ ವಂದಿಸಿದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

5 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

5 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

5 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

21 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

24 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago