ಬಿಸಿ ಬಿಸಿ ಸುದ್ದಿ

ಕರ್ನಾಟಕ ಸಣ್ಣ, ಜಿಲ್ಲಾ ಪತ್ರಿಕೆಗಳ ಸಂಘದ ರಾಜ್ಯ ಘಟಕದ ಪದಾಧಿಕಾರಿಗಳ ಪದಗ್ರಹಣ

ವಿಜಯಪುರ: ಕರ್ನಾಟಕ ಸಣ್ಣ ಮತ್ತು ಜಿಲ್ಲಾ ಪತ್ರಿಕೆಗಳ ಸಂಘದ ರಾಜ್ಯ ಘಟಕದ ನೂತನ ಪದಾಧಿಕಾರಿಗಳು ಪದಗ್ರಹಣ ಮಾಡಿದರು.
ನಗರದ ಹೊಟೇಲ್ ಮಧುವನ ಇಂಟರ್ ನ್ಯಾಶನಲ್ಲಿಂದು ಆಯೋಜಿಸಿದ್ದ ವಿಶೇಷ ಸರ್ವ ಸದಸ್ಯರ ಸಭೆ ಹಾಗೂ ಕಾರ್ಯಕಾರಿ ಸಮಿತಿ ಸಭೆಯಲ್ಲಿ ರಾಜ್ಯ ಘಟಕದ ನೂತನ ಪದಾಧಿಕಾರಿಗ ಪದಗ್ರಹಣ ಸಮಾರಂಭ ಜರುಗಿತು.

ರಾಜ್ಯ ಉಪಾಧ್ಯಕ್ಷರಾಗಿ ಹೆಚ್.ಎಲ್.ಸುರೇಶ ಸಂಪಾದಕರು ವಾಸ್ತವ ಕರ್ನಾಟಕ ಕನ್ನಡ ದಿನಪತ್ರಿಕೆ ಬಂಗಾರಪೇಟೆ,ಪ್ರಧಾನ ಕಾರ್ಯದರ್ಶಿಗಳಾಗಿ ಮುರುಗೇಶ ಬಿ ಅಳಗವಾಡಿ ಸಂಪಾದಕರು ಜೇಷ್ಠ ಕನ್ನಡ ದಿನಪತ್ರಿಕೆ ಬಾಗಲಕೋಟೆ,ಕಾರ್ಯಕಾರಿ ಸಮಿತಿಯ ನಿರ್ದೇಶಕರಾಗಿ ಕಲಬುರಗಿಯ ವಿಶ್ವಪ್ರಚಾರ ಕನ್ನಡ ದಿನಪತ್ರಿಕೆ ಸಂಪಾದಕರಾದ ವೆಂಕಟರಾವ ಖಮೀತಕರ್ ಹಾಗೂ ರಬಕವಿ- ಬನಹಟ್ಟಿ ನೀಲಕಂಠ ವಾಮನ ದಾತಾರ ಸಂಪಾದಕರು ದಢಲ್ ಬಾಜಿ ಕನ್ನಡಿ ದಿನಪತ್ರಿಕೆ ಸಂಪಾದಕರು ಪದಗ್ರಹಣ ಮಾಡಿದರು.

ನೂತನ ಪದಾಧಿಕಾರಿಗಳಿಗೆ ಸಂಘದ ಅಧ್ಯಕ್ಷ ಸಿದ್ದು ಸುಬೇದಾರ ೨೦೨೦-೨೦೨೩ ರ ಅವಧಿಗ ನೇಮಕಾತಿ ಪತ್ರ ನೀಡಿ ಈ ಸಂಘವು ೧೯೮೧ ರಲ್ಲಿ ಸ್ಥಾಪನೆಗೊಂಡು ರಾಜ್ಯ ಸರಕಾರದಿಂದ ಮಾನ್ಯತೆ ಪಡೆದ ರಾಜ್ಯದ ಏಕೈಕ ಸಂಘವಾಗಿದ್ದು,ನಲವತ್ತು ವರ್ಷಗಳ ಸುಧೀರ್ಘ ಇತಿಹಾಸ ಹೊಂದಿದೆ.

ಅಂದಿನ ಮುಖ್ಯಮಂತ್ರಿ ದಿ.ಗುಂಡುರಾವ ಅವರಿಂದ ಪ್ರಶಂಸೆ ಪಡೆದು ಮಾನ್ಯತೆ ಪಡೆದಿದೆ, ಸಂಘದ ಸಂಘಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಂಘದ ಮತ್ತು ಸದಸ್ಯರ ಆಶಯಗಳಿಗೆ ಧಕ್ಕೆಯಾಗದಂತೆ ನಡೆದುಕೊಳ್ಳುವಂತೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತ,ಎಸ್.ಎಸ್.ವಿ.ಟಿವಿ ಮಾಲೀಕರು ಹಾಗೂ ಕಲಬುರಗಿ ಜಿಲ್ಲಾ ರೋಟರಿ ಕ್ಲಬ್ ನೂತನ ಅಧ್ಯಕ್ಷ ಶಂಕರ ಕೋಡ್ಲಾ ಅವರನ್ನು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಸಭೆಯಲ್ಲಿ ನಿಕಟ ಪೂರ್ವ ರಾಜ್ಯಾಧ್ಯಕ್ಷ ಚಿತ್ರದುರ್ಗದ ಶ.ಮಂಜುನಾಥ,ಹಿರಿಯರು ರಾಜ್ಯೋತ್ಸವ ಪ್ರಶಸ್ತಿ ಪುರಷ್ಕೃತ ಸತ್ಯಕಾಮ ಪತ್ರಿಕೆ ಸಂಪಾದಕರಾದ ಪಿ.ಎಂ.ಮಣ್ಣೂರ,ಕಲಬುರಗಿಯ ಶರಣಬಸಪ್ಪ ಜಿಡಗಾ,ಅಜೀಜುಲ್ಲಾ ಸರಮಸ್ತ,ಗುರುರಾಜ ಕುಲಕರ್ಣಿ,ಸಿದ್ದಣ್ಣಗೌಡ ಪಾಟೀಲ,ವಿಜಯಪುರದ ರಶ್ಮಿ ಪಾಟೀಲ,ಲಕ್ಷ್ಮಿ ವಾಲಿಕಾರ,ಶರದಕುಮಾರ ಅರ್ಜುನಗಿ,ಮೋಹನ ಕುಲಕರ್ಣಿ,ಬಾಗಲಕೋಟೆಯ ವಿರೇಶ ಹಿರೇಮಠ,ಹೆಚ್.ಎಸ್.ಮುದಕವಿ,ಎಮ್.ಸಾಲಗಾರ,ಹನಪ್ಪ ಕಡಿವಾಲ್,ರಾಘವೇಂದ್ರ ಕಲಾದಗಿ.ಹರಿಹರದ ಶಾಂಭವಿ ನಾಗರಾಜ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

emedialine

Recent Posts

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

6 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

6 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

8 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

8 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

8 hours ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

8 hours ago