ಆಳಂದ: ಡಿ.೨೨ರಂದು ನಡೆಯಲಿರುವ ಗ್ರಾಪಂ ಸಾರ್ವತ್ರಿಕ ಪ್ರಥಮ ಹಂತದ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣೆ ವೀಕ್ಷಕರಾದ ಕೆಎಎಸ್ ಹಿರಿಯ ಶ್ರೇಣಿಯ ಅಧಿಕಾರಿ ಅನೀಲಕುಮಾರು ಅವರು ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದು.
ಪಟ್ಟಣದ ಜೂನಿಯರ್ ಕಾಲೇಜಿನಲ್ಲಿ ಚುನಾವಣೆ ಸಿಬ್ಬಂದಿಗಳಿಗೆ ನೀಡುವ ಅಂತಿಮ ತರಬೇತಿ ಸಿದ್ಧತಾ ಕಾರ್ಯವನ್ನು ವೀಕ್ಷಕಿಸಿದರು. ಅಲ್ಲದೆ, ಇದೇ ಸ್ಥಳದಿಂದ ಗ್ರಾಪಂಗಳ ಮತಗಟ್ಟೆಗಳಿಗೆ ರವಾನೆಗೊಳ್ಳುವ ಮತಯಂತ್ರ ಹಾಗೂ ಮುಂದೆ ಕೈಗೊಳ್ಳುವ ಸ್ಟ್ರಾಂಗರೋಂ ಪರಿಶೀಲಿಸಿ ಸಿದ್ಧತಾ ಕಾರ್ಯದ ಮೆಚ್ಚಿಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ ಯಲ್ಲಪ್ಪ ಸುಬೇದಾರ ಅವರು ಚುನಾವಣೆ ಸಿದ್ಧತೆ ಕಾರ್ಯದ ಕುರಿತು ಸಮಗ್ರವಾದ ಮಾಹಿತಿ ನೀಡಿದ ಅವರು, ಒಟ್ಟು ಚುನಾವಣೆ ನಡೆಯಬೇಕಿರುವ ೩೬ ಗ್ರಾಪಂಗಳಲ್ಲಿ ೬೦೦ ಸ್ಥಾನಗಳಿದ್ದು, ಈ ಪೈಕಿ ೧೯೭೩ ಮಂದಿ ನಾಮಪತ್ರ ಸಲ್ಲಿಸಿದ್ದರು, ೪೦ ಸ್ಥಾನಗಳಲ್ಲಿ ಸದಸ್ಯರ ಅವಿರೋಧ ಆಯ್ಕೆಯಾದ ಮೇಲೆ ಬಾಕಿ ಉಳಿದ ೫೬೦ ಸ್ಥಾನಗಳಿಗೆ ಮಾತ್ರ ನಡೆಯುವ ಚುನಾವಣೆಗೆ ೧೪೬೨ ಮಂದಿ ಕಣದಲ್ಲಿದ್ದಾರೆ. ೨೬೭ ಮತಗಟ್ಟೆಗಳು ಸ್ಥಾಪಿಸಲಾಗಿದೆ. ಒಟ್ಟು ೧೯೭೩೫೯ ಮತದಾರರಿದ್ದಾರೆ. ಚುನಾವಣೆಗೆ ಅಧಿಕಾರಿಗಳು ಮತ್ತು ಸಹಾಯಕ ಅಧಿಕಾರಿಗಳು ಸೇರಿ ೭೨ ಅಧಿಕಾರಿಗಳು, ಸೆಕ್ಟರ್ ಅಧಿಕಾರಿ ೧, ಎಂಸಿಸಿ ಅಧಿಕಾರಿಗಳು ಐದು ಜನರಿಗೆ ನಿಯೋಜಿಸಿದ್ದು, ಪಟ್ಟಣದ ಬಾಲಕರ ಕಾಲೇಜಿನಲ್ಲಿ ಮಸ್ಟರಿಂಗ್ ಮತ್ತು ಡಿ. ಮಸ್ಟರಿಂಗ ಹಾಗೂ ಕೌಟಿಂಗ್ ಸ್ಥಳವಾಗಿದೆ ಎಂದು ಹೇಳಿದರು.
ನೋಡಲ್ ಅಧಿಕಾರಿ ಆನಂದ ತೀರ್ಥ, ಪ್ರಭುಲಿಂಗ ತಳಕೇರಿ ಆಗಮಿಸಿದ್ದರು. ಚುನಾವಣೆ ಶಾಖೆ ಶಿರಸ್ತೆದಾರ ಮನೋಜ್ ಲಾಡೆ, ಎಫ್‌ಡಿಎ ವೀಣಾಶ್ರೀ, ಕಂದಾಯ ನಿರೀಕ್ಷಕ ಶರಣಬಸಪ್ಪ ಹಕ್ಕಿ, ವಿಎ ಆನಂದ ಪೂಜಾರಿ ಹಾಗೂ ಮುನ್ನೋಳ್ಳಿ, ಸಂಗೋಳಗಿ ಗ್ರಾಮ ಲೇಕ್ಕಾಧಿಕಾರಿಗಳು ಹಾಜರಿದ್ದರು.
ಬಳಿಕ ವೀಕ್ಷಣಾಧಿಕಾರಿಗಳ ನೇತೃತ್ವದ ತಂಡವು ತಹಸೀಲ್ ಕಚೇರಿ, ಮುನ್ನೋಳ್ಳಿ, ತಡಕಲ್, ಸಂಗೋಳಗಿ ಜಿ. ಗ್ರಾಮದ ಮತದಾನ ಕೇಂದ್ರ ಪರಿಶೀಲಿಸಿ ಭದ್ರತೆ, ಮೂಲಸೌಕರ್ಯಗಳನ್ನು ವೀಕ್ಷಕಿಸಿದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…