ಕಲಬುರಗಿ: ವಾಡಿ ಪಟ್ಟಣದ ಪುರಸಭೆಯ ಕಾಂಗ್ರೆಸ್ ಆಡಳಿತ ಕಳೆದ ಒಂದು ತಿಂಗಳಿಂದ ಬೀದಿ ದೀಪಗಳ ನಿರ್ವಹಣೆ ಕೈಬಿಟ್ಟಿದೆ. ಪರಿಣಾಮ ರಾತ್ರಿ ನಗರದ ಬೀದಿಗಳಿಗೆ ಕಗ್ಗತ್ತಲು ಆವರಿಸಿಕೊಳ್ಳುತ್ತಿದ್ದು, ಬಡಾವಣೆಗಳ ಜನರಿಗೆ ಬೆಳಕಿನ ಭಾಗ್ಯವೇ ಇಲ್ಲದಂತಾಗಿದೆ.
ಸುಮಾರು ೫೦ ಸಾವಿರ ಜನಸಂಖ್ಯೆ ಹೊಂದಿರುವ ವಾಡಿ ನಗರದಲ್ಲಿ ಒಟ್ಟು ೨೩ ವಾರ್ಡ್‌ಗಳಿವೆ. ಕಾಂಗ್ರೆಸ್ ಪಕ್ಷ ಸದ್ಯ ಪುರಸಭೆಯ ಅಧಿಕಾರದಲ್ಲಿದೆ. ಕಸ ಸ್ವಚ್ಚತೆ, ಚರಂಡಿ-ಶೌಚಾಲಯಗಳ ಶುಚಿತ್ವ, ಬೀದಿ ದೀಪಗಳ ನಿರ್ವಹಣೆ, ನಿತ್ಯ ಕುಡಿಯುವ ನೀರು ಪೂರೈಕೆ ಪುರಸಭೆ ಆಡಳಿತ ನಿಭಾಯಿಸಬೇಕಾದ ಪ್ರಮುಖ ಕರ್ತವ್ಯಗಳಾಗಿವೆ. ಹಲವು ಬಡಾವಣೆಗಳಲ್ಲಿ ಬೀದಿ ದೀಪಗಳು ಕೆಟ್ಟುನಿಂತಿವೆ. ಕತ್ತಲ ರಸ್ತೆಗಳಲ್ಲಿ ಸಂಚರಿಸಲು ಪಾದಚಾರಿಗಳು ಹೆದರುವಂತಾಗಿದೆ.
ವಾಹನಗಳ ಓಡಾಟ ಒಂದೆಡೆಯಾದರೆ, ಕತ್ತಲ ರಸ್ತೆಗಳಲ್ಲಿ ನಾಯಿ, ಹಂದಿಗಳ ಕಿರಿಕಿರಿ ಇನ್ನೊಂದೆಡೆ. ಲಾರಿ, ಜೀಪು, ಬೈಕ್‌ಗಳು ಬೀದಿಗಳಲ್ಲೇ ಪಾರ್ಕಿಂಗ್ ಮಾಡಲಾಗುತ್ತಿದ್ದು, ಜನಸಂಚಾರಕ್ಕೆ ತೊಂದರೆಯಾಗುತ್ತಿದೆ. ಕತ್ತಲು ಭಾಗ್ಯ ಕರುಣಿಸಿರುವ ನಿರ್ಲಕ್ಷ್ಯ ಧೋರಣೆಯ ಪುರಸಭೆ ಅಧಿಕಾರಿಗಳನ್ನು ಮತ್ತು ಚುನಾಯಿತ ಜನಪ್ರತಿನಿಧಿಗಳನ್ನು ಶಪಿಸುತ್ತಲೇ ಜನರು ಹೆಜ್ಜೆ ಹಾಕುತ್ತಿದ್ದಾರೆ.
ಕಲಬುರಗಿ ಮೂಲದ ಗುತ್ತಿಗೆದಾರನಿಗೆ ನೀಡಲಾದ ಬೀದಿ ದೀಪ ನಿರ್ವಹಣೆ ಅವದಿ ಪೂರ್ಣಗೊಂಡಿದೆ ಎನ್ನಲಾಗಿದ್ದು, ಕಳೆದ ಒಂದು ತಿಂಗಳಿಂದ ನಿರ್ವಹಣೆ ಸ್ಥಗಿತಗೊಂಡಿದೆ. ಪುರಸಭೆ ಆಡಳಿತ ಒಂದು ವರ್ಷದ ಬೀದಿದೀಪ ನಿರ್ವಹಣೆ ವೆಚ್ಚ ಪಾವತಿಸಿಲ್ಲ ಎಂಬ ಕಾರಣಕ್ಕೆ ಬೇಸರಗೊಂಡ ಗುತ್ತಿಗೆದಾರ ದೀಪಗಳ ರಿಪೇರಿ ಮಾಡಲು ಮುಂದಾಗುತ್ತಿಲ್ಲ ಎಂಬ ಆರೋಪ ಒಂದೆಡೆಯಾದರೆ.
ದೀಪಗಳ ನಿರ್ವಹಣೆ ಹೆಸರಿನಲ್ಲಿ ಗುತ್ತಿಗೆದಾರ ಪುಕ್ಕಟೆ ಬಿಲ್ಲ ಲಪಟಾಯಿಸುತ್ತಿದ್ದಾನೆ ಎಂಬ ದೂರು ಇನ್ನೊಂದೆಡೆ ಕೇಳಿಬರುತ್ತಿದೆ. ಬೀದಿ ದೀಪಗಳ ನಿರ್ವಹಣೆಗಾಗಿ ಪುರಸಭೆ ತಿಂಗಳಿಗೆ ಒಂದು ಲಕ್ಷ ರೂ. ಖರ್ಚು ಮಾಡುತ್ತಿದೆ. ದೀಪಗಳ ನಿರ್ವಹಣೆ ಮಾಡದೆ ಕೊಟ್ಟಿ ಬಿಲ್ಲ ಬರೆಯಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಪುರಸಭೆ ಆಡಳಿತ ಮತ್ತು ಗುತ್ತಿಗೆದಾರನ ಬೇಜವಾಬ್ದಾರಿಗೆ ವಾಡಿ ನಗರ ಬೆಳಕು ಕಾಣದೆ ಕತ್ತಲಲ್ಲಿ ಮುಳುಗಿರುವುದು ಮಾತ್ರ ವಿಪರ್ಯಾಸ.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…