ಕಲಬುರಗಿ: ಕಳೆದ 13 ದಿನಗಳಿಂದ ಕೇಂದ್ರ ಸರಕಾರ ಜಾರಿ ಮಾಡುತ್ತಿರುವ ಕೃಷಿ ವಿರೋಧಿ ಕಾಯ್ದೆಗಳು ಮತ್ತು ಗೋವು ಹತ್ಯೆ ಮಸೂದೆಯನ್ನು ವಾಪಸ್ ಪಡೆಯಬೇಕೆಂದು ನಗರದ ಜಗತ್ ವೃತದಲ್ಲಿ ನಡೆಯುತ್ತಿರುವ ನಿರಂತರ ಧರಣೆಗೆ ಸತ್ಯಾಗ್ರಹಕ್ಕೆ ಹಲವು ಮಠಾಧೀಶರು ಭಾಗವಹಿಸಿ ಬೆಂಬಲ ಸೂಚಿಸಿದ್ದಾರೆ.
ಈ ವೇಳೆಯಲ್ಲಿ ಡಾ. ಸಾರಂಗಧರ ದೇಶಿಕೇಂದ್ರ ಸುಲಫಲ ಮಟ್ಟದ ಸ್ವಾಮಿಗಳು ಮಾತನಾಡಿ, ಜಗತ್ತು ನಿಂತಿರುವುದು ನೇಗಿಲ ಮೇಲೆ. ರೈತರು ನಮ್ಮೆಲ್ಲರ ಹೊಟ್ಟೆಗೆ ಅನ್ನ ಕೊಟ್ಟವರು. ಅನ್ನ ಕೊಟ್ಟವರ ವಿರುದ್ಧ ಕಾನೂನು ತರುವುದು ತಪ್ಪು. ಪ್ರಧಾನಿ, ರಾಷ್ಟ್ರಪತಿಯೂ ಹೊಟ್ಟೆಗೆ ಉಣ್ಣುವುದು ರೈತರು ಬೆಳೆದ ಅನ್ನವನ್ನೇ. ಹೀಗಿದ್ದಾಗ ರೈತ ವಿರೋಧಿ ಕೃಷಿ ವಿರೋಧಿ ಕಾಯ್ದೆ ತರುವುದೆಂದರೆ ಅದು ದೇಶದ ವಿರುದ್ಧ ಜಾರಿಗೆ ತಂದಿರುವ ಕಾನೂನು ಎಂದು ಹೇಳಿದ ಅವರು ಈ ಹೋರಾಟದಲ್ಲಿ ರೈತರ ಜೊತೆಗೆ ನಾವು ಸಹ ಇದ್ದೇವೆ. ಸರಕಾರ ರೈತರ ಮಾತು ಕೇಳಬೇಕು” ಎಂದು ಒತ್ತಾಯಿಸಿದರು.
ವಿಶ್ವನಾಥ ಕೋರಣೇಶ್ವರ ಸ್ವಾಮಿ ಉಸ್ತುರಿ ಇವರು ಮಾತನಾಡಿ, “ಮಠಾಧೀಶರು ಈ ಹೊತ್ತಿನಲ್ಲಿ ರೈತರ ಜೊತೆಗೆ ನಿಲ್ಲಬೇಕಾದದ್ದು ಧರ್ಮ ಎಂದು ಕರೆ ನೀಡಿದ ಅವರು, ಶರಣ ಸಂಸ್ಕೃತಿ ಎಂದರೆ ಕಾಯಕ ಸಂಸ್ಕೃತಿ. ಅದುವೇ ಕೃಷಿ ಸಂಸ್ಕೃತಿ. ಈಗ ಕೃಷಿ ಸಂಸ್ಕೃತಿ ಯನ್ನೇ ನಾಶ ಮಾಡುವಂತಹ ಕಾನೂನು ಬರುವುದಾದರೆ ನಾವೆಲ್ಲರೂ ಅದನ್ನು ಧಿಕ್ಕರಿಸಬೇಕು ಮತ್ತು ಕೃಷಿಕರೊಂದಿಗೆ ನಿಲ್ಲುವುದು ಲಿಂಗಾಯತ ಮಠಗಳ ಪರಂಪರೆಯೂ ಆಗಿದೆ ಎಂದು ತಿಳಿಸಿದರು.
ಕ್ರ.ಶ.16ನೇ ಶತಮಾನದಲ್ಲಿ ಮೈಸೂರು ಸಂಸ್ಥಾನದ ರೈತರ ಮೇಲೆ ತೆರಿಗೆಯ ಹೊರೆ ಹಾಕಿರುವುದನ್ನು ಮೊದಲಿಗೆ ವಿರೋಧಿಸಿದವರು ಲಿಂಗಾಯತ ಸ್ವಾಮಿಗಳು. ಮತ್ತು ಅಂದು ಅನೇಕ ಸ್ವಾಮಿಗಳ ಬಲಿದಾನವೂ ಆಯಿತು. ಹೀಗೆ ಜೀವದ ಹಂಗು ತೊರೆದು ರೈತರೊಂದಿಗೆ ನಿಂತ ಜೀವಪರ ನ್ಯಾಯದ ಪರಂಪರೆಯು ನಮ್ಮದಾಗಿದೆ. ಆದ್ದರಿಂದಲೇ ನಾವು ರೈತರ ಪರವಾಗಿ ಇಂದು ಈ ಧರಣಿಗೆ ಬೆಂಬಲಿಸಿದ್ದೇವೆ ಎಂದು ಇತಿಹಾಸ ಬಿಚ್ಚಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ದೇಶದ ರೈತರ ವಿರುದ್ಧ ಕಾಯ್ದೆ ತಂದ ಕೇಂದ್ರ ಸರಕಾರದ ನಿಲುವು ತಪ್ಪು. ಕೂಡಲೇ ಸರಕಾರ ಕಾಯ್ದೆಗಳನ್ನು ರದ್ದು ಮಾಡಬೇಕು. ರೈತ ಉಳಿದರೆ ಲೋಕ ಉಳಿವುದು ಎಂಬ ಎಚ್ಚರ ಸರಕಾರಕ್ಕೆ ಇರಬೇಕು. ಎಂದು ಹೇಳಿದರು.
ಗುರುಮಿಠಕಲ್ ಖಾಸಾ ಮಠದ ಸ್ವಾಮಿಗಳು ಮಾತನಾಡಿ, ” ನಾವೆಲ್ಲರೂ ರೈತರ ಪರವಾಗಿದೇವೆ. ಸರಕಾರವು ಕೃಷಿ ಸಂಸ್ಕೃತಿ ಯನ್ನು ಗೌರವಿಸಬೇಕು. ಕಾಯ್ದೆಗಳನ್ನು ವಾಪಾಸು ತೆಗೆದುಕೊಂಡು ರೈತರ ಬೆಳೆಗೆ ವೈಜ್ಞಾನಿಕ ಬೆಲೆ ಕೊಡಬೇಕು” ಎಂದು ಆಗ್ರಹಿಸಿದರು.
ಧರಣಿಯನ್ನುದ್ದೇಶಿಸಿ ಕಾ.ಭಿಮಶೆಟ್ಟಿ ಯಂಪಳ್ಳಿ, ಕರ್ನಾಟಕ ರೈತ ಸಂಘ, ಸಿಪಿಐಎಂ ಸದಸ್ಯರಾದ ಶರಣಬಸಪ್ಪ ಮಮಶೆಟ್ಟಿ ಹಾಗೂ ಲೇಖಕಿ ಹಾಗೂ ಹೋರಾಟಗಾರ್ತಿ ಕೆ. ನೀಲಾ ಉಪಸ್ಥಿತರಿದ್ದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…