ಕೋಲಾರ : ಜಿಲ್ಲೆ ಮತ್ತು ತಾಲ್ಲೂಕಿನ ನರಸಾಪುರ ಗ್ರಾಮದಲ್ಲಿ ಕನ್ನಡಸೇನೆ ವತಿಯಿಂದ ಇಂದು ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮವನ್ನು ಸತ್ಯಾಂಬಿಕಾ ಮತ್ತು ವೇದಾಂಬಿಕ ಹಾಗೂ ರೇಣುಕಾ ಯಲ್ಲಮ್ಮ ಹಾಗೂ ಭುವನೇಶ್ವರಿ ಉತ್ಸವದ ಜೊತೆಗೆ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಶಾಸಕರಾದ ಶ್ರೀನಿವಾಸ ಗೌಡ ರವರು ಕನ್ನಡ ಬಾವುಟವನ್ನು ಧ್ವಜಾರೋಹಣ ಮಾಡುವುದರ ಮೂಲಕ ಮಾತನಾಡಿ ರಾಜ್ಯೋತ್ಸವವನ್ನು ಕರ್ನಾಟಕದಲ್ಲಿರುವ ಬಹುತೇಕ ಹಿಂದೂಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಧರ್ಮಬೇಧವಿಲ್ಲದೆ ಆಚರಿಸುತ್ತಾರೆ ಹಾಗೂ ಸರ್ಕಾರ ಮೆರವಣಿಗೆ ಆಟೋ ರಿಕ್ಷಾಗಳು ಮತ್ತು ಇತರೆ ವಾಹನಗಳು ಕನ್ನಡ ಧ್ವಜದ ಬಣ್ಣಗಳಾದ ಕೆಂಪು ಮತ್ತು ಹಳದಿ ವರ್ಣಬಾವುಟ ದೊಂದಿಗೆ ಅಲಂಕರಿಸಲಾಗಿರುತ್ತವೆ. ಅಲ್ಲದೆ ನಮ್ಮ ಕೋಲಾರ ಜಿಲ್ಲೆಯಲ್ಲಿ ಅನೇಕ ಭಾಷೆಗಳನ್ನು ಮಾತನಾಡುವ ಜನರಿದ್ದಾರೆ. ಮುಖ್ಯವಾಗಿ ನಾವು ನಮ್ಮ ಕನ್ನಡ ಭಾಷೆಯನ್ನು ಮಾತನಾಡಬೇಕು ಮತ್ತು ನಮ್ಮ ನಾಡು, ಭಾಷೆಯನ್ನು ಉಳಿಸಲು ಸದಾ ಸಿದ್ಧರಿರಬೇಕು ಎಂದರು.
ಅಲ್ಲದೆ ಪ್ರಕೃತಿ ಸೌಂದರ್ಯ, ಕಾಡು-ಮೇಡು, ವನ್ಯಜೀವಿಗಳು, ಸಾಹಿತ್ಯ, ಸಂಗೀತ, ಕಲೆ, ಸಂಸ್ಕೃತಿ, ಪರಂಪರೆ, ಆಹಾರ, ಆರೋಗ್ಯ, ರಂಗಭೂಮಿ, ಸಿನೆಮಾ, ವಿಜ್ಞಾನ, ತಂತ್ರಜ್ಞಾನ, ದೇಶದ ರಕ್ಷಣೆ, ಬಾಹ್ಯಾಕಾಶ, ಸಂಶೋಧನೆ ಇತ್ಯಾದಿ ಹತ್ತು ಹಲವು ಕ್ಷೇತ್ರಗಳಲ್ಲಿನ ಸಾಧನೆಗಳಿಂದ ಕರ್ನಾಟಕ
ರಾಜ್ಯ ಇಡೀ ಜಗತ್ತಿನಲ್ಲಿ ಹೆಸರಾಗಿದೆ. ಒಂದು ರಾಜ್ಯ ಹಲವು ಜಗತ್ತು ಅನ್ನುವ ಹೆಗ್ಗಳಿಕೆ ಹೊಂದಿರುವ ಕರ್ನಾಟಕ, ಭಾರತ ದೇಶದ ಅತ್ಯಂತ ಪ್ರಮುಖ ಮತ್ತು ಸಮರ್ಥ ರಾಜ್ಯಗಳಲ್ಲೊಂದಾಗಿ, ಭಾರತ ಜನನಿಯ ‘ತನು ಜಾತೆ’ಯಾಗಿ ರಾರಾಜಿಸುತ್ತಿದೆ ಎಂದರು.
ಡಾ. ಎನ್.ಸಿ. ನಾರಾಯಣಸ್ವಾಮಿ ರವರು ಮಾತನಾಡಿ ನವೆಂಬರ್ 1 ಕನ್ನಡ ರಾಜ್ಯೋತ್ಸವ. ನಮ್ಮ ರಾಜ್ಯದೆಲ್ಲೆಡೆ ನವೆಂಬರ್ 1 ನ್ನು ಕನ್ನಡ ದಿನವನ್ನಾಗಿ ಆಚರಿಸುತ್ತೇವೆ. ನಮ್ಮ ನಾಡು ಕನ್ನಡ ನಾಡು. ಕರ್ನಾಟಕವು ತನ್ನದೇ ಆದ ಹಿರಿಮೆ ಗರಿಮೆ ಮತ್ತು ಪರಂಪರೆಯುಳ್ಳ ಭಾರತದ ರಾಜ್ಯಗಳಲ್ಲಿ ಒಂದಾಗಿದೆ. ಪ್ರಕೃತಿ ಸೌಂದರ್ಯ, ವನ್ಯಸಮೃದ್ಧಿ ಹಾಗೂ ವಿಶ್ವ ಪರಂಪರೆಯ ಸಾಲಿನಲ್ಲಿ ಪ್ರಸಿದ್ಧಿಪಡೆದ ಕೀರ್ತಿ ನಮ್ಮ ಕರ್ನಾಟಕ ರಾಜ್ಯಕ್ಕಿದೆ ಆದ್ದರಿಂದ ಇಂದು ನರಸಾಪುರದಲ್ಲಿ ಕನ್ನಡಸೇನೆ ವತಿಯಿಂದ ಅದ್ದೂರಿವಾಗಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ನಾಗನಾಳ ವಿ.ಸೋಮಣ್ಣ ರವರು ಮಾತನಾಡಿ ಎಲ್ಲೆಡೆ ಕನ್ನಡದ ಹಾಡುಗಳು, ಕನ್ನಡಾಂಬೆಯ ಭಾವಚಿತ್ರದೊಂದಿಗೆ ಮೆರವಣಿಗೆ, ಕನ್ನಡ ಬಾವುಟಗಳ ಹಾರಾಟ, ಜೈಕಾರ, ಘೋಷಣೆಗಳಿಂದ ಕನ್ನಡ ಭಾಷೆ ಎಲ್ಲೆಡೆ ಮಾರ್ದನಿಸುತ್ತಿದೆ ಮುಖ್ಯವಾಗಿ ಇಂದು ನರಸಾಪುರದಲ್ಲಿ ಕನ್ನಡಸೇನೆ ವತಿಯಿಂದ ಕನ್ನಡ ಭಾಷೆಯನ್ನು ಉಳಿಸುವ ಮತ್ತು ಬೆಳೆಸುವ ಕಾರ್ಯ ನಡೆಯುತ್ತಿದೆ, ಕರ್ನಾಟಕದಲ್ಲಿರುವ ಪ್ರತಿಯೊಬ್ಬರು ಕನ್ನಡ ಭಾಷೆಯನ್ನು ಮಾತನಾಡಬೇಕು ಮತ್ತು ಉತ್ತಮ ಕನ್ನಡ ನಾಡನ್ನು ಕಟ್ಟಬೇಕು ಕನ್ನಡ, ಕರ್ನಾಟಕ ಬರೀ ಭಾಷೆಯಲ್ಲ, ಬರೀ ನೆಲವಲ್ಲ ಅದೊಂದು ಭಾವನಾತ್ಮಕ ಸಂಬಂಧ, ಎಂದೂ ಬಿಡಿಸಲಾರದ ಬಾಂಧವ್ಯ ಎಂದರು.
ಈ ಸಂದರ್ಭದಲ್ಲಿ ಮಾಧುರ್ಯ ಎಂಟರ್ ಫ್ರೈಸಸ್ ಮಾಲಿಕರಾದ ನಾಗರಾಜ್ ರವರು ಕನ್ನಡ ಅಭಿಮಾನಿಗಳಿಗೆ ಹಾಗೂ ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಕೋಲಾರ ಮತ್ತು ಬೆಂಗಳೂರು ಸಹಕಾರದೊಂದಿಗೆ ಸಾಂಸ್ಕೃತಿಕ. ಜಾನಪದ ಕಲಾ ತಂಡಗಳಿಂದ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ಸತ್ಯಾಂಬಿಕಾ ಮತ್ತು ವೇದಾಂಬಿಕ ಹಾಗೂ ರೇಣುಕಾ ಯಲ್ಲಮ್ಮ ದೇವಿಯರ ಮೆರವಣಿಗೆಯನ್ನು ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಕನ್ನಡ ಸೇನೆ ಕೋಲಾರ ತಾಲೂಕು ಅಧ್ಯಕ್ಷರಾದ ಎನ್ ಸಿ ಶಿವಚಂದ್ರಯ್ಯ. ಕನ್ನಡ ಸೇನೆ ರಾಜ್ಯ ಉಪಾಧ್ಯಕ್ಷರಾದ ಕಲಾವಿದರಾದ ವಿಷ್ಣು. ಕನ್ನಡ ಸೇನೆ ನಗರಾಧ್ಯಕ್ಷರಾದ ಶ್ರೀಧರ್. ಅವಾರ್ಡ್ ಸಂಸ್ಥೆಯ ಅಧ್ಯಕ್ಷರಾದ ಎಸ್ ನಾರಾಯಣಸ್ವಾಮಿ. ಸತ್ಯಾಂಬಿಕಾ ಮತ್ತು ವೇದಾಂಬಿಕ ದೇವಾಲಯದ ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ. ಅಧ್ಯಕ್ಷರಾದ ಎನ್ ಸಿ ಚಂದ್ರಮೋಹನ್. ಜಿಲ್ಲಾಧ್ಯಕ್ಷರಾದ ಗಣೇಶ್ ಗೌಡ. ತಾಲೂಕು ಪ್ರಧಾನ ಕಾರ್ಯದರ್ಶಿ ಜಾಲಿ ಶ್ರೀನಿವಾಸ್. ನಮ್ಮ ನಾಡು ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರಾದ ಎನ್ ಪಿ ನಾಗೇಶ್. ತಾಲೂಕು ಸಂಚಾಲಕರಾದ ಎನ್ ಎಂ ನಾಗೇಶ್. ಸಂಘಟನಾ ಕಾರ್ಯದರ್ಶಿ ಎನ್ ಎಂ ಮುನಿರಾಜ್. ಡಿ. ಎಂ ಮುನಿಯಲ್ಲಪ್ಪ. ಮುನಿಯಪ್ಪ. ಸೊಣ್ಣೇನಹಳ್ಳಿ ತಿಮ್ಮರಾಯಪ್ಪ ನರಸಾಪುರ ಹೋಬಳಿಯ ಉಪಾಧ್ಯಕ್ಷರು. ಪತ್ರಿಕಾ ಮಾದ್ಯಮದವರಾದ ಅವಿನಾಶ್. ಗೋಪಾಲಕೃಷ್ಣ. ಲೋಕೇಶ್. ನರಸಾಪುರ ಗ್ರಾಮದ ಹಿರಿಯರು. ಯುವ ಮುಖಂಡರು. ಗ್ರಾಮಸ್ಥರು ಭಾಗವಹಿಸಿದ್ದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…