ವಾಡಿ: ಸಮಾಜವಾದಿ ಚಿಂತನೆಗಳಡಿ ಹೋರಾಡುತ್ತ ದೇಶದ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ ಮಹಾನ್ ಕ್ರಾಂತಿಕಾರಿಗಳಾದ ಶಹೀದ್ ಭಗತ್‍ಸಿಂಗ್, ಚಂದ್ರಶೇಖರ ಆಜಾದ್, ಸುಭಷಚಂದ್ರ ಬೋಸ್, ಖುದಿರಾಮ ಬೋಸ್, ಅಶ್ಪಾಖುಲ್ಲಾ ಖಾನ್ ದಾರಿಯಲ್ಲಿ ಎಐಡಿಎಸ್‍ಒ ವಿದ್ಯಾರ್ಥಿ ಸಂಘಟನೆಯ ಚಳುವಳಿಗಳು ಸಾಗಿವೆ ಎಂದು ಎಸ್‍ಯುಸಿಐ ಕಮ್ಯುನಿಸ್ಟ್ ಪಕ್ಷದ ಕಾರ್ಯದರ್ಶಿ ಕಾಮ್ರೇಡ್ ವೀರಭದ್ರಪ್ಪ ಆರ್.ಕೆ ಹೇಳಿದರು.
ಪಟ್ಟಣದಲ್ಲಿ ಏರ್ಪಡಿಸಲಾಗಿದ್ದ ಎಐಡಿಎಸ್‍ಒ ಸಂಘಟನೆಯ 67ನೇ ಸಂಸ್ಥಾಪನಾ ದಿನ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ದೇಶದಲ್ಲಿ ಇಂದು ವಿದ್ಯಾರ್ಥಿಗಳು, ಯುವಜನರು, ಕಾರ್ಮಿಕರು, ರೈತರು, ಮಹಿಳೆಯರು ಉದ್ಯೋಗ ಅಭದ್ರತೆ ಹಾಗೂ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದಾರೆ.ಶಿಕ್ಷಣ ಮತ್ತು ಔದ್ಯೋಗಿಕ ಕ್ಷೇತ್ರಗಳ ಖಾಸಗೀಕರಣದಿಂದಾಗಿ ಜನರ ಜೀವನ ಮಟ್ಟ ಪಾತಾಳಕ್ಕೆ ಕುಸಿದಿದೆ. ಬಂಡವಾಳಶಾಹಿಗಳು ಕೃಷಿ ಕ್ಷೇತ್ರವನ್ನು ಹಿಡಿತಲ್ಲಿಟ್ಟುಕೊಳ್ಳಲು ಮುಂದಾಗಿದ್ದು, ಕೇಂದ್ರ ಸರಕಾರ ಶೋಷಕರ ಬೆಂಗಾವಲಾಗಿ ನಿಂತಿದೆ. ದೇಶದಲ್ಲಿ ಜನಾತಾಂತ್ರಿಕ ಹೋರಾಟಗಳು ಭುಗಿಲೇಳುತ್ತಿದ್ದು, ಅವುಗಳ ಮೆಲೆ ನಿಯಂತ್ರಣ ಸಾಧಿಸಲು ಕೊರೊನಾದಂತಹ ಪ್ರಕರಣವನ್ನು ಆಡಳಿತಗಾರರು ದುರುಪಯೋಗ ಪಡೆಸಿಕೊಳ್ಳುತ್ತಿದ್ದಾರೆ.
ಹೋರಾಟಗಳನ್ನು ಹತ್ತಿಡಲು ಎಲ್ಲಾರೀತಿಯ ತಂತ್ರಗಾರಿಕೆ ನಡೆಸುತ್ತಿದ್ದರೂ ಚಳುವಳಿಗರರು ಮಾತ್ರ ಹಿಂದೆ ಸರಿಯುತ್ತಿಲ್ಲ. ಕಾರ್ಪೋರೇಟ್ ದೊರೆಗಳ ಪಾದಸೇವೆಗೆ ನಿಂತಿರುವ ಕೇಂದ್ರ ಸರಕಾರದ ಎಲ್ಲಾ ನೀತಿಗಳನ್ನು ಸೋಲಿಸಲು ಜನೈಕ್ಯ ಹೋರಾಟಗಳು ನಿರಂತರವಾಗಿ ಸಂಘಟಿಸಬೇಕಿದೆ ಎಂದರು.
ಎಐಡಿಎಸ್‍ಒ ಅಧ್ಯಕ್ಷ ಗೌತಮ ಪರತೂರಕರ, ಕಾರ್ಯದರ್ಶಿ ವೆಂಕಟೇಶ ದೇವದುರ್ಗಾ, ಮುಖಂಡರಾದ ಅರುಣಕುಮಾರ ಹಿರೆಬಾನರ್, ದತ್ತಾತ್ರೇಯ ಹುಡೇಕರ, ಗೋವಿಂದ ಹೆಳವಾರ, ಪ್ರಕಾಶ ಪೂಜಾರಿ, ಮರಲಿಂಗ, ಸಿದ್ಧಾರ್ಥ ಪಾಲ್ಗೊಂಡಿದ್ದರು. ಇದೇ ವೇಳೆ ಎಐಡಿಎಸ್‍ಒ ಸಂಸ್ಥಾಪಕ ಅಧ್ಯಕ್ಷ ಕಾಮ್ರೇಡ್ ಶಿವದಾಸ ಘೋಷ್ ಅವರ ಭಾವಚಿತ್ರಕ್ಕೆ ಪುಷ್ಪಮಾಲೆ ಅರ್ಪಿಸುವ ಮೂಲಕ ಕಾರ್ಯಕರ್ತರು ಲಾಲ್ ಸಲಾಂ ಸಲ್ಲಿಸಿದರು.
ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…
ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…
ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…