ಬಿಸಿ ಬಿಸಿ ಸುದ್ದಿ

ರಘುಪತಿ ರಾಘವ ರಾಜಾ ರಾಮ್’, ’ಸಂಜೀವಿನಿ’ ಕಿರು ಚಲನಚಿತ್ರಗಳು ಜೂ. 16 ರಂದು ಬಿಡುಗಡೆ: ಶಿವತಪಸ್ವಿ

ಯಾದಗಿರಿ: ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಎರಡು ಕಿರುಚಿತ್ರಗಳನ್ನು ನಿರ್ಮಿಸಿ ಬೆಂಗಳೂರಿನ ಕತ್ರಿಗುಪ್ಪೆಯ ಬಳಿಯ ಪ್ರಯಾಗ ಚಿತ್ರಮಂದಿರದಲ್ಲಿ ಜೂನ್ ೧೬ರಂದು ಬೆಳಗ್ಗೆ ಕ್ಕೆ ಬಿಡುಗಡೆ ಮಾಡಲಾಗುತ್ತಿದೆ ಎಂದು ನಿರ್ಮಾಪಕರಲ್ಲೊಬ್ಬರಾದ ಹಾಗೂ ಸಹ ನಾಯಕನಟರಾಗಿ ಅಭಿನಯಿಸಿರುವ ಯಾದಗಿರಿ ಜಿಲ್ಲೆಯ ಹೆಡಿಗಿಮುದ್ರಾ ಗ್ರಾಮದ ಶಿವತಪಸ್ವಿ ತಿಳಿಸಿದರು.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸ್ಕಂದ ಪಿಕ್ಚರ‍್ಸ್ ಮತ್ತು ಸಾನಾಶಿ ಕ್ರಿಯೇಶನ್ಸ್ ಬ್ಯಾನರ್ ಗಳ ಜಂಟಿ ಆಶ್ರಯದಲ್ಲಿ ನಿರ್ಮಾಣಗೊಂಡಿರುವ ಎರಡು ಚಿತ್ರಗಳ ಪೈಕಿ ’ರಘುಪತಿ ರಾಘವ ರಾಜಾರಾಮ್’ ಚಿತ್ರದಲ್ಲಿ ಕರ್ನಾಟಕದ ಭೂಗತ ಲೋಕದ ಕಥೆಯನ್ನು ಒಳಗೊಂಡಿದ್ದು ವಿಭಿನ್ನವಾಗಿ ಮೂಡಿಬಂದಿದೆ. ಈ ಚಿತ್ರದಲ್ಲಿ ತಾವು (ಶಿವತಪಸ್ವಿ) ರಾಘವ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ. ಹಾಗೂ ಯರಗೋಳ ಗ್ರಾಮದ ಶಿವಯೋಗಿ ಭೀಮನಳ್ಳಿ ರವರು ಸೀತಾರಾಮ್ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ.

’ಸಂಜೀವಿನಿ’ ಚಿತ್ರದಲ್ಲಿ ಸಮಾಜಿಕ ಸಂದೇಶವಿರುವ ಕಥೆಯ ಹಂದರ ಒಳಗೊಂಡಿದೆ ಎಂದು ಅವರು ತಿಳಿಸಿದ್ದಾರೆ. ವಿಶೇಷವೆಂದರೆ ಈ ಚಿತ್ರದಲ್ಲಿ ನಾಯಕಿ ನಟಿ ಇಲ್ಲದಿರುವುದು ಇನ್ನೊಂದು ವಿಶೇಷ ಎಂದು ಅವರು ತಿಳಿಸಿದ್ದಾರೆ.
ಬಿಡುಗಡೆ ಸಮಾರಂಭದಲ್ಲಿ ಲಯಾ ಸಾಧುಕೋಕಿಲ (ಸಾಧು ಕೋಕಿಲ ಅವರ ಸಹೋದರ), ಹಿರಿಯ ನಟ ಸರಿಗಮ ವಿಜಿ, ನನ್ನ ನಿನ್ನ ಪ್ರೇಮಕಥೆ ನಿರ್ದೇಶಕ ಶಿವು ಜಮುಖಂಡಿ, ’ಕಿರಿಕ್ ಲೈಫ್’ ನಿರ್ದೇಶಕ ಗುರುರಾಜ ಕುಲಕರ್ಣಿ ಇನ್ನಿತರ ಚಿತ್ರರಂಗದ ಹಿರಿಯ ಕಲಾವಿದರು ಪಾಲ್ಗೊಳ್ಳಲಿದ್ದಾರೆ. (ಈ ಕಿರಿಕ್ ಲೈಫ್ ಚಿತ್ರಕ್ಕೆ ತಾವು ಸಹಾಯಕ ನಿರ್ದೇಶಕರಾಗಿ ಶಿವತಪಸ್ವಿ ನಿಯುಕ್ತಿಗೊಂಡಿದ್ದಾರೆ.)ಎರಡೂ ಚಿತ್ರಗಳ ಕಥೆ, ಚಿತ್ರಕಥೆ, ನಿರ್ದೇಶನವನ್ನು ಈ ಚಿತ್ರಗಳ ನಾಯಕ ನಟರೂ ಆಗಿರುವ ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನವರೇ ಆದ ಬಾಲಕೃಷ್ಣ ಯಾದವ ಮಾಡಿದ್ದಾರೆ.

ಈ ಚಿತ್ರದಲ್ಲಿ ಮುಖ್ಯ ಖಳನಾಯಕನಾಗಿ ಶಿವಯೋಗಿ ಯರಗೋಳ ಅಭಿನಯಿಸಿದ್ದಾರೆ. ಮತ್ತು ಸಹ ನಾಯಕ ನಟನಾಗಿ ತಾವು (ಶಿವತಪಸ್ವಿ ಹೆಡ್ಗಿಮುದ್ರಾ) ಅಭಿನಯಿಸಿರುವುದಾಗಿ ತಿಳಿಸಿದ್ದಾರೆ.

ಉಭಯ ಚಿತ್ರಗಳಿಗೆ ಛಾಯಾಚಿತ್ರಗ್ರಾಹಕರಾಗಿ ಪುನಿತ್ ಗೌಡ, ಸಂಗೀತವನ್ನು ಪ್ರದ್ಯುತನ್ ನೀಡಿದ್ದಾರೆ. ಸಂಕಲನವನ್ನು ಎ. ನಾಗಿರೆಡ್ಡಿ ನೆರವೇರಿಸಿದ್ದಾರೆ. ಚಿತ್ರದಲ್ಲಿ ಸಹ ನಟರಾಗಿ ಶೇಕ್ಷಾ, ಪ್ರಭು, ಸುನಿಲ್ ಕುಮಾರ, ಕಬು, ಪಿ.ಎಂ. ರಘು ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ.

emedialine

Recent Posts

ನ್ಯಾಯವಾದಿ ವಿನೋದ ಕುಮಾರ ಎಸ್. ಜೇ. ನಾಮಪತ್ರ ಸಲ್ಲಿಕೆ

ಕಲಬುರಗಿ: ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗರುವ ಇಂದು 2024-2029 ಸಾಲಿನ, ಜಿಲ್ಲಾ ಘಟಕಕ್ಕೆ…

3 hours ago

13 ಫಲಾನುಭವಿ ಆಧಾರಿತ ಯೋಜನೆಗಳಡಿ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಕಲಬುರಗಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಈ ಕೆಳಕಂಡ 13 ಫಲಾನುಭವಿ ಆಧಾರಿತ…

3 hours ago

ಕಾರ್ಮಿಕರ ಸಚಿವರ ಕಲಬುರಗಿ ಪ್ರವಾಸ ರದ್ದು

ಕಲಬುರಗಿ: ರಾಜ್ಯದ ಕಾರ್ಮಿಕ ಸಚಿವರಾದ ಸಂತೋಷ ಎಸ್. ಲಾಡ್ ಅವರು ಜುಲೈ 5 ರಂದು ಶುಕ್ರವಾರ ಕೈಗೊಳ್ಳಬೇಕಿದ್ದ ಕಲಬುರಗಿ ಜಿಲ್ಲಾ…

3 hours ago

ರಾಜ್ಯ-ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಾಶಿ ಮಾದರಿಯಲ್ಲಿ ದತ್ತನ‌ ಕ್ಷೇತ್ರ ಅಭಿವೃದ್ಧಿ

ಕರ್ನಾಟಕ‌ ವಿಧಾನಸಭೆ ಅರ್ಜಿಗಳ ಸಮಿತಿಯಿಂದ ಗಾಣಗಾಪುರ ದೇವಸ್ಥಾನ ಅಭಿವೃದ್ಧಿ ಕುರಿತು ಚರ್ಚೆ ಕೇಂದ್ರಕ್ಕೆ ಸಮಿತಿ ನಿಯೋಗ ತೆರಳಲು ನಿರ್ಧಾರ ಕಲಬುರಗಿ;…

3 hours ago

ಚಿಂಚೋಳಿ: ಶರಣು ಪಾಟೀಲ್ ಮೋತಕಪಲ್ಲಿ ನಾಮಪತ್ರ ಸಲ್ಲಿಕೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ ಚಿಂಚೋಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ಇದೆ 21 ರಂದು…

4 hours ago

ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ತಿದ್ದು ಪಡಿಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ಈ ಕೆಳಕಂಡತೆ ತಿದ್ದು ಪಡಿ ಮಾಡಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ,…

5 hours ago