ಹೈದರಾಬಾದ್ ಕರ್ನಾಟಕ

ಬರಹಗಾರರಿಗೆ ಅಕ್ಷರವೇ ಅಸ್ತ್ರ; ಅಕ್ಷರವೇ ಶಸ್ತ್ರ ವಾಗಬೇಕು: ಡಾ. ಬಸವರಾಜ ಡೋಣೂರ

ಕಲಬುರಗಿ: ಕವಿ, ಸಾಹಿತಿ, ಲೇಖಕ, ಬರಹಗಾರರಾದವರು ಅಕ್ಷರದೊಂದಿಗೆ ವ್ಯವಹರಿಸಿ ಹೊಸ ಬೆಳಕು ನೀಡಬೇಕು. ಮನುಕುಲದ ಉದ್ಧಾರದ, ಆರೋಗ್ಯಪೂರ್ಣ ಸಮಾಜ, ರಾಷ್ಟ್ರದ ಕನಸು ಇರಬೇಕು ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗದ ಪ್ರಾಧ್ಯಾಪಕ ಪ್ರೊ. ಬಸವರಾಜ ಡೋಣೂರ ಹೇಳಿದರು.

ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಪ್ರೊ. ಎಸ್.ಆರ್. ನಿರಂಜನ ಭವನ ಕಲ್ಯಾಣ ಕರ್ನಾಟಕ ಲೇಖಕರ ಗ್ರಂಥಾಲಯ ಹಾಗೂ ಭಾವಚಿತ್ರಗಳ ಸಂಗ್ರಹಾಲಯದಲ್ಲಿ ಭಾನುವಾರ ಆಯೋಜಿಸಿದ್ದ ಕವಿ ಕಾವ್ಯ ಕೃತಿಗಳ ಅನುಸಂಧಾನ: ಸರಣಿ ಮಾತುಕತೆ ಮಾಲಿಕೆ ಉದ್ಘಾಟಿಸಿ ಮಾತನಾಡಿದರು.

ಮಕ್ಕಳಿಗೆ ಅಕ್ಷರ, ಶಿಕ್ಷಣ, ಸಾಹಿತ್ಯವನ್ನು ಹೇಗೆ ನೀಡಬೇಕು ಎಂಬುದನ್ನು ಇಂದು ಪಾಲಕರು ಆಯ್ಕೆ ಮಾಡಿಕೊಳ್ಳಬೇಕಿದೆ. ನಾವಿಂದು ಸಾಹಿತ್ಯ, ಸಂಸ್ಕೃತಿ, ಅಕ್ಷರದ ಕಾಲದಲ್ಲಿದ್ದೇವೆ. ಈ ಸಂದರ್ಭದಲ್ಲಿ ತತ್ವ, ಸಿದ್ಧಾಂತ ಪ್ರತಿಪಾದನೆಗೆ ಭಾಷೆ ಬೇಕು ಅಷ್ಟೇ! ಎಂದು ವಿವರಿಸಿದರು.

ಕನ್ನಡದಲ್ಲಿ ಇರುವ ವಿದ್ವತ್ತು ಬೇರಾವ ಭಾಷೆಯಲ್ಲಿ ಇಲ್ಲ. ಇಲ್ಲಿ ನಡೆಯುವ ಚರ್ವೆ, ಚಿಂತನೆ, ಪುಸ್ತಕ ಪ್ರಕಟಣೆ, ಗುಣಮಟ್ಟ ಇವೆಲ್ಲವುಗಳನ್ನು ಗಮನಿಸಿದರೆ ಕನ್ನಡ ಎಂತಹ ಶ್ರೇಷ್ಠ ಭಾಷೆ ಎಂಬುದು ಗೊತ್ತಾಗುತ್ತದೆ ಎಂದು ವಿವರಿಸಿದರು.

ಸಾಮಾಜಿಕ ಜವಾಬ್ದಾರಿ ಹೊಂದಿರುವ ಲೇಖಕ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ಅಕ್ಷರವೇ ಅಸ್ತ್ರ, ಅಕ್ಷರವೇ ಶಸ್ತ್ರ ಎಂದು ಅವರು ಬಣ್ಣಿಸಿದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ. ಎಚ್. ಟಿ. ಪೋತೆ ಮಾತನಾಡಿ, ಕವಿ-ಕಾವ್ಯ-ಕೃತಿಗಳ ಅನುಸಂಧಾನ ಮಾಡುವುದು ಇಂದಿನ ಅಗತ್ಯ. ಈ ಮಾಲಿಕೆ ಕಾರ್ಯಕ್ರಮಕ್ಕೆ ಸಹೃದಯರ ಸಹಕಾರ ಬೇಕು ಎಂದರು.

ಒಂದು ಕೃತಿ ದರ್ಶನವನ್ನು ದರ್ಶಿಸಬೇಕು. ಬಿಡುಗಡೆ, ಮುಕ್ತಿಯ ಮಾರ್ಗ ತೋರಿಸಬೇಕು. ಶಿಕ್ಷಕ ಕೇವಲ ಮಾಹಿತಿ ನೀಡುವ ವ್ಯಕ್ತಿಯಲ್ಲ. ಸತ್ಯ ತೋರಿಸುವ ಮಾರ್ಗದರ್ಶನ ಮಾಡುತ್ತಾನೆ. ಸತ್ಯದ ಹುಡುಕಾಟದಲ್ಲಿ ನಾವೆಲ್ಲರೂ ತೊಡಗಬೇಕು.
ಜಾತಿ, ಧರ್ಮದ ಹಂಗು ತೊರೆಯಬೇಕು. ಅದುವೇ ರಾಷ್ಟ್ರ ಧರ್ಮ ಎಂದು ತಿಳಿಸಿದರು.

ಡಾ. ವಿಕ್ರಮ ವಿಸಾಜಿ ಅವರ ಬಿಸಿಲ ಕಾಡಿನ ಹಣ್ಣು ಕೃತಿಯನ್ನು ಕುರಿತು ಡಾ.‌ಶ್ರೀಶೈಲ ನಾಗರಾಳ, ಡಾ. ಶ್ರೀನಿವಾಸ ಸಿರನೂರಕರ ಅವರ ಪುರಂದರ ಬಂಡಾಯ ಕೃತಿಯನ್ನು ಕುರಿತು ಡಾ. ದಸ್ತಗೀರಸಾಬ್ ದಿನ್ನಿ ಅನುಸಂಧಾನ ನಡೆಸಿದರು.

ಡಾ. ಶ್ರೀನಿವಾಸ ಸಿರನೂರಕರ್ ವೇದಿಕೆಯಲ್ಲಿ ಇದ್ದರು. ಪ್ರಾರ್ಥಿಸಿದರು. ಡಾ. ಎಂ.ಬಿ. ಕಟ್ಟಿ ಸ್ವಾಗತಿಸಿದರು. ಸುವರ್ಣಾ ಹಿರೇಮಠ ನಿರೂಪಿಸಿದರು. ಡಾ. ಸಂತೋಷ ಮೇಲಕೇರಿ ವಂದಿಸಿದರು.

ಡಾ. ವಿ.ಜಿ.ಪೂಜಾರ, ಸುಬ್ಬರಾವ ಕುಲಕರ್ಣಿ, ಮಹಿಪಾಲರೆಡ್ಡಿ ಮುನ್ನೂರ್, ಅಜೀಮ್ ಪಾಶಾ, ಸಿದ್ಧರಾಮ ಹೊನ್ಕಲ್, ಪ. ಮಾನು ಸಗರ, ಡಾ. ಶಿವರಂಜನ್ ಸತ್ಯಂಪೇಟೆ, ಡಾ. ಸುಜಾತಾ ಜಂಗಮಶೆಟ್ಟಿ, ಡಾ. ಸೂರ್ಯಕಾಂತ ಸುಜ್ಯಾತ ಇತರರು ಇದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

16 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago