ಅಸಂಘಟಿತ ಕಾರ್ಮಿಕರು ಒಂದಾಗಿ ಸರ್ಕಾರದ ಸೌಲಭ್ಯ ಪಡೆದುಕೊಂಡು ಭವಿಷ್ಯ ರೂಪಿಸಿಕೊಳ್ಳಲಿ: ನಾಗೇಶ ಡಿ.ಜಿ.

ಕಲಬುರಗಿ: ಅಸಂಘಟಿತ ಕಾರ್ಮಿಕರು ಒಂದಾಗಿ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಲಿ ಎಂದು ಕಲಬುರಗಿ ಪ್ರಾದೇಶಿಕ ವಿಭಾಗದ ಉಪಕಾರ್ಮಿಕ ಆಯುಕ್ತರಾದ ನಾಗೇಶ ಡಿ.ಜಿ. ಹೇಳಿದರು.

ಇಂದು ನಗರದ ಅನ್ನಪೂರ್ಣ ಕ್ರಾಸನಲ್ಲಿರುವ ಕಲಾಮಂಡಳದಲ್ಲಿ ಕರ್ನಾಟಕ ರಾಜ್ಯ ಟೇಲರ‍್ಸ್ ಮತ್ತು ಸಹಾಯಕರ ಫೆಡರೇಷನ ಎ.ಐ.ಟಿ.ಯು.ಸಿ. ವತಿಯಿಂದ ಟೇಲರ‍್ಸಗಳ ಪ್ರಥಮ ಜಿಲ್ಲಾ ಸಮಾವೇಶ ಉದ್ಘಾಟಿಸಿ ಮಾತನಾಡುತ್ತಾ ಪ್ರತಿಯೊಬ್ಬ ಮನುಷ್ಯನು ಸೋಲೆಂಬ ರೋಗ ಕೊಲ್ಲಲು ಆತ್ಮವಿಶ್ವಾಸ ಮತ್ತು ಸತತ ಪರಿಶ್ರಮದ ಮೆಟ್ಟಿಲು ಹತ್ತಿದಾಗ ಮಾತ್ರ ಸಾಧನೆ ಶಿಖರವೇರಬಹುದು. ಟೇಲರ‍್ಸ್‌ಗಳ ವೃತ್ತಿ ಬಹಳ ಪವಿತ್ರವಾದುದು. ಪ್ರತಿಯೊಬ್ಬ ವ್ಯಕ್ತಿ ಚೆನ್ನಾಗಿ ಬಟ್ಟೆ ಧರಿಸಕೊಂಡು ಉತ್ತಮನಾಗಿ ಕಾಣುತ್ತಿದ್ದರೆ ಅದಕ್ಕೆ ಟೇಲರ್‌ಗಳೆ ಕಾರಣಿಕರ್ತರೂ ಈ ವೃತ್ತಿ ಮಾಡುವವರು ವಯಸ್ಸಾದ ಮೇಲೆ ಜೀವನಕ್ಕೆ ಯಾವುದೇ ಭದ್ರತೆ ಇರದೇ ಸಂಕಷ್ಟದಲ್ಲಿ ಜೀವನ ಮಾಡುತ್ತಿದ್ದಾರೆ. ಇಂತಹವರನ್ನು ಕಡೆಗಣಿಸದೆ ಅವರನ್ನು ಗುರುತಿಸಿ ಸರ್ಕಾರದ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಮುಟ್ಟಿಸಲು ಪ್ರಯತ್ನಿಸುತ್ತೇನೆ. ಟೇಲರಗಳನ್ನು ಒಂದುಗೂಡಿಸಿ ಸಮಾವೇಶ ಹಮ್ಮಿಕೊಂಡು ಬಡವರ ಕಣ್ಣೀರು ಒರೆಸುತ್ತಿರುವ ಎ.ಐ.ಟಿ.ಯು.ಸಿ. ಸಂಘಟನೆಯ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಕ್ಕಮಹಾದೇವಿ ಆಶ್ರಮದ ಪೂಜ್ಯ ಪ್ರಭುಶ್ರೀ ತಾಯಿ ಮಾತನಾಡುತ್ತಾ ೧೨ನೇ ಶತಮಾನದಲ್ಲಿ ಶರಣರು ಕಾಯಕಕ್ಕೆ ಮಹತ್ವ ಕೊಟ್ಟು ಯಾವುದೇ ವೃತ್ತಿ ಮೇಲು ಕೀಳು ಎಂಬ ಭಾವನೆ ತರದೆ ಎಲ್ಲಾ ವೃತ್ತಿಯೂ ಸರಿಸಮಾನವೆಂದು ಸಂದೇಶ ನೀಡಿದ್ದಾರೆ. ಅದೇ ರೀತಿ ಬಟ್ಟೆ ಹೊಲಿಯುವ ಕಾಯಕವು ಪವಿತ್ರ ವೃತ್ತಿಯಾಗಿತ್ತು ಎಂಬುವುದಕ್ಕೆ ಹಲವಾರು ಉದಾಹರಣೆಗಳ ಸಮೇತ ಹೇಳುವುದರೊಂದಿಗೆ ಮಾರ್ಮಿಕವಾಗಿ ನುಡಿಯುತ್ತಾ ಟೇಲರ‍್ಸಗಳಿಗೆ ಕಲ್ಯಾಣ ಮಂಡಳಿ ಸ್ಥಾಪಿಸಿ ಸರ್ಕಾರಿ ಸೌಲಭ್ಯಗಳು ದೊರೆಯಲಿ ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎ.ಐ.ಟಿ.ಯು.ಸಿ. ಜಿಲ್ಲಾಧ್ಯಕ್ಷರಾದ ಪ್ರಭುದೇವ ಯಳಸಂಗಿ ವಹಿಸಿದ್ದರು. ಭಾರತ ಕಮ್ಯುನಿಷ್ಟ ಪಕ್ಷದ ಜಿಲ್ಲಾ ಕಾರ್ಯದರ್ಶಿಗಳಾದ ಭೀಮಾಶಂಕರ ಮಾಡಿಯಾಳ, ಅಖಿಲ ಭಾರತ ಯುವಜನ ಒಕ್ಕೂಟದ ಮಾಜಿ ರಾಜ್ಯಾಧ್ಯಕ್ಷರಾದ ಜಾಫರ ಚಿತ್ರದುರ್ಗ, ಕಲಬುರಗಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಭವಾನಿಸಿಂಗ ಠಾಕೂರ, ಎ.ಐ.ಟಿ.ಯು.ಸಿ. ಜಿಲ್ಲಾ ಕಾರ್ಯದರ್ಶಿಗಳಾದ ಹೆಚ್. ಎಸ್. ಪತಕಿ, ಎನ್.ಎಫ್.ಐ.ಡಬ್ಲು. ಮಹಿಳಾ ಮುಖಂಡರಾದ ಶ್ರೀಮತಿ ಪದ್ಮಾವತಿ ಮಾಲಿಪಾಟೀಲ, ಅಖಿಲ ಭಾರತ ಯುವಜನ ಒಕ್ಕೂಟ ಜಿಲ್ಲಾಧ್ಯಕ್ಷರಾದ ನ್ಯಾಯವಾದಿ ಹಣಮಂತರಾಯ ಅಟ್ಟೂರ ಇದ್ದರು. ಇದೇ ಸಂದರ್ಭದಲ್ಲಿ ಟೇಲರ್‌ಗಳಿಗೆ ಕಾರ್ಮಿಕ ಇಲಾಖೆಯಿಂದ ಮಾಸ್ಕ್, ಸ್ಯಾನಿಟೈಸರ್ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಅನಿತಾ ಭಕರೆ, ಕಲ್ಯಾಣಿ ತುಕ್ಕಾಣಿ, ಸುಜಾತಾ ಪಾಟೀಲ, ವಿಠಲ ಕುಂಬಾರ ಸುಲ್ತಾನಪೂರ, ಮಹಾದೇವಿ ಎಂ. ಪೂಜಾರಿ, ಸೂರ್ಯಕಾಂತ ಎಂ. ಹುಲಿ, ಮಹಾದೇವಿ ಪೂಜಾರಿ, ಗುಂಡಮ್ಮಾ ಕಣ್ಣಿ, ರಾಜೇಂದ್ರ ರೋಳೆ, ರುಕ್ಮಿಣಿ ಎಸ್. ಕಾಳಗಿ, ಮಲ್ಲಿಕಾರ್ಜುನ ಖೇಳಗಿ, ಹೇಮಾ ಹೂಗಾರ, ಚಂದ್ರಕಾಂತ ದಾಡಗೆ, ಪ್ರಿಯಾಂಕ ರಾಠೋಡ, ಲಕ್ಷ್ಮೀ ಪೂಜಾರಿ, ಜಯಶ್ರೀ ಮಠಪತಿ, ಸಿದ್ದಯ್ಯಸ್ವಾಮಿ ಬೇಲೂರ, ಶಿವರಾಜ ನಾಗೂರ, ಪ್ರಭು ಶ್ರೀಚಂದ, ಲಕ್ಷ್ಮೀ ಭಾಗೋಡಿ, ನಂದಾ, ಮಹೇಶ್ವರಿ ಶಿರೂರ, ಶ್ರೀದೇವಿ ಹಿರೇಮಠ, ಶರಣಪ್ಪಾ ಹೀರಾ ಜಮಾದಾರ, ವಿದ್ಯಾ ದೇಶಮುಖ, ಮೀನಾಕ್ಷಿ ವಿನೋದಕುಮಾರ, ಕುಪೇಂದ್ರ ಬಿರಾದಾರ, ಮಹಾದೇವಿ ಬಿರಾದಾರ, ದಿಲೀಪ ಭಕರೆ ಸೇರಿದಂತೆ ನೂರಾರು ಜನ ಟೇಲರ‍್ಸಗಳು ಭಾಗವಹಿಸಿದ್ದರು.

emedialine

Recent Posts

ಮಣಿಕಂಠ ರಾಠೋಡ ಆರೋಪ ಸತ್ಯಕ್ಕೆ ದೂರ | ಅಕ್ರಮ‌ವಾಗಿ ಅಕ್ಕಿ ಸಾಗಾಟವಾಗಿಲ್ಲ: ಆಹಾರ ಇಲಾಖೆ ಸ್ಪಷ್ಟನೆ

ಕಲಬುರಗಿ: ಕಳೆದ‌ ಅಕ್ಟೋಬರ್ 2 ರಂದು‌ ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…

6 hours ago

ರುಕ್ಮಾಪುರ: ಶ್ರೀ ದೇವಿ ಪಾರಾಯಣ ನಾಳೆಯಿಂದ

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…

9 hours ago

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

14 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

14 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

16 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

1 day ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420