ಕಲಬುರಗಿ: ಗ್ರಾಮದಲ್ಲಿ ಯಾವುದೇ ಚುನಾವಣೆ ಬಂದಾಗ ಚುನಾವಣೆ ಮಾಡಿ ಮರುದಿವಸ ಎಲ್ಲರೂ ಪಕ್ಷಬೇಧ ಮರೆತು ಒಂದಾಗಿ ಗ್ರಾಮದ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದು ಪಾಳಾ ಗ್ರಾಮದ ಹಿರಿಯ ಮುಖಂಡರಾದ ಕೃಷ್ಣ ಕುಲಕರ್ಣಿಯವರು ಹೇಳಿದರು.
ಇಂದು ನಗರದ ಗಾಜಿಪೂರ ಬಡಾವಣೆಯಲ್ಲಿ ಸ್ನೇಹ ಸಂಗಮ ವಿವಿದೊದ್ದೇಶ ಸೇವಾ ಸಂಘದ ವತಿಯಿಂದ ಪಾಳಾ ಗ್ರಾಮ ಪಂಚಾಯತಿಗೆ ನೂತನವಾಗಿ ಆಯ್ಕೆಯಾದ ಸರ್ವ ಸದಸ್ಯರಿಗೆ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಾ ಜನರು ಜಾತಿ, ಮತ, ಧರ್ಮ ಬದಿಗಿಟ್ಟು ಗ್ರಾಮ ಅಭಿವೃದ್ಧಿ ಮಾಡುತ್ತಿರೆಂಬ ವಿಶ್ವಾಸದಿಂದ ಮತ ನೀಡಿ ಗೆಲ್ಲಿಸಿರುತ್ತಾರೆ. ಅವರ ನಂಬಿಕೆ ವಿಶ್ವಾಸಕ್ಕೆ ಕಪ್ಪು ಚುಕ್ಕೆ ಬರದ ಹಾಗೇ ಸರ್ವರನ್ನು ಒಂದುಗೂಡಿಸಿ ಗ್ರಾಮ ಅಭಿವೃದ್ಧಿ ಮಾಡುವುದೇ ನಿಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಸಂಘದ ಅಧ್ಯಕ್ಷರಾದ ನ್ಯಾಯವಾದಿ ಹಣಮಂತರಾಯ ಅಟ್ಟೂರ ಮಾತನಾಡುತ್ತಾ ಗ್ರಾಮದಲ್ಲಿ ಚುನಾಯಿತ ಸದಸ್ಯರು, ಸ್ಪರ್ದೆ ಮಾಡಿದ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಮೀಣ ಮಟ್ಟದಲ್ಲಿ ಶಾಂತಿ, ಸಮೃದ್ಧಿ ನೆಲೆಸುವಂತೆ ತಮ್ಮ ಕಾರ್ಯ ಮಾಡಬೇಕೆಂದು ಕಿವಿ ಮಾತು ಹೇಳಿದರು.
ವೇದಿಕೆಯ ಮೇಲೆ ಈ ಭಾಗದ ಸಂಗೀತ ಕಲಾವಿದ ಶ್ರವಣಕುಮಾರ ಮಠ, ರಘುನಂದನ ಕುಲಕರ್ಣಿ, ಜನಪದ ಕಲಾವಿದ ರಾಜು ಹೆಬ್ಬಾಳ, ಕಲ್ಯಾಣರಾವ ಮುರುಡ ಇದ್ದರು.
ಇದೇ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದ ಗ್ರಾಮಪಂಚಾಯತ ಸದಸ್ಯರಾದ ಗೌಡಪ್ಪಗೌಡ ಸಿ. ಪಾಟೀಲ, ಸುನೀತಾ ಸೂರ್ಯಕಾಂತ ಪಾಟೀಲ, ಚಂದ್ರಶೇಖರ ಆರ್. ಪೂಜಾರಿ, ಪ್ರಮೀಳಾ ಬಿ. ಸುಬೇದಾರ, ಶಿವಯೋಗಿ ಎಸ್. ಭಜಂತ್ರಿ, ಮಲ್ಲಮ್ಮ ಮಾಪಣ್ಣ ಇವರನ್ನು ವಿಶೇಷವಾಗಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಧುಸೂಧನ ಕುಲಕರ್ಣಿ, ಗುಂಡಮ್ಮ ಕುಲಕರ್ಣಿ, ವರಲಕ್ಷ್ಮೀ ಕುಲಕರ್ಣಿ, ಬಾಪುಗೌಡ ಮಾಲಿಪಾಟೀಲ, ಕಿರಣ ಕುಲಕರ್ಣಿ, ಮಾರುತಿ ಹಕ್ಕಿ, ಪ್ರವೀಣ ಕುಲಕರ್ಣಿ, ರಕ್ಷಿತಾ ಕುಲಕರ್ಣಿ, ಭೀಮಾಶಂಕರ ಸುಬೇದಾರ, ರಾಹುಲ ಕುಲಕರ್ಣಿ, ಶಿವಕುಮಾರ ಪಂಚಾಳ,ಅಮಿತ ಕುಲಕರ್ಣಿ ಸೇರಿದಂತೆ ಹಲವಾರು ಜನ ಭಾಗವಹಿಸಿದ್ದರು.
ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…
ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…
ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…
ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…
ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…