ಬಿಸಿ ಬಿಸಿ ಸುದ್ದಿ

ಗುವಿಕ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ಕಲಬುರಗಿ: ಕರ್ನಾಟಕವನ್ನೇ ಕಲ್ಯಾಣವನ್ನಾಗಿಸಿದ ಕಲ್ಯಾಣ ಕರ್ನಾಟಕ, ಕಲಬುರಗಿ ನೆಲ ಸಾಂಸ್ಕೃತಿಕ ಅನನ್ಯತೆ, ಶ್ರೇಷ್ಠತೆಯನ್ನು ಹೊಂದಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಬಿ.ವಿ. ವಸಂತಕುಮಾರ ತಿಳಿಸಿದರು.

ಗುಲ್ಬರ್ಗ ವಿಶ್ವವಿದ್ಯಾಲಯದ ಪ್ರಸಾರಾಂಗದ ವತಿಯಿಂದ ಮಹಾತ್ಮಾ ಗಾಂಧಿ ಸಭಾಂಗಣದಲ್ಲಿ ಬುಧವಾರ ನಡೆದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ನಾಡಿನ ಅವಿಭಾಜ್ಯ ಭಾಗವಾದ ಕಲಬುರಗಿಯ ವಿವಿ ಪ್ರಸಾರಾಂಗದ ಕಾರ್ಯ ಇತರ ವಿವಿಗಳಿಗೆ ಮಾದರಿಯಾಗಿದೆ ಎಂದರು.

ಸಾಹಿತ್ಯಕ, ಸಾಂಸ್ಕೃತಿಕ ವಲಯದ ಸಾಧಕರನ್ನು ಗುರುತಿಸಿ ಗೌರವಿಸಿ ಘನತೆ ಹೆಚ್ಚಿಸಿಕೊಳ್ಳುವುದು ಅಗತ್ಯ.ಲೇಖಕನಿಗಿಂತ ಕೃತಿಯ ಬೆಲೆ ಹೆಚ್ಚಿರುತ್ತದೆ. ಅದಕ್ಕಿಂತ ಕೃತಿಯ ಬದುಕು ಮುಖ್ಯ ಎಂದು ಹೇಳಿದರು.

ಮನಸ್ಸು, ಜಾತಿ, ಬದುಕು, ಪರಂಪರೆ ಸೇರಿದಂತೆ ಎಲ್ಲವೂ ಒಡೆದು ಹೋಗುತ್ತಿರುವ ಈ ಸಂದರ್ಭ ದಲ್ಲಿ ಪ್ರಶಸ್ತಿ ಪಡೆದವರು ಹೆಚ್ಚಿನ ಜವಾಬ್ದಾರಿ ಹೊರಬೇಕು ಎಂದು ತಿಳಿಸಿದರು. ಸಾಂಸ್ಕೃತಿಕ ಅನನ್ಯತೆ, ಶ್ರೀಮಂತಿಕೆ, ಅಸ್ಮಿತೆಯನ್ನು ಉಳಿಸಿಕೊಂಡು ಬರಬೇಕಾದ ಜರೂರತ್ತು ನಮ್ಮೆಲ್ಲರ ಹೆಗಲಮೇಲಿದೆ ಎಂದು ಹೇಳಿದರು.

ಗುವಿಕ ಕುಲಪತಿ ಪ್ರೊ. ಚಂದ್ರಕಾಂತ ಯಾತನೂರ ಅಧ್ಯಕ್ಷತೆ ವಹಿಸಿದ್ದರು. ರಿಜಿಸ್ಟ್ರಾರ್ ಸೋಮಶೇಖರ, ವಿತ್ತಾಧಿಕಾರಿ ವಿಜಯಕುಮಾರ, ಗುವಿಕ ವಿದ್ಯಾವಿಷಯಕ ಪರಿಷತ್ ಸದಸ್ಯಡಾ. ಎಂ. ಎಸ್. ಪಾಸೋಡಿ ವೇದಿಕೆಯಲ್ಲಿದ್ದರು. ಪ್ರಶಸ್ತಿ ಪುರಸ್ಕೃತರು: ಗೋರಿ- ರಘುನಾಥ ಚ.ಹ (ಚಿನ್ನದ ಪದಕ), ಬಾಳ ಪಯಣ- ರೇಣುಕಾ ರಮಾನಂದ ( ಬೆಳ್ಳಿ ಪದಕ) ಸ್ಟ್ಯಾಚೂ ಆಪ್ ಲಿಬರಿಟಿ- ಕನಕರಾಜ ಆರನಕಟ್ಟೆ (ಕಂಚಿನಪದಕ).

ಸೃಜನ ವಿಭಾಗ: ಯಾಕ ಚಿಂತಿ ಮಾಡತಿದಿ ಎಲೆ ಮಾನವ- ಡಾ. ಲಕ್ಷ್ಮಣ ಕೌಂಟೆ, ಪುಲ್ವಾಮಾ- ಸುಬ್ರಾವ ಕುಲಕರ್ಣಿ, ಬೌದ್ಧ ನಾಟಕಗಳು- ೨, ಪ್ರೊ. ಈಶ್ವರ ಎಂ. ಇಂಗನ್, ಮೌನದೊಳಗಿನ ಮಾತು- ಡಾ. ಬಸವರಾಜ ಪೂಜಾರ, ಶಾಹಿರಿ ಮತ್ತು ಗಜಲ್ ಗಳು-ಭೀಮಸೇನ ಎಂ.ಗಾಯಕವಾಡ, ಹಾಣಾದಿ- ಕಪಿಲ ಪಿ. ಹುಮನಾಬಾದೆ, ನೆನಪಿನ ಪಡಸಾಲೆ- ವಿಜಯಭಾಸ್ಕರ ರೆಡ್ಡಿ, ದಿವ್ಯಾಂಗ ದೀಪ್ತಿ- ಡಾ. ಶಿವರಾಜ ಶಾಸ್ತ್ರಿ ಹೇರೂರ.

ಸೃಜನೇತರ ಪ್ರಶಸ್ತಿ: ಯಡ್ರಾಮಿ ಸೀಮೆಯ ಕಥನಗಳು-ಮಲ್ಲಿಕಾರ್ಜುನ ಕಡಕೋಳ, ಮೂರು ದೇಶ ನೂರೊಂದು ಅನುಭವ-ಸಿದ್ಧರಾಮ ಹೊನ್ಕಲ್, ಪಯಣ-ವಾದಿರಾಜ ವ್ಯಾಸಮುದ್ರ. ಜನಪದ ಪ್ರಶಸ್ತಿ: ಜಾನಪದ ದರ್ಪಣ-ಡಾ. ಚಿ.ಸಿ. ನಿಂಗಣ್ಣ, ಜೀವನ ಕಥನ ವಿಭಾಗ: ಬಸವಶ್ರೀ ಪೂಜ್ಯ ಬೆಲ್ದಾಳ ಸಿದ್ಧರಾಮ, (ಶರಣರು ಮತ್ತು ವಚನ ಸಾಹಿತ್ಯ) -ಡಾ.ಗಾಂಧೀಜಿ ಸಿ.ಮೋಳಕೇರಿ, ಹಣಮಂತ ವಲ್ಲೇಪುರೆ- ದತ್ತ ಭಾಗವತ.

ವಚನ ಸಾಹಿತ್ಯ: ಅರಿವೇ ಪ್ರಮಾಣು (ಅಕ್ಕನಾಗಮ್ಮ ಜೀವನ ಕಾವ್ಯ). ಸಮಾಜ ವಿಜ್ಞಾನ- ಡಾ. ಮಲ್ಲಿಕಾರ್ಜುನ ಶೆಟ್ಟಿ ಅನುವಾದ ಪ್ರಶಸ್ತಿ; ಧಮ್ಮ ಪದ- ವೀರ ಹನುಮಾನ. ಉರ್ದು ವಿಭಾಗ: dhurre adab(critical articles). ಹಿಂದಿ ವಿಭಾಗ: Allamprabhu: Pratibha Ka shikhar- ಕಾಶಿನಾಥ ಅಂಬಲಗಿ. ಇಂಗ್ಲಿಷ್ ವಿಭಾಗ: Amendments of Indian constitution- ಡಾ. ಶಿವಾನಂದ ಎಚ್. ಲೇಂಗಟಿ ಪ್ರಕಾಶಕರ ವಿಭಾಗ: ಪಲ್ಲವ ಪ್ರಕಾಶನ, ಬಳ್ಳಾರಿ- ರಾಜೇಶ್ವರಿ. ಜನಪದ ಕಲಾವಿದ ವಿಭಾಗ: ಸಿದ್ಧರಾಮ ದಾದಾರಾವ ವಾಘಮಾರೆ.

ಚಿತ್ರಕಲಾಕೃತಿಗಳು ವಿಭಾಗ: ದಿ ವುಮೆನ್- ಪಲ್ಲವಿ ಹೀರಗೆ, ಟ್ರೈಬಲ್ ವುಮೆನ್- ದೌಲತರಾಯ ಸಂಗಣ್ಣ ದೇಸಾಯಿ, ಎ- ಬರ್ಡ್- ಮಲ್ಲಮ್ಮ ಜಿ. ಪಾಟೀಲ. ವಿಜ್ಞಾನ ರಾಜ್ಯ ಮಟ್ಟದ ಪ್ರಶಸ್ತಿ: ಬೆಳಕಿನೆಡಡಗೆ- ಡಾ. ನಂದಿನಿ. ಸೇರಿದಂತೆ 29 ವ್ಯಕ್ತಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಡಾ. ಶೈಲಜಾ ಬಾಗೇವಾಡಿ, ಡಾ. ಸಂತೋಷ ಕಂಬಾರ ನಿರೂಪಿಸಿದರು. ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕರು ಹಾಗೂ ಪ್ರಸಾರಾಂಗ ನಿರ್ದೇಶಕರಾದ ಪ್ರೊ. ಎಚ್.ಟಿ.ಪೋತೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. 29 ಜನರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

emedialine

Recent Posts

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

9 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

9 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

11 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

11 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

11 hours ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

11 hours ago