ಕಲಬುರಗಿ: ಕದ್ದ ಟ್ರ್ಯಾಕ್ಟರ್‍ನ್ನು ಗುಜರಿ ಅಂಗಡಿಗೆ ಮಾರಾಟ ಮಾಡಲು ಯತ್ನಿಸಿದ ಮೂವರನ್ನು ಪೋಲಿಸರು ಬಂಧಿಸಿದ ಘಟನೆ ಮಂಠಾಳ್ ಠಾಣೆಯ ಪೋಲಿಸ್ ವ್ಯಾಪ್ತಿಯಲ್ಲಿ ವರದಿಯಾಗಿದೆ. ಬಂಧಿತರನ್ನು ನಾವದಗಿ (ಬಿ) ಗ್ರಾಮದ ನಿವಾಸಿಗಳಾದ ಯಲ್ಲಾಲಿಂಗ್ ಹಣಮಂತ್ ಕೊಳೆ, ಸಿದ್ದು ಅಲಿಯಾಸ್ ಸಿದ್ದನಗೌಡ ಹಣಮಂತ್ ಪಾಟೀಲ್, ಶಿವಕುಮಾರ್ ಬಸವಂತರಾವ್ ಬಿರಾದಾರ್ ಎಂದು ಗುರುತಿಸಲಾಗಿದೆ.
ಬಂಧಿತ ಮೂವರು ಆರೋಪಿಗಳು ತಾಲ್ಲೂಕಿನ ದಸ್ತಾಪೂರ್- ನಾವದಗಿ ಸೀಮಾಂತರದಲ್ಲಿ ಬರುವ ಹೊಲದಲ್ಲಿ ನಿಲ್ಲಿಸಲಾಗಿದ್ದ ಸಿದ್ದಪ್ಪ ತಂದೆ ಶಾಂತಪ್ಪ ಪಾಟೀಲ್ ಅವರಿಗೆ ಸೇರಿದ ಟ್ರ್ಯಾಕ್ಟರನ್ನು ಕಳೆದ 12ರಂದು ರಾತ್ರಿ ಕಳ್ಳತನ ಮಾಡಿದ್ದರು. ಆ ಟ್ರ್ಯಾಕ್ಟರನ ಬಿಡಿಭಾಗಗಳನ್ನು ಬೇರ್ಪಡಿಸಿ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿನ ಗುಜರಿ ಅಂಗಡಿಗೆ ಮಾರಾಟ ಮಾಡಲು ಹೋಗುತ್ತಿರುವುದಾಗಿ ಮಂಠಾಳ್ ಠಾಣೆಯ ಪೋಲಿಸರಿಗೆ ತನಿಖೆಯ ವೇಳೆ ಬಾಯಿ ಬಿಟ್ಟರು.
ಬಂಧಿತ ಆರೋಪಿಗಳನ್ನು ಮಂಠಾಳ್ ಠಾಣೆಯ ಪೋಲಿಸರು ಮಹಾಗಾಂವ್ ಠಾಣೆಯ ಪೋಲಿಸರಿಗೆ ಒಪ್ಪಿಸಿದರು. ಬಂಧಿತರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…