ಬಿಸಿ ಬಿಸಿ ಸುದ್ದಿ

ಸಮಗ್ರ ಅಭಿವೃದ್ಧಿಯೇ ನನ್ನ ಕನಸು: ಶಾಸಕ ಗುತ್ತೇದಾರ

ಆಳಂದ: ವಿಧಾನಸಭಾ ಮತಕ್ಷೇತ್ರವನ್ನು ಸರ್ವ ರೀತಿಯಿಂದಲೂ ಅಭಿವೃದ್ಧಿಗೊಳಿಸುವುದು ತಮ್ಮ ಕನಸಾಗಿದೆ ಎಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಹೇಳಿದರು.

ಶನಿವಾರ ತಾಲೂಕಿನ ನೆಲ್ಲೂರ ಗ್ರಾಮದಲ್ಲಿ ೨೦೧೯-೨೦ ನೇ ಸಾಲಿನ ೫೦೫೪ ಅಪೆಂಡಿಕ್ಸ್-ಇ ಯೋಜನೆಯ ಅಡಿಯಲ್ಲಿ ಗ್ರಾಮದ ಹತ್ತಿರ ೧೫೦ ಲಕ್ಷ. ಮೊತ್ತದ ಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದರು.

ತಾಲೂಕಿನಲ್ಲಿ ಮೂಲೆ ಮೂಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ಸಾಂಗೋಪವಾಗಿ ಜರುಗುತ್ತಿವೆ ಇದಕ್ಕೆ ಕಾರಣ ತಾಲೂಕಿನ ಜನತೆಯೇ ಆಗಿದ್ದಾರೆ ಅವರ ಆಶೀರ್ವಾದದ ಬಲದಿಂದ ನಾನು ಶಾಸಕನಾಗಿ ಆಯ್ಕೆಯಾಗಿದ್ದೇನೆ ಹೀಗಾಗಿ ಅವರ ಋಣ ತೀರಿಸುವ ಗುರುತರ ಜವಾಬ್ದಾರಿ ನನ್ನ ಮೇಲಿದೆ ಎಂದು ನುಡಿದರು.

ನೆಲ್ಲೂರ ಗ್ರಾಮದಲ್ಲಿ ಎಸ್‌ಸಿಪಿ ಯೋಜನೆಯ ಅಡಿಯಲ್ಲಿ ೧೦ ಲಕ್ಷ.ರೂ ವೆಚ್ಚದ ಸಿಸಿ ರಸ್ತೆ, ಗ್ರಾಮದ ಓಣಿಗಳಲ್ಲಿ ೧೫ ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿದೆ. ೭೦ ಲಕ್ಷ.ರೂ ವೆಚ್ಚದ ದಣ್ಣೂರ ಗೈಮಾಳ ರಸ್ತೆ, ೧೦ ಲಕ್ಷ. ವೆಚ್ಚದ ಪ್ರೌಢ ಶಾಲೆ ಆವರಣ ಗೋಡೆ, ೧೫ ಲಕ್ಷ. ರೂ ವೆಚ್ಚದಲ್ಲಿ ಗ್ರಾಮದ ಹೊಸ ಬಡಾವಣೆಯಲ್ಲಿ ಸಿಸಿ ರಸ್ತೆ ಮಂಜೂರಿ ಮಾಡಲಾಗಿದ್ದು ಕೆಲವೇ ದಿನಗಳಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು. ಗ್ರಾಮದ ಸರ್ಕಾರಿ ಪ್ರೌಢ ಶಾಲೆಯನ್ನು ದತ್ತು ಶಾಲೆಯನ್ನಾಗಿ ಸ್ವೀಕರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಜೆಸ್ಕಾಂ ನಿರ್ದೇಶಕ ವೀರಣ್ಣ ಮಂಗಾಣೆ, ಕೆಎಂಎಫ್ ನಿರ್ದೇಶಕ ಚಂದ್ರಕಾಂತ ಭೂಸನೂರ, ನಿವೃತ್ತ ನ್ಯಾಯಮೂರ್ತಿ ರೇವಣಸಿದ್ದಪ್ಪ ಪಾಟೀಲ, ಶಿವಪುತ್ರ ಮುನ್ನಹಳ್ಳಿ, ಶಿವಪುತ್ರಪ್ಪ ಆಲೂರ, ಸಾಯಬಣ್ಣಗೌಡ ದಣ್ಣೂರ, ಕೆ.ಟಿ ರಾಠೋಡ್, ಚಂದ್ರಕಾಂತ ಮಂಗಾಣೆ, ಲಿಂಗರಾಜ ಪಾಟೀಲ, ಅಶೋಕ ಹತ್ತರಕಿ, ಬಸವರಾಜ ಬಿರಾದಾರ, ಶಿವಶರಣಪ್ಪ ಬಿರಾದಾರ, ಶಿವಕುಮಾರ ಶೇರಿ, ನಂದಕುಮಾರ ಬಿರಾದಾರ, ಗುತ್ತಿಗೆದಾರ ಸಿದ್ದಾರಾಮ ಕರ್ನಾಲಕರ, ಅಧಿಕಾರಿಗಳಾದ ಈರಣ್ಣ ಕುಣಕೇರಿ, ಅರುಣಕುಮಾರ ಬಿರಾದಾರ ಸೇರಿದಂತೆ ಇತರರು ಇದ್ದರು.

emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

9 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

20 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

20 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

22 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

22 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

22 hours ago