ಆಳಂದ: ವಿಧಾನಸಭಾ ಮತಕ್ಷೇತ್ರವನ್ನು ಸರ್ವ ರೀತಿಯಿಂದಲೂ ಅಭಿವೃದ್ಧಿಗೊಳಿಸುವುದು ತಮ್ಮ ಕನಸಾಗಿದೆ ಎಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಹೇಳಿದರು.
ಶನಿವಾರ ತಾಲೂಕಿನ ನೆಲ್ಲೂರ ಗ್ರಾಮದಲ್ಲಿ ೨೦೧೯-೨೦ ನೇ ಸಾಲಿನ ೫೦೫೪ ಅಪೆಂಡಿಕ್ಸ್-ಇ ಯೋಜನೆಯ ಅಡಿಯಲ್ಲಿ ಗ್ರಾಮದ ಹತ್ತಿರ ೧೫೦ ಲಕ್ಷ. ಮೊತ್ತದ ಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದರು.
ತಾಲೂಕಿನಲ್ಲಿ ಮೂಲೆ ಮೂಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ಸಾಂಗೋಪವಾಗಿ ಜರುಗುತ್ತಿವೆ ಇದಕ್ಕೆ ಕಾರಣ ತಾಲೂಕಿನ ಜನತೆಯೇ ಆಗಿದ್ದಾರೆ ಅವರ ಆಶೀರ್ವಾದದ ಬಲದಿಂದ ನಾನು ಶಾಸಕನಾಗಿ ಆಯ್ಕೆಯಾಗಿದ್ದೇನೆ ಹೀಗಾಗಿ ಅವರ ಋಣ ತೀರಿಸುವ ಗುರುತರ ಜವಾಬ್ದಾರಿ ನನ್ನ ಮೇಲಿದೆ ಎಂದು ನುಡಿದರು.
ನೆಲ್ಲೂರ ಗ್ರಾಮದಲ್ಲಿ ಎಸ್‌ಸಿಪಿ ಯೋಜನೆಯ ಅಡಿಯಲ್ಲಿ ೧೦ ಲಕ್ಷ.ರೂ ವೆಚ್ಚದ ಸಿಸಿ ರಸ್ತೆ, ಗ್ರಾಮದ ಓಣಿಗಳಲ್ಲಿ ೧೫ ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿದೆ. ೭೦ ಲಕ್ಷ.ರೂ ವೆಚ್ಚದ ದಣ್ಣೂರ ಗೈಮಾಳ ರಸ್ತೆ, ೧೦ ಲಕ್ಷ. ವೆಚ್ಚದ ಪ್ರೌಢ ಶಾಲೆ ಆವರಣ ಗೋಡೆ, ೧೫ ಲಕ್ಷ. ರೂ ವೆಚ್ಚದಲ್ಲಿ ಗ್ರಾಮದ ಹೊಸ ಬಡಾವಣೆಯಲ್ಲಿ ಸಿಸಿ ರಸ್ತೆ ಮಂಜೂರಿ ಮಾಡಲಾಗಿದ್ದು ಕೆಲವೇ ದಿನಗಳಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು. ಗ್ರಾಮದ ಸರ್ಕಾರಿ ಪ್ರೌಢ ಶಾಲೆಯನ್ನು ದತ್ತು ಶಾಲೆಯನ್ನಾಗಿ ಸ್ವೀಕರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜೆಸ್ಕಾಂ ನಿರ್ದೇಶಕ ವೀರಣ್ಣ ಮಂಗಾಣೆ, ಕೆಎಂಎಫ್ ನಿರ್ದೇಶಕ ಚಂದ್ರಕಾಂತ ಭೂಸನೂರ, ನಿವೃತ್ತ ನ್ಯಾಯಮೂರ್ತಿ ರೇವಣಸಿದ್ದಪ್ಪ ಪಾಟೀಲ, ಶಿವಪುತ್ರ ಮುನ್ನಹಳ್ಳಿ, ಶಿವಪುತ್ರಪ್ಪ ಆಲೂರ, ಸಾಯಬಣ್ಣಗೌಡ ದಣ್ಣೂರ, ಕೆ.ಟಿ ರಾಠೋಡ್, ಚಂದ್ರಕಾಂತ ಮಂಗಾಣೆ, ಲಿಂಗರಾಜ ಪಾಟೀಲ, ಅಶೋಕ ಹತ್ತರಕಿ, ಬಸವರಾಜ ಬಿರಾದಾರ, ಶಿವಶರಣಪ್ಪ ಬಿರಾದಾರ, ಶಿವಕುಮಾರ ಶೇರಿ, ನಂದಕುಮಾರ ಬಿರಾದಾರ, ಗುತ್ತಿಗೆದಾರ ಸಿದ್ದಾರಾಮ ಕರ್ನಾಲಕರ, ಅಧಿಕಾರಿಗಳಾದ ಈರಣ್ಣ ಕುಣಕೇರಿ, ಅರುಣಕುಮಾರ ಬಿರಾದಾರ ಸೇರಿದಂತೆ ಇತರರು ಇದ್ದರು.