ಕಲಬುರಗಿ: ಕೆಳವರ್ಗದ ಓಣಿಗಳಿಗೆ ಹೋಗಿ ಅವರ ದುಶ್ಚಟಗಳನ್ನು ಬಿಡಿಸಿ ಅವರಿಗೆ ಲಿಂಗದೀಕ್ಷೆ ನೀಡುತ್ತಿದ್ದರು. ಮಹಾಂತ ಜೋಳಿಗೆ ಕಾರ್ಯಕ್ರಮದ ಮೂಲಕ ಊರೂರು ಸುತ್ತಾಡಿ ಭಕ್ತರ ದುಶ್ಚಟಗಳನ್ನು ತಮ್ಮ ಜೋಳಿಗೆಗೆ ಹಾಕಲು ಹೇಳುತ್ತಿದ್ದರು. ಕಾಣಿಕೆ ಕೇಳುತ್ತಿರಲಿಲ್ಲ ನೀವು ದುಶ್ಚಟಗಳನ್ನು ನನ್ನ ಜೋಳಿಗೆಗೆ ಹಾಕಿ ಅದೇನನಗೆ ಕಾಣಿಕೆ ಎನ್ನುತ್ತಿದ್ದರು. ಇಳಕಲ್ಲಿನ ಲಿಂ. ಪರಮ ಪೂಜ್ಯ ಡಾ. ಮಹಾಂತ ಸ್ವಾಮೀಜಿಗಳ ಕುರಿತಾಗಿ ಪರಮ ಪೂಜ್ಯ ಗುರು ಮಹಾಂತ ಸ್ವಾಮೀಜಿಗಳು ಅಭಿಪ್ರಾಯಪಟ್ಟರು.
ಕಲಬುರ್ಗಿ ಬಸವಸ ಮಿತಿಯಲ್ಲಿ ಲಿಂ. ಮಲ್ಲಿಕಾರ್ಜುನ ಕಾಮಶೆಟ್ಟಿ ಮತ್ತು ಲಿಂ. ಅನುಸೂಯಾತುಪ್ಪದ ಸ್ಮರಣಾರ್ಥನಡೆದ 153ನೆ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಸೌದತ್ತಿಯಲ್ಲಮ್ಮನ ದೇವಸ್ಥಾನದಲ್ಲಿ ಮುತ್ತು ಕಟ್ಟುವ ಹೆಣ್ಣನ್ನು ವೇಶ್ಯಾವಾಟಿಕೆಗೆ ತಳ್ಳುವ ಕಾರ್ಯವನ್ನು ಶ್ರೀಗಳು ತಡೆಗಟ್ಟುವಲ್ಲಿ ಯಶಸ್ವಿಯಾದರು. ಅವರಿಗೆ ಮದುವೆ ಮಾಡಿ ಸಂಸಾರಿಗಳನ್ನಾಗಿಸಿದರು. ಮಲ್ಲಾಬಾದ್ನಲ್ಲಿ ವೇಶ್ಯೆಯರ ಮಕ್ಕಳಿಗಾಗಿ ಪ್ರತ್ಯೇಕ ವಸತಿ ಶಾಲೆಯೊಂದನ್ನು ತೆರೆದರು. ವೇಶ್ಯೆಯರ ಮಕ್ಕಳಿಗಾಗಿ ಇರುವ ಜಗತ್ತಿನ ಏಕೈಕ ವಸತಿ ಶಾಲೆ ಇದಾಗಿದೆ. ಇಲ್ಲಿ ಓದಿದ ಅನೇಕ ಮಕ್ಕಳು ಉನ್ನತ ಹುದ್ದೆಗೆ ಹೋಗಿದ್ದಾರೆ. ಮಹಾಂತ ಅಪ್ಪಾಜಿಯವರು ಆರಂಭಿಸಿದ ಮಹಾಂತ ಜೋಳಿಗೆ ನಾಡಿನಾದ್ಯಂತ ಜನರ ದುಶ್ಚಟಗಳನ್ನು ಬಿಡಿಸಿ ಸದ್ಗುಣಗಳನ್ನು ಕಲಿಸಿತು. ಮೊಳಕಾಲ್ಮುರಿನಲ್ಲಿ ವ್ಯಕ್ತಿಯೊಬ್ಬನ ಪರಸಂಗವನ್ನು ಬಿಡಿಸಿ ಹೆಂಡತಿಯೊಂದಿಗೆ ಬಾಳ್ವೆ ಮಾಡಲು ಅಣಿಗೊಳಿಸಿದರು. ಜಮಖಂಡಿಯಲ್ಲಿ ವ್ಯಕ್ತಿಯೊಬ್ಬನಿಗೆ ಕುಡಿತದ ಚಟಬಿಡಿಸಿದ್ದರಿಂದ ಆವ್ಯಕ್ತಿ ದೊಡ್ಡ ವ್ಯಾಪಾರಿಯಾಗಿ ಅವನ ಅಂಗಡಿಗೆ “ಮಹಾಂತ ಜೋಳಿಗೆ ಕೃಪಾ “ಎಂದು ನಾಮಕರಣ ಮಾಡಿದ್ದಾನೆ. ನಾಡಿನ ಜನತೆಗೆ ಸ್ವಂತ ಮಕ್ಕಳಂತೆ ಕಂಡವರು ಮಹಾಂತ ಸ್ವಾಮಿಗಳು . ಲಿಂಗ ಸಮಾನತೆಯನ್ನು ಸಾರಿದಕೀರ್ತಿ ಅವರಿಗೆ ಸಲ್ಲುತ್ತದೆ. ಮಹಿಳಾ ಶಿಕ್ಷಣಕ್ಕೆ ಆದ್ಯತೆ ನೀಡಿದರು. ಹೆಣ್ಣು ಮಕ್ಕಳನ್ನು ಸಹ ಜಂಗಮದೀಕ್ಷೆ ನೀಡಿ ಮಠಾಧೀಶರನ್ನಾಗಿಸದ ಘನತೆ ಅವರದಾಗಿದೆ.
“ಮೊಲೆ ಮೂಡಿ ಬಂದರೆ ಹೆಣ್ಣೆಂಬರು, ಗಡ್ಡಮೀಸೆಬಂದರೆ ಗಂಡೆಂಬರು, ಒಳಗೆ ಸುಳಿದಾಡುವ ಆತ್ಮ ಗಂಡು ಅಲ್ಲ ಹೆಣ್ಣು ಅಲ್ಲ” ಎಂಬ ಶರಣರ ತತ್ವವನ್ನು ಅವರು ಜಾರಿಗೆ ತಂದರು. ಜಾತಿ ಸಮಾನತೆಯನ್ನು ಸಾರಿ ಎಲ್ಲಾ ಜಾತಿಯವರಿಗೆ ಲಿಂಗಕಟ್ಟಿದರು. ಇಳಕಲ್ಮಠದಲ್ಲಿ ಲಿಂಗ ಮತ್ತು ವಿಭೂತಿಗಳೇ ಸಂಪತ್ತಾಗಿದ್ದು. ರಾಮ್ವಿಲಾಸ್ಪಾಸ್ವಾನ್ ಅವರು ಒಮ್ಮೆ ಬೀದರಿಗೆ ಕಾರ್ಯಕ್ರಮ ವೊಂದಕ್ಕೆ ಬಂದಾಗ “ದಲಿತರಿಗೆ ಮಠಾಧೀಶರನ್ನಾಗಿ ಮಾಡುತ್ತೀರಾ?” ಎಂದು ಮಹಾಂತ ಅಪ್ಪಾಜಿಯವರಿಗೆ ನೇರವಾಗಿ ಸವಾಲು ಹಾಕಿದರು. ಉತ್ತಮವಟು ಸಿಕ್ಕರೆ ಖಂಡಿತ ಮಾಡುತ್ತೇವೆ ಎಂದು ಸವಾಲು ಸ್ವೀಕರಿಸಿಸಿದ್ದಯ್ಯನ ಕೋಟೆ ಶಾಖಾಮಠಕ್ಕೆ ದಲಿತನನ್ನು ಮಠಾಧೀಶನನ್ನಾಗಿ ಮಾಡಿದರು. ಲಿಂಗಸುಗೂರು ಶಾಖಾ ಮಠಕ್ಕೆ ಲಂಬಾಣಿ ವ್ಯಕ್ತಿಯನ್ನು ಸ್ವಾಮೀಜಿಯನ್ನಾಗಿ ಮಾಡಿದರು. ವಡ್ಡರು ಸೇರಿದಂತೆ ಅನೇಕ ಜನಕೆಳವರ್ಗದವರನ್ನು ಮಠಾಧೀಶರನ್ನಾಗಿ ಮಾಡಿದಮೇರು ವ್ಯಕ್ತಿತ್ವ ಮಹಾಂತ ಅಪ್ಪಾಜಿ ಅವರದು.
ಮೂಢ ನಂಬಿಕೆಗಳ ವಿರೋಧಿ ಅವರಾಗಿದ್ದರು. ಮಠದ ಬಾಗಿಲನ್ನು ಈಶಾನ್ಯದಿಕ್ಕಿಗೆ ತೆರೆದರು ಇದರಿಂದ ಮಹಾಂತ ಸ್ವಾಮೀಜಿಗಳು ಸಾಯುತ್ತಾರೆ ಎಂದು ಜ್ಯೋತಿಷಿಯೊಬ್ಬ ಭವಿಷ್ಯ ನುಡಿದಿದ್ದ , ದುರ್ದೈವವೆಂದರೆ ಭವಿಷ್ಯ ನುಡಿದ ಜ್ಯೋತಿಷಿ ಸತ್ತುಹೋದ. ಎಷ್ಟೋಜನ ಕಳ್ಳರಿಗೆ ಕಳ್ಳತನ ಬಿಡಿಸಿ ಸದ್ಗುಣಗಳನ್ನು ಕಲಿಸಿದರು.
ವರದಕ್ಷಿಣೆತೆಗೆದುಕೊಂಡವರ ಮದುವೆಗೆ ಅವರು ಹೋಗುತ್ತಿರಲಿಲ್ಲ. ಇಳಕಲ್ಸವದಿಲಿಂಗ ಸುಗೂರು ಹುನಗುಂದಭಾಗಗಳಲ್ಲಿ ಇಂದಿಗೂ ಹಲವು ಮನೆತನಗಳಲ್ಲಿ ವರದಕ್ಷಿಣೆ ಇಲ್ಲದೆ ಮದುವೆ ಮಾಡುತ್ತಾರೆ. ಮದುವೆಗಳಲ್ಲಿ ಅಕ್ಕಿ ಕಾಳು ಹಾಕಿ ಪ್ರಸಾದ ಹಾಳು ಮಾಡಬಾರದೆಂದು ಪುಷ್ಪವೃಷ್ಟಿಮಾಡು ವಪದ್ಧತಿಯನ್ನು ಜಾರಿಗೆತಂದರು.
ನಾಗರ ಪಂಚಮಿಗೆ ಹಾವಿಗೆ ಹುತ್ತಕ್ಕೆ ಹಾಲೆರೆಯುವುದನ್ನು ನಿಲ್ಲಿಸಿದರು. ಇಂದಿಗೂ ಇಳಕಲ್ಲಿನ ಮಠ ಮತ್ತು ಶಾಖಾ ಮಠಗಳಲ್ಲಿ ಹಾಲನ್ನು ಪ್ರತಿ ನಾಗರ ಪಂಚಮಿಗೆ ಬಡಮಕ್ಕಳಿಗೆ ಕುಡಿಸುವ ಪದ್ಧತಿ ರೂಢಿಯಲ್ಲಿದೆ . ಗುಡಿ ಗುಂಡಾರಗಳಲ್ಲಿ ದೀಪೋತ್ಸವವನ್ನು ತಡೆದು ಬಡವರಿಗೆ ಅಡುಗೆಗೆ ಎಣ್ಣೆಯನ್ನು ವಿತರಿಸುತ್ತಿದ್ದರು. ಮೂರ್ತಿಪೂಜೆಯನ್ನು ಖಂಡಿಸಿ ಲಿಂಗಪೂಜೆಗೆ ಪ್ರೋತ್ಸಾಹಿಸಿದರು . ಮಹಾಂತ ಅಪ್ಪಾಜಿಯವರ ಕಾರ್ಯಗಳು ಅನನ್ಯವಾಗಿವೆ ಎಂದು ಬಲುಮಾರ್ಮಿಕವಾಗಿ ನುಡಿದರು.
ಉಪಾಧ್ಯಕ್ಷರಾದ ಡಾ. ಜಯಶ್ರೀದಂಡೆ ಅವರು ಅತಿಥಿಗಳನ್ನು ಪರಿಚಯಿಸಿದರು ಕಾರ್ಯಕ್ರಮದಲ್ಲಿ ಕಲಬುರಗಿ ಬಸವ ಸಮಿತಯ ಅಧ್ಯಕ್ಷರಾದ ಡಾ. ವಿಲಾಸವತಿ ಖೂಬಾ, ಕೆಂದ್ರ ಬಸವ ಸಮಿತಿಯ ಅಧ್ಯಕ್ಷರಾದ ಅರವಿಂದ ಜತ್ತಿ, ಡಾ. ವೀರಣ್ಣದಂಡೆ, ದತ್ತಿ ದಾಸೋಹಿಗಳಾದ ವಿಶ್ವನಾಥ ಕಾಮಶೆಟ್ಟಿ, ಶೀಲಾಕಾಮಶೆಟ್ಟಿ ಉಪಸ್ಥಿತರಿದ್ದರು. ಡಾ. ಆನಂದ ಸಿದ್ದಾಮಣಿ ಅವರು ಕಾರ್ಯಕ್ರಮ ನಿರೂಪಿಸಿದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…