ಕಲಬುರಗಿ: ಪ್ರಜ್ಞಾ ದಿ ಇನ್ಸ್‌ಟ್ಯೂಟ್ ಆಫ್ ಇನ್ನೋವೇಟೀವ್ ಲರ್ನಿಂಗ್ ಕಲಬುರಗಿ ವತಿಯಿಂದಕಾವ್ಯ ಓದು ಸಂಭ್ರಮ ಕವಿತೆ ಓದಿ, ಬಹುಮಾನ ಗೆಲ್ಲಿ ವಿಶೇಷ ಕಾವ್ಯ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಬಹುಮಾನ ವಿತರಣೆ ಕಾರ್ಯಕ್ರಮವು ಆನ್ ಲೈನ್ ಮೂಲಕ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಜ್ಞಾ ಸಂಸ್ಥೆಯ ಸಂಸ್ಥಾಪಕ ಕೆ.ಎಂ.ವಿಶ್ವನಾಥ ಮರತೂರ ಅವರು ಕಾವ್ಯ ನಮ್ಮೊಳಗೆ ಅವಿತುಕುಳಿತ ಅನುಭವದ ಅಕ್ಷರ ರೂಪವಾಗಿದೆ. ನಾವು ನಮ್ಮ ಭಾವನೆಗಳನ್ನು ಬರೆಯುವ ಪ್ರಕ್ರಿಯೆಯಾಗಿದೆ. ಹಿರಿಯ ಸಾಹಿತಿಗಳ ಅಧ್ಯಯನ ಅವಶ್ಯಕ. ಕವನ ವಾಚನವೂ ಒಂದು ಉತ್ತಮವಾದ ಅವಕಾಶ ನಾವು ಹಿರಿಯ ಸಾಹಿತಿಗಳ ಕವನ ವಾಚನ ಶೈಲಿಯನ್ನು ಕಲಿಯಬೇಕು. ನಾವು ಕವಿಗಳಾಗುವ ಮೊದಲು ಕಿವಿಗಳಾಗಬೇಕು. ಇನ್ನೊಬ್ಬರ ಕವಿತೆಗಳನ್ನು ಕೇಳಿ ಆಸ್ವಾದಿಸುವ ಗುಣವನ್ನು ಹೊಂದಬೇಕು ನಾವೆಲ್ಲರೂ ಕಾವ್ಯ ಸಾಹಿತ್ಯದೊಳಗೆ ಮಾಗಬೇಕು ಕಾವ್ಯ ಬೀಜ ಕಾಯಿಯಾಗಿ ಹಣ್ಣಾಗಬೇಕು ಅಂದಾಗ ಮಾತ್ರ ಕಾಡುವ ಕಾವ್ಯ ಕಟ್ಟಲು ಸಾಧ್ಯವಾಗುತ್ತದೆ ಎಂದರು.
ಉಪನ್ಯಾಸ ನೀಡಿದ ಖ್ಯಾತ ಸಾಹಿತಿ ಪತ್ರಕರ್ತ ಮಹಿಪಾರೆಡ್ಡಿ ಮುನ್ನೂರ ಅವರು ಕಾವ್ಯ ಪ್ರಾಂಜಲ ಮನಸ್ಸಿನ ಆಸ್ವಾದನೆ. ಕಟ್ಟಬೇಕಿರುವದು ಮನಸ್ಸುಗಳ ಕಾವ್ಯ. ಕನ್ನಡ ಸಾಹಿತ್ಯದ ಅಧ್ಯಯನದ ಪರಿಧಿಯೊಳಗೆ ನಾವೆಲ್ಲರೂ ತೇಲಿ ಹೋಗದೇ ಮುಳಗಬೇಕಿದೆ. ಇನ್ನಾರದೋ ಅನುಕರಣೆ ಮಾಡಿದೇ ನನ್ನ ಕವಿತೆ ಹೇಗೆ ವಿಶಿಷ್ಠತೆ ಮತ್ತು ವಿಭಿನ್ನತೆಗಳ ಕೂಡಿರಬೇಕು ಎಂಬುವುದು ಮುಖ್ಯವಾಗುತ್ತದೆ. ಕಾವ್ಯ ಸಾಹಿತ್ಯದ ಅಧ್ಯಯನ ಮಾಡುವ ಮೂಲಕ ಹೊಸ ಕಾವ್ಯ ಸಾಹಿತ್ಯವನ್ನು ಕಟ್ಟುವುದು ಸಾಧ್ಯವಾಗುತ್ತದೆ ಹೀಗಾಗಿ ಯುವ ಕವಿಮನಸ್ಸುಗಳು ಸಾಹಿತ್ಯದ ಅಧ್ಯಯನದಲ್ಲಿ ತೊಡಗಬೇಕಾಗಿರುವುದು ಇಂದಿನ ಅಗತ್ಯವಾಗಿದೆ ಎಂದರು.
ಇನ್ನೋರ್ವ ಉಪನ್ಯಾಸಕರಾದ ಪ್ರಕಾಶ ಖಾಡೆ ಮಾತನಾಡಿ ಸಾಹಿತ್ಯ ಒಂದು ಅತ್ಯದ್ಭುತವಾದ ಅನುಭವ ಇದನ್ನು ನಮ್ಮ ಜಾನಪದರು ಕಟ್ಟು ಪದಗಳ ಮೂಲಕ ಪ್ರಾರಂಭವಾಗಿದೆ. ನಾವು ಜನಜೀವನದ ಜೊತೆಗೆ ಬದುಕಬೇಕು ಅದರ ಮಧ್ಯದಲ್ಲಯೇ ಕಾವ್ಯ ಸಾಹಿತ್ಯ ಚಲನಶೀಲವಾಗಿ ಹೊರಬರಬೇಕು ನಮ್ಮ ಕಾವ್ಯ ಪರಂಪರೆ ಹಾಗೂ ಜಾನಪದದ ಸಾಹಿತ್ಯವನ್ನು ಅಧ್ಯಯನ ಮಾಡುವ ಮೂಲಕ ಸಾಹಿತ್ಯ ರಚನೆ ಮಾಡಬೇಕು ಹೆಚ್ಚಾಗಿ ಕವಿ ಪ್ರಸ್ತುತ ವಿಷಯ ವಸ್ತುಗಳ ಸಾಮಾಜಿಕ ಧ್ವನಿಯಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಹಲವು ಜಿಲ್ಲೆಗಳಿಂದ ೭೦ಕ್ಕು ಹೆಚ್ಚು ಕವಿಗಳು ಭಾಗವಹಿಸಿದ್ದರು ಪ್ರಜ್ಞಾ ಸಂಸ್ಥೆಯ ಅಧ್ಯಕ್ಷರಾದ ಕಾಶಿನಾಥ ಮರತೂರ ಅಧ್ಯಕ್ಷತೆ ವಹಿಸಿದ್ದರು. ಭಾಗವಹಿಸಿದ ಎಲ್ಲಾ ಕವಿಗಳಿಗೆ ಭಾಗವಹಿಸಿದ ಇಪ್ರಮಾಣ ಪತ್ರ ಕೊಡಲಾಯಿತು.
ಬಹುಮಾನ ಪಡೆದ ವಿವರ: ಪ್ರಥಮ ಬಹುಮಾನ ಯಾದಗಿರಿ ಜಿಲ್ಲೆ ಶಹಾಪುರನ ಗೌರೀಶ ಅವಟಿ, ದ್ವಿತೀಯ ಬಹುಮಾನ ಧಾರವಾಡದ ಈರಣ್ಣ ಅಗಳಗಟ್ಟಿ, ತೃತೀಯ ಬಹುಮಾನ ವಿಜಯಪೂರ ಜಿಲ್ಲೆಯ ಶೃತಿ ಚಂದ್ರಕಾಂತ ಕಾಜಗಾರ್, ಸಮಾಧಾನಕರ ಬಹುಮಾನವನ್ನು ವರ್ಷಿಣಿ ಆರ್ ಬೆಂಗಳೂರು, ಧೀಕ್ಷಿತ ಕೆ.ಎಂ. ಮಂಡ್ಯ, ವೆಂಕಟೇಶ ಜನಾದ್ರಿ ಕಲಬುರಗಿ ಪಡೆದಿದ್ದಾರೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…