ಕಲಬುರಗಿ: ನಗರದ ಐ ವಾನ್ ಶಾಹಿ ಅತಿಥಿ ಗೃಹದಲ್ಲಿ ನಡೆದ ಕರ್ನಾಟಕ ಇಂಜಿನೀಯರಿಂಗ್ ಸೇವಾ ಸಂಘ ಜಿಲ್ಲಾ ಘಟಕ ವತಿಯಿಂದ ೨೦೨೧ ನೇ ವರ್ಷದ ಇಂಜಿನೀಯರಗಳ ದಿನಚರಿ ಬಿಡುಗಡೆ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಲ್ಲಾ ಘಟಕ ಅಧ್ಯಕ್ಷ ನೀಲಕಂಠ ಎಮ್. ಜಮಾದಾರ ಮಾತನಾಡಿ, ಕರ್ನಾಟಕದ ಅಗ್ರಗಣ್ಯ ಸ್ಥಾನದಲ್ಲಿ ಕಲಬುರಗಿ ಇಂಜಿನೀಯರಗಳ ಸಂಘ ಇದೆ ಎಂದು. ಇಂದಿನ ಆಧುನಿಕ ಯುಗದಲ್ಲಿ ಸರ್ಕಾರದ ನೌಕರಿಯ ಜೊತೆಗೆ ಸೇವಾ ಸಂಘಗಳ ಬೆಳವಣಿಗೆಗೆ ಒಗ್ಗಟ್ಟಿನಿಂದ ಕಾರ್ಯನಿರ್ವಸಿದರೆ ಸಮಾಜಮುಖಿ ಕಾರ್ಯಕ್ರಮಗಳನ್ನು ಹಾಕಿಕೊಂಡು ನೌಕರರ ಸಂಘಕ್ಕೆ ಸಮಾಜದ ಸಹಕಾರ ಅತ್ಯಗತ್ಯ ಸಾರ್ವಜನಿಕರು ಮತ್ತು ನೌಕರರ ನಡುವೆ ಆರೋಗ್ಯಕರ ವಾತಾವರಣ ನಿರ್ಮಾಣ ಮಾಡಿಕೊಂಡು ಕಾರ್ಯನಿರ್ವಹಿಸಬೇಕು ಎಂದು ಜಮಾದಾರ ಹೇಳಿದರು.
ಕಾರ್ಯಕ್ರಮವನ್ನು ಅಧೀಕ್ಷಕ ಇಂಜಿನೀಯರರಾದ ಪ್ರೇಮಸಿಂಗ, ಅವರು ಉದ್ಘಾಟಿಸಿದರು. ಅಧೀಕ್ಷಕ ಇಂಜಿನೀಯರರಾದ ಶ್ರೀನಿವಾಸ ಪಿ, ಮಲ್ಲಿಕಾರ್ಜುನ ಎಸ್. ಜಂಟಿಯಾಗಿ ದಿನಚರಿಯನ್ನು ಬಿಡುಗಡೆಗೋಳಿಸಿದರು.
ಈ ಸಂದರ್ಭದಲ್ಲಿ ಉಪ ಮುಖ್ಯ ಇಂಜಿನೀಯರ ಎನ್. ಲಿಂಗರಾಜು, ಶೀವಶಂಕರ ಹರಸೂರ, ಭೀಮರೆಡ್ಡಿ, ಮುಸ್ತಾಕ್ ಅಹಮ್ಮದ್, ಮಿಲನಕುಮಾರ ಟಮಕೆ, ಟಿ.ಸಿ. ಅಲ್ದಿ, ಮಂಜುನಾಥ ಹವಲ್ದಾರ, ಬಸವರಾಜ ಹೆಚ್, ಬಾಬುರಾವ ಜಿ, ಸುಧೀರ ಸಂಗಾಣಿ, ಗುತ್ತಿಗೇದಾರ ಜಿಲ್ಲಾ ಸಂಘದ ಉಪಾಧ್ಯಕ್ಷ ಅಣ್ಣಾರಾವ ಸಣ್ಣಮನಿ ಭಾಗವಹಿಸಿದರು. ಸರ್ವರನ್ನು ಸಂಘದ ಕೋಶಾಧ್ಯಕ್ಷ ಕಾಳಪ್ಪಾ ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷ ಮಹಮ್ಮದ್ ಸಲಿಂ, ವಂದಿಸಿದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…