ಬೀದರ್: ರೈತರಿಗೆ ರಸಗೊಬ್ಬರದ ಕೊರತೆ ಆಗದಂತೆ ಮುತವರ್ಜಿ ವಹಿಸಿ ರಾಜ್ಯದಲ್ಲೇ ಮಾದರಿಯಾಗಿ ಜಿಲ್ಲಾ ಸಹಕಾರ ಬ್ಯಾಂಕ್ ಕಾರ್ಯನಿರ್ವಹಿಸುತ್ತಿದೆ ಎಂದು ಬ್ಯಾಂಕ್ ಅಧ್ಯಕ್ಷ ಉಮಾಕಾಂತ್ ನಾಗಮಾರಪಳ್ಳಿ ಹಾಗೂ ಉಪಾಧ್ಯಕ್ಷ ಭೀಮರಾವ್ ಪಾಟೀಲ್ ಅವರು ತಿಳಿಸಿದ್ದಾರೆ.
ಜಿಲ್ಲೆಯ 171 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖಾಂತರ ರೈತರ ಮನೆ ಬಾಗಿಲಲ್ಲೆ ರಸಗೊಬ್ಬರ ದೊರಕುವಂತೆ ಮಾಡುತ್ತಿದೆ. ರಸಗೊಬ್ಬರ ಬೇಡಿಕೆಯನ್ನು ಪ್ಯಾಕ್ಸ್‍ಗಳ ಮುಖಾಂತರ ಖರೀಫ ಮತ್ತು ರಬ್ಬಿ ಋತು ಆರಂಭದ ಒಂದು ತಿಂಗಳ ಮುಂಚಿತವಾಗಿಯೇ ಪ್ಯಾಕ್ಸ್‍ಗಳಿಂದ ಬೇಡಿಕೆ ಪಡೆದು ಬೇಡಿಕೆಗೆ ಅನುಗುಣವಾಗಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಬೀದರ್ ಶಾಖೆಗೆ ವರದಿ ಸಲ್ಲಿಸಿ ಅವರು ಪ್ಯಾಕ್ಸ್‍ಗಳ ಬೇಡಿಕೆಗೆ ಅನುಗುಣವಾಗಿ ಮೇ ತಿಂಗಳಲ್ಲೇ ರಸಗೊಬ್ಬರವನ್ನು ಪ್ಯಾಕ್ಸ್‍ಗಳ ಸ್ವಂತ ಗೋಡಾನಲ್ಲಿ ದಾಸ್ತಾನು ಮಾಡಿಕೊಂಡು ಕಾರ್ಯನಿರ್ವಹಿಸುತ್ತಾರೆ ಎಂದು ಅವರು ಜಂಟಿ ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಬ್ಯಾಂಕು ರಸಗೊಬ್ಬರದ ಹಣವನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಕ್ಕೆ ಪ್ಯಾಕ್ಸ್‍ಗಳಲ್ಲಿ ದಾಸ್ತಾನು ಮಾಡಿದ ರಸಗೊಬ್ಬರದ ಮೊತ್ತವನ್ನು ಮುಂಚಿತವಾಗಿ ನೀಡುತ್ತದೆ. ಖರೀಫ ಬಿತ್ತನೆ ಆರಂಭವಾದ ನಂತರ ಪ್ಯಾಕ್ಸ್‍ಗಳು ಸರಬರಾಜಾದ ರಸಗೊಬ್ಬರದ ಮೊತ್ತವನ್ನು ಬ್ಯಾಂಕಿನಲ್ಲಿರುವ ರಸಗೊಬ್ಬರ ಖಾತೆಗೆ ಜಮಾ ಮಾಡುತ್ತಾರೆ. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಕ್ಕೆ ಬ್ಯಾಂಕು ಭದ್ರತೆಯನ್ನು ನೀಡಿ ರೈತರಿಗೆ ಪ್ಯಾಕ್ಸ್‍ಗಳ ಮುಖಾಂತರ ಸ್ಥಳೀಯವಾಗಿ ರಸಗೊಬ್ಬರ ಅವರ ಗ್ರಾಮದಲ್ಲೆ ದೊರಕುವಂತೆ ಮಾಡುತ್ತಿರುವುದು ಇಡೀ ರಾಜ್ಯದಲ್ಲೆ ಡಿಸಿಸಿ ಬ್ಯಾಂಕ್ ಬೀದರ ಮಾದರಿಯಾಗಿ ಕೆಲಸ ಮಾಡುತ್ತಿದೆ. ದಿವಂಗತ ಡಾ. ಗುರುಪಾದಪ್ಪ ನಾಗಮಾರಪಳ್ಳಿ ರವರು ಹಾಕಿಕೊಟ್ಟ ದಾರಿಯಲ್ಲೇ ನಾನು ಮತ್ತು ಆಡಳಿತ ಮಂಡಳಿ ಸದಸ್ಯರು ಮುನ್ನಡೆಯುತ್ತಾ, ಜಿಲ್ಲೆಯ ಎಲ್ಲ ಕುಟುಂಬಗಳಿಗೆ ಬ್ಯಾಂಕಿನ ಸೇವೆ ನೀಡುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯದ ಬೇರೆ ಜಿಲ್ಲೆಗಳಲ್ಲಿ ರಸಗೊಬ್ಬರದ ತೊಂದರೆ ಆಗಿ ರೈತರು ಪ್ರತಿಭಟನೆ ಮತ್ತು ಹೋರಾಟ ಮಾಡುವುದು ನಾವು ಪ್ರತಿವರ್ಷ ಕಾಣುತ್ತೇವೆ. ಆದರೆ ಇಲ್ಲಿಯವರೆಗೆ ಬೀದರ ಜಿಲ್ಲೆಯಲ್ಲಿ ಯಾವತ್ತು ಸಹ ತೊಂದರೆ ಆಗಿರುವುದು ಕಂಡುಬಂದಿಲ್ಲ. ಪ್ರತಿ ವರ್ಷದಂತೆ ಈ ವರ್ಷವು ಸಹ ಪ್ಯಾಕ್ಸ್‍ಗಳಲ್ಲಿ ರಸಗೊಬ್ಬರ ದಾಸ್ತಾನು ಮಾಡಲಾಗಿದ್ದು, ರೈತರು ಇದರ ಲಾಭ ಪಡೆಯಬೇಕೆಂದು ರೈತರಲ್ಲಿ ಮನವಿ ಮಾಡಿ ಕೊಂಡಿರುತ್ತಾರೆ. ಬ್ಯಾಂಕು ಇಫ್ಕೋ ಸಂಸ್ಥೇಯಲ್ಲಿ ಸದಸ್ಯರಾಗಿರುವುದರಿಂದ ಈ ವ್ಯವಸ್ಥೇ ಇಫ್ಕೋ ಸಂಸ್ಥೆ ಜೊತೆ ಸೇರಿ ನಿರ್ವಹಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಇಫ್ಕೋ ಡಿಎಪಿ 50 ಕೇಜಿ ಬ್ಯಾಗಿಗೆ 1400 ರೂ.ಗಳು, 12.32.16 50 ಕೇಜಿ ಬ್ಯಾಗಿಗೆ 1375ರೂ.ಗಳು, ಎಮ್.ಸಿ.ಎಫ ಯೂರಿಯಾ 45 ಕೆ.ಜಿ ಬ್ಯಾಗಿಗೆ 256ರೂ.ಗಳು, ಐಪಿಎಲ್‍ಎಮ್‍ಓಪಿ 50 ಕೆ.ಜಿ ಬ್ಯಾಗಿಗೆ 950ರೂ.ಗಳಂತೆ ದರ ಇರುತ್ತದೆ. ಒಟ್ಟು 171 ಪ್ಯಾಕ್ಸ್‍ಗಳಲ್ಲಿ ಡಿ.ಎ.ಪಿ 10,000 (ಎಮ್‍ಟಿ) ಮೆಟ್ರಿಕ್ ಟನ್ ಹಾಗು ಇತರೇ ಎಲ್ಲ ಗೊಬ್ಬರ ಸೇರಿ 900 ಮೇಟ್ರಿಕ ಟನ್ (ಎಮ್‍ಟಿ) ರಸಗೊಬ್ಬರ ದಾಸ್ತಾನ ಮಾಡಲಾಗಿದೆ. ಇದರ ಸದುಪಯೋಗ ನಮ್ಮ ರೈತಾಪಿ ಜನರು ಪಡೆಯಲಿ ಹಾಗೂ ಈ ವರ್ಷ ಒಳ್ಳೆಯ ಮಳೆ ಮತ್ತು ಬೆಳೆಯಾಗಲೆಂದು ದೇವರಲ್ಲಿ ಅವರು ಪ್ರಾರ್ಥಿಸಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…