ಬಿಸಿ ಬಿಸಿ ಸುದ್ದಿ

ಸುಂದರ ಸಮಾಜ ನಿರ್ಮಿಸಲು ಡಾ. ಗಣಾಪೂರ್ ಕರೆ

ಬೀದರ್: ಸುಂದರ ಸಮಾಜ ನಿರ್ಮಾಣದಲ್ಲಿ ಎಂ.ಎಸ್.ಡಬ್ಲ್ಯೂ ವಿದ್ಯಾರ್ಥಿಗಳ ಪಾತ್ರ ಅತ್ಯಂತ ಮಹತ್ವದಾಗಿದ್ದೆ, ಅಲ್ಲದೆ ಅಧೀಕ ಜವಾಬ್ದಾರಿಯೂ ಇದೆ ಇದನ್ನು ಸವಾಲಾಗಿ ಸ್ವೀಕರಿಸಿ ಸಮಾಜದ ಸೇವೆ ಮಾಡಬೇಕಾಗಿದೆ ಎಂದು ಪ್ರಾಧ್ಯಾಪಕ ಡಾ. ರಾಮಚಂದ್ರ ಗಣಾಪೂರ್ ಅವರು ಕರೆ ನೀಡಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಅಡಿಯಲ್ಲಿರುವ ಹಾಲಹಳ್ಳಿ ಜ್ಞಾನ ಕಾರಂಜಿ ಕ್ಯಾಂಪಸನಲ್ಲಿರುವ ಸ್ನಾತಕೋತರ ಕೇಂದ್ರದಲ್ಲಿ ಶನಿವಾರ ಸಮಾಜ ಕಾರ್ಯ ಅಧ್ಯಯನ (ಎಂ.ಎಸ್.ಬಡಬ್ಲ್ಯೂ) ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಬಿಳ್ಕೊಡುಗೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜ್ಞಾನಿಸೆ ಜ್ಞಾನ ಮಿಲೇ ತೋ ಕರ್ಲೋ ದೋ ಬಾತ್ ಅಗರ್ ಗಧೇ ಸೇ ಗಧೇ ಮಿಲಜಾಯೇ ಮಾರ್ಲೋ ದೋ ಲಾತ ಎಂದ ಅವರು ಸಮಾಜದ ಆಗುಹೋಗಗಳ ಬಗ್ಗೆ ಅರಿತುಕೊಂಡು ಶ್ರಮಿಸಬೇಕೆಂದು ಕರೆ ನೀಡಿದರು, ವಿದ್ಯಾರ್ಥಿಗಳು ಕಷ್ಟಪಟ್ಟು ಅಧ್ಯಯನ ಮಾಡಿ ತಮ್ಮ ಗುರಿ ತಲುಪಬೇಕು ಎಂದರು.

ಉದ್ಘಾಟಿಸಿದ ಪ್ರಭುರಾವ್ ಕಂಬಳಿವಾಲೆ ಕನ್ನಡ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಮತ್ತು ಹಿರಿಯ ಪ್ರತಕರ್ತ ನಾಗಶೆಟ್ಟಿ ಧರಮಾಪೂರ್ ಅವರು ಮಾತನಾಡಿ, ಯುವಕರು ಭಾರತದ ಭವಿಷ್ಯ ಸಮರ್ಥವಾಗಿ ಧ್ಯೇಯವನ್ನು ಕಠೀಣ ಪರಿಶ್ರಮದಿಂದ ಅಧ್ಯಯನದೊಂದಿಗೆ ಗುರಿ ತಲುಪಬೆಕು ಅಂದಾಗ ಕನಸ್ಸು ನನಸಾಗುತ್ತದೆ, ಕನಸ್ಸು ಜಾಗೃತವಾಗಿಯೇ ನೋಡಬೆಕು ಅಂದಾಗ ಆ ಸವಾಲನೊಂದಿಗೆ ಶ್ರಮದಿಂದ ಬಲಿಷ್ಠ ಭಾರತ ಕಟ್ಟಲು ಯುವ ಜನಾಂಗದಿಂದ ಸಾದ್ಯವಾಗುತ್ತದೆ ಎಂದರಿತು ಸಾಗಬೆಕು ಅಧ್ಯಯನದಿಂದಲೇ ಉಜ್ವಲ ಭವಿಷ್ಯ ಕಂಡುಕೊಳ್ಳಲು ಸಾಧ್ಯ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಕನ್ನಡಾಂಬೆ ಗೆಳೆಯರ ಬಳಗದ ಅಧ್ಯಕ್ಷ ಮತ್ತು ಪತ್ರಕರ್ತ ವೀರಪಾಕ್ಷ ಆನಂದೆ ಗಾದಗಿ ಅವರು ಮಾತನಾಡಿ, ಪದವಿ ನಂತರ ಏನು ಎಂಬ ಪ್ರಶ್ನಾರ್ಥಕ ಚಿನ್ಹೆಯೊಂದಿಗೆ ಸವಾಲು ಸ್ವೀಕರಿಸಿ ಉತ್ತಮವಾದ ಗುರಿಯೊಂದಿಗೆ ಆತ್ಮವಿಶ್ವಾಸದಿಂದ ಮುಂದಿನ ಅಧ್ಯಯನ ಮಾಡಿ ಗುರಿ ತಲುಪಿದಾಗ ಜೀವನ ಸಫಲವಾಗುವುದು. ಎಂದು ಹೇಳಿದರು.

ಮತ್ತೋರ್ವ ಮುಖ್ಯ ಅತಿಥಿ ಜೈ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಶ್ರೀಮಂತ್ ಸಪಾಟೆ ಅವರು ಮಾತನಾಡಿ, ವಿದ್ಯಾರ್ಥಿಗಳು ಜ್ಞಾನದ ಹುಡುಕಾಟಕ್ಕಾಗಿ ಯಾವುದೇ ಕಿಟಕಿಯಿಂದಲು ಹೊಸ ಜ್ಞಾನ ಸ್ವೀಕರಿಸಬೇಕು ಮತ್ತು ಪರಿಶ್ರಮದೊಂದಿಗೆ ಸಮಾಜ ಸೇವೆ ಗೈದು ತಮ್ಮ ಜೀವನ ಸಾರ್ಥಕ ಮಾಡಿಕೊಳ್ಳಬೇಕೆಂದರು. ಸಮಾಜ ಕಾರ್ಯ ಅಧ್ಯಯನ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಲಕ್ಷ್ಮಣ್, ಸಾಯಿಬಣ್ಣಾ, ಶಿವನಾಥ್ ಸ್ವಾಮಿ, ಮನ್ನಳಿ, ಆರತಿ, ಅವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಪ್ರಾರಂಭದಲ್ಲಿ ಶ್ರುತಿ ಪ್ರಾರ್ಥನೆ, ಸ್ವಾಗತ ಗೀತೆ ಹಾಡಿದರು. ಪ್ರಥಮ ವರ್ಷದ ವಿದ್ಯಾರ್ಥಿನಿ ಕು.ಪೂಜಾ ಪಿಟ್ಲೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಣೆ ಮಾಡಿದರು. ಕೊನೆಯಲ್ಲಿ ಸಾಯಿಬಣ್ಣ ಅವರು ವಂದಿಸಿದರು.
ಕಾರ್ಯಕ್ರಮದಲ್ಲಿ ಲೈಬ್ರರಿಯನ್, ಪ್ರಾಧ್ಯಾಪಕ ಸೋಮನಾಥ್, ಸಂಗಮೇಶ್, ಸಿದ್ದಲಿಂಗ್, ಸುನಿಲ್, ವಿದ್ಯಾರ್ಥಿಗಳಾದ ಆಕಾಶ್, ಮಲ್ಲಿಕಾರ್ಜುನ್, ಅಂಜಲಿ, ಪ್ರದೀಪ್ ಚಿದ್ರಿ, ಬಸವರಾಜ್ ರೇಷ್ಮೆ ಕುಂಬಾರವಾಡ್ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಪಾಲ್ಗೊಂಡಿದರು. ಕಾರ್ಯಕ್ರಮದ ನಂತರ ಧ್ವನಿವರ್ಧಕ ಸಂಗೀತದ ನೀನಾದಕ್ಕೆ ಕುಣಿದ ಕುಪ್ಪಳಿಸಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

4 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

14 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

14 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

14 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago