ಸುರಪುರ: ನಗರದ ಕುಂಬಾರಪೇಟೆಯ ಹನುಮಾನ್ ದೇವಸ್ಥಾನದ ಬಳಿಯಲ್ಲಿ ಬಸ್ ಹರಿದು ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ತಾಲೂಕಿನ ದೇವಾಪುರ ಗ್ರಾಮದ ವ್ಯಕ್ತಿಗಳು ಬೈಕ್ ಮೇಲೆ ಸುರಪುರಕ್ಕೆ ಕೆಲಸಕ್ಕೆಂದು ಹೋಗುತ್ತಿದ್ದರು,ಈ ಸಂದರ್ಭದಲ್ಲಿ ಸುರಪುರ ಕಡೆಯಿಂದ ಮುದ್ದೇಬಿಹಾಳಕ್ಕೆ ಹೊರಟ ಬಸ್ಸು ವೇಗವಾಗಿ ಬರುವುದನ್ನು ಕಂಡು ಬೈಕ್ ಸವಾರರು ಪಕ್ಕಕ್ಕೆ ನಿಂತಿದ್ದು,ವೇಗವಾಗಿ ಬಂದ ಬಸ್ಸು ಪಕ್ಕದಲ್ಲಿ ನಿಂತಿದ್ದ ನಾಲ್ವರ ಮೇಲೆ ಹರಿದಿದೆ.
ಇದರಿಂದಾಗಿ ದೇವಾಪುರ ಗ್ರಾಮದ ವ್ಯಕ್ತಿಗಳಾದ ಹುಸೇನ್ ದಸ್ತಗೀರ್ ಮಹಿಬೂಬ ಹಾಗು ಖಾಜಾಸಾಬ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ.ಅಲ್ಲದೆ ಈ ಅಪಘಾತದಲ್ಲಿ ಯುವಕನ ಬಲಗೈ ಸಂಪೂರ್ಣವಾಗಿ ತುಂಡರಿಸಿದ್ದು ನೋಡಿದವರ ಎದೆ ನಡುಗಿಸಿದೆ.ಅಲ್ಲದೆ ಬಸ್‌ನ ಚಕ್ರಕ್ಕೆ ಸಿಲುಕಿದ ಹಸು ಒಂದು ಸ್ಥಳದಲ್ಲಿಯೇ ಸಾವನ್ನಪ್ಪಿದೆ ಹಾಗು ಒಂದು ಎಮ್ಮೆಗು ಕೂಡ ಗಂಭೀರವಾಗಿ ಗಾಯಗಳಾಗಿವೆ.
ಇನ್ನು ಅಪಘಾತ ನಡೆದ ಸಂದರ್ಭದಲ್ಲಿ ಇದೇ ರಸ್ತೆಯ ಮೂಲಕ ಸುರಪುರ ನಗರಕ್ಕೆ ಹೊರಟಿದ್ದ ಶಾಸಕ ನರಸಿಂಹ ನಾಯಕ (ರಾಜುಗೌಡ) ತಕ್ಷಣಕ್ಕೆ ತಮ್ಮ ವಾಹನದಿಂದ ಇಳಿದು ಗಾಯಗೊಂಡು ನರಳುತ್ತಿದ್ದವರನ್ನು ಆಟೋದಲ್ಲಿ ಹತ್ತಿಸಿ ಆಸ್ಪತ್ರೆಗೆ ಸೇರಿಸುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ.
ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಎಎಸ್‌ಐ ಬಾಗಣ್ಣ ಹಾಗು ಹೆಚ್‌ಸಿ ಬಸವರಾಜ ಮುದಗಲ್ ಕೂಡ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾಗಿದ್ದಾರೆ.
ಗಾಯಗೊಂಡ ಎಲ್ಲರಿಗು ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯನ್ನು ಮಾಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರ್ಗಿ ಆಸ್ಪತ್ರೆಗೆ ರವಾನಿಸಲಾಗಿದೆ.ಈ ಕುರಿತು ಸುರಪುರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…
ಕಲಬುರಗಿ: ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಪ್ರಯುಕ್ತ ಜೈ ಕನ್ನಡಿಗರ…
ಕಲಬುರಗಿ; ಕಾರಾಗೃಹದ ಬಂದಿಗಳಿಗೆ ಉಚಿತವಾಗಿ ಅದಾನಿ ಸಕ್ಷಮ ಸ್ಕಿಲ್ ಡೆವಲಪ್‍ಮೆಂಟ್, ವಾಡಿ ಹಾಗೂ ಕೇಂದ್ರ ಕಾರಾಗೃಹದ ಸಹಯೋಗದೊಂದಿಗೆ ಬಂದಿಗಳ ಮನಃ…