ಶಹಾಬಾದ:ಹನ್ನೇರಡನೇ ಶತಮಾನದ ಶ್ರೇಷ್ಠ ವಚನಕಾರರಲ್ಲಿ ಕಾಯಕಯೋಗಿ ಸಿದ್ಧರಾಮೇಶ್ವರರು ಒಬ್ಬರು ಎಂದು ಪಿಐ ಬಿ.ಅಮರೇಶ ಹೇಳಿದರು.
ಅವರು ಗುರುವಾರ ನಗರದ ಬಸವೇಶ್ವರ ವೃತ್ತದಲ್ಲಿ ಭೋವಿ ವಡ್ಡರ್ ಯುವಕ ಮಂಡಳಿ ವತಿಯಿಂದ ಆಯೋಜಿಸಲಾದ ಸಿದ್ಧರಾಮೇಶ್ವರರ ಜಯಂತಿಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಸಿದ್ಧರಾಮೇಶ್ವರರು ಆ ಕಾಲದಲ್ಲಿಯೇ ಜೀವಿಗಳಿಗೆ ಬದುಕಲು ಕೆರೆಕುಂಟೆಗಳನ್ನು ಕಟ್ಟಿಸಿದ ಮಾನವೀಯತೆಯ ಹರಿಕಾರರು. ಅವರು ತಮ್ಮ ಜೀವನದಲ್ಲಿ ನುಡಿದಂತೆ ನಡೆದವರು.ಅವರ ಬದುಕಿದ ರೀತಿ ಹಾಗೂ ನುಡಿದ ಒಂದೊಂದು ಮಾತುಗಳು ನಮಗೆ ದಾರಿದೀಪವಾಗಲಿವೆ. ಅವರ ಒಂದೊಂದು ವಚನಗಳನ್ನು ತಿಳಿದುಕೊಂಡು ನಮ್ಮ ಜೀವನದಲ್ಲಿ ಅಳವಡಿಸಿದ್ದೇ ಆದರೆ ನಮ್ಮ ಜೀವನ ಪಾವನವಾಗುತ್ತದೆ ಎಂದು ಹೇಳಿದರು.
ಭೋವಿ ಸಮಾಜದ ಅಧ್ಯಕ್ಷ ಭೀಮರಾವ ಸಾಳುಂಕೆ ಮಾತನಾಡಿ, ಸ್ವಂತಿಕೆಯಿಂದ ಯೋಚಿಸಿ ಸ್ವಾಭಿಮಾನದ ಬದುಕನ್ನು ಬದುಕಬೇಕೆಂಬ ಅಂಶವನ್ನು ಸಿದ್ಧರಾಮೇಶ್ವರರು ತಮ್ಮ ಸರಳ ಸುಲಲಿತ ವಚನಗಳಲ್ಲಿ ತಿಳಿಸಿದ್ದಾರೆ. ಜಾತೀಯತೆಯನ್ನು ಮೀರಿದ ವಸ್ತು ನಿಷ್ಠತೆ, ಸತ್ಯ ನಿಷ್ಠತೆ ಬದುಕು, ನಿಜವಾದ ಬದುಕು ಎಂಬುದಾಗಿ ಪ್ರತಿಪಾದಿಸಿದ ದಿಟ್ಟ ಮಾನವತವಾದಿ ಎಂದು ಹೇಳಿದರು.
ಭೋವಿ ಸಮಾಜದ ಉಪಾಧ್ಯಕ್ಷ ಅನೀಲ ಬೋರಗಾಂವಕರ್,ನಗರಸಭೆಯ ಸದಸ್ಯರಾದ ಲಕ್ಷ್ಮಿಬಾಯಿ ಕುಸಾಳೆ, ಪಾರ್ವತಿ ಪವಾರ,ರವಿ ಮೇಸ್ತ್ರಿ,ದೇವದಾಸ ಜಾಧವ,ದಶರಥ ದೇಸಾಯಿ, ಸಿದ್ರಾಮ ಕುಸಾಳೆ,ಶಂಕರ ಕುಸಾಳೆ,ಅಂಬ್ರೇಶ ಮಾವನೂರ್, ಸಂಯೋಜಕರಾದ ಮನೋಜ ಮೇಸ್ತ್ರಿ, ಅಶೋಕ ದೇವಕರ್, ವಿನೋದ ಗೋಟೆಕರ್, ವಿಶ್ವರಾಜ ಕುರುಡೆಕರ್,ಶಾಮ ದೇವಕರ್, ಕಿರಣ ದಂಡಗುಲಕರ್,ಅನೀಲ ಪವಾರ, ನರಸಿಂಗ ಮಾನೆ ಇತರರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…