ಶಹಾಬಾದ:ಸಿದ್ಧರಾಮೇಶ್ವರರು ಕಾಯಕ, ದಾಸೋಹ ಪ್ರಜ್ಞೆಯನ್ನು ಬೆಳೆಸಿದ ಶರಣರು ನಾಡಿನ ಎಲ್ಲ ಸಮಾಜಕ್ಕೂ ಆದರ್ಶಪ್ರಾಯರು ಎಂದು ನಗರಸಭೆಯ ಪೌರಾಯುಕ್ತ ಡಾ. ಕೆ.ಗುರಲಿಂಗಪ್ಪ ಹೇಳಿದರು.
ಅವರು ಗುರುವಾರ ನಗರಸಭೆಯಲ್ಲಿ ಆಯೋಜಿಸಲಾದ ಸಿದ್ಧರಾಮೇಶ್ವರರ ಜಯಂತಿಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಕಾಯಕಕ್ಕಿಂತ ಮಿಗಿಲಾದುದು ಯಾವುದು ಇಲ್ಲ. ವಿಶ್ವದ ಎಲ್ಲಾ ಜೀವರಾಶಿಗಳಿಗೆ ಹೊಟ್ಟೆ ತುಂಬಿಸುವ ಕಾರ್ಯ ಕಾಯಕದಿಂದ ಮಾತ್ರ ಸಾಧ್ಯ. ಕಾಯಕ ಸತ್ಯ ಮತ್ತು ಶುದ್ಧವಾಗಿರಬೇಕು.ಯಾವುದೇ ಅನಾಚಾರದ ಮೂಲಕ ಗಳಿಸುವ ಹಣ ಸತ್ಪಾತ್ರಕ್ಕೆ ಸಲ್ಲುವುದಿಲ್ಲ. ಪ್ರಮಾಣಿಕತೆ ಹಾಗೂ ನಿಷ್ಠೆಯಿಂದ ಕಾಯಕ ಮಾಡುವ ಸಂಸ್ಕೃತಿಯನ್ನು ಬೆಳೆಸಿದವರು ಶರಣರು.ಇಂತಹ ಮಹಾ ಶರಣರ ಜಯಂತಿ ಆಚರಿಸುವುದು ಸಂತೋಷದ ವಿಷಯ.ಆದರೆ ಇದು ಕೇವಲ ವರ್ಷಕ್ಕೊಮ್ಮೆ ಎಂಬಂತೆ ಕಾಟಾಚಾರಕ್ಕಾಗಿ ಆಚರಿಸದೇ, ಅವರ ನಿಜವಾದ ತತ್ವಗಳನ್ನು ಅಳವಡಿಸಿಕೊಳ್ಳುವ ಮೂಲಕ ಶರಣರು ಕಂಡಂತಹ ಕಲ್ಯಾಣ ರಾಜ್ಯವನ್ನು ಮತ್ತೆ ಮರು ಸ್ಥಾಪಿಸಬಹುದು ಎಂದು ಹೇಳಿದರು.
ನಗರಸಭೆ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ,ಉಪಾಧ್ಯಕ್ಷೆ ಸಲೀಮಾಬೇಗಂ ಮೆಹಬೂಬ, ಸ್ಥಾಯಿ ಸಮಿತಿ ಅಧ್ಯಕ್ಷ ತಿಪಣ್ಣ ನಾಟೀಕಾರ, ಭೋವಿ ಸಮಾಜದ ಅಧ್ಯಕ್ಷ ಭೀಮರಾವ ಸಾಳೂಂಕೆ, ಉಪಾಧ್ಯಕ್ಷ ಅನೀಲ ಬೋರಗಾಂವಕರ್, ದೇವದಾಸ ಜಾಧವ,ಡಾ.ರಶೀದ್ ಮರ್ಚಂಟ್, ಸಿದ್ರಾಮ ಕುಸಾಳೆ,ಶಂಕರ ಕುಸಾಳೆ,ರಾಮು ಕುಸಾಳೆ,ಸಂಜಯ ವಿಟ್ಕರ,ರಾಕೇಶ ಪವರ,ನಗರಸಭೆ ಸದಸ್ಯರಾದ ಲಕ್ಷ್ಮೀಬಾಯಿ ಕುಸಾಳೆ, ಡಾ.ಅಹ್ಮದ ಪಟೇಲ,ಪಾರ್ವತಿ ಪವಾರ, ಮಂಜುಳಾ ಸಾಳೂಂಕೆ,ಹಣಮAತ ಪವರ, ತಿಮ್ಮಯ್ಯ ಮಾನೆ,ಜಯಕುಮಾರ ಚೌಧರಿ,ಕಂದಾಯ ಅಧಿಕಾರಿ ಸುನೀಲಕುಮಾರ ವೀರಶೆಟ್ಟಿ, ಎಇ ಶಾಂತರೆಡ್ಡಿ ದಂಡಗೂಲಕರ, ಆರೋಗ್ಯ ನಿರೀಕ್ಷಕ ಶಿವರಾಜಕುಮಾರ, ಶರಣು, ರಾಜೇಶ, ಜೆಇ ಬಸವರಾಜ ಸೇರಿದಂತೆ ಇತರರು ಇದ್ದರು.
ಇದೇ ಪ್ರಪ್ರಥಮ ಬಾರಿ ನಗರಸಭೆಯಲ್ಲಿ ಸಂಕ್ರಾತಿ ಹಬ್ಬವನ್ನು ನಗರದ ಸಾರ್ವಜನಿಕರೊಂದಿಗೆ ಎಳ್ಳು ಬೆಲ್ಲ ನೀಡಿ ಹಬ್ಬವನ್ನು ಸಂಭ್ರಮಿಸಿದ ಕ್ಷಣ ಕಂಡು ಬಂದಿತು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…