ಬಿಸಿ ಬಿಸಿ ಸುದ್ದಿ

ಅಂಗವಿಕಲ, ವೃದ್ಧಾಪ್ಯ ಮತ್ತು ವಿಧವಾ ವೇತನ ನೀಡಬೇಕೆಂದು ಆಗ್ರಹಿಸಿ ವಿದ್ಯಾರ್ಥಿ ಒಕ್ಕೂಟ ಸಮಿತಿಯಿಂದ ಮನವಿ

ಶಹಾಬಾದ:ಅಂಗವಿಕಲ, ವೃದ್ಧಾಪ್ಯ ಮತ್ತು ವಿಧವಾ ವೇತನವನ್ನು ತಕ್ಷಣ ನೀಡಬೇಕೆಂದು ಆಗ್ರಹಿಸಿ ಗುರುವಾರ ಹೊನಗುಂಟಾ ಗ್ರಾಮದ ಪಿಂಚಣಿ ಫಲಾನುವಿಗಳು ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟ ಸಮಿತಿಯಿಂದ ಹೊನಗುಂಟಾ ಗ್ರಾಮದ ಅಂಚೆ ಇಲಾಖೆಯ ಮೇಲ್ವಿಚಾರಕರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ದಲಿತ ವಿದ್ಯಾರ್ಥಿ ಒಕ್ಕೂಟದ ತಾಲೂಕಾ ಸಂಚಾಲಕ ಪೂಜಪ್ಪ ಮೇತ್ರೆ, ಸುಮಾರು ನಾಲ್ಕು ತಿಂಗಳಿನಿಂದ ಪಿಂಚಣಿ ಹಣ ಪಾವತಿಯಾಗದೇ ಅಂಗವಿಕಲರು, ವೃದ್ಧರು ಹಾಗೂ ವಿಧವೆಯರು ಪರಿತಪಿಸುತ್ತಿದ್ದಾರೆ. ಕೊರೋನಾ ಸಂಕಷ್ಟದ ಸಮಯದಲ್ಲಿ ಸಕಾಲಕ್ಕೆ ಪಿಂಚಣಿ ಕೈಗೆ ಸಿಗದೇ ಅಗತ್ಯ ಔಷಧಗಳನ್ನು ಕೊಳ್ಳಲೂ ಈ ಫಲಾನುಭವಿಗಳು ಪರದಾಡುತ್ತಿದ್ದಾರೆ.

ಹಲವು ಮಂದಿಗೆ ತುತ್ತು ಊಟಕ್ಕೂ ತೊಂದರೆ ಇದೆ. ಸುಮಾರು ನಾಲ್ಕು ತಿಂಗಳುಗಳಿಂದ ಹಣ ಬಂದಿಲ್ಲ.ಹಣಕ್ಕಾಗಿ ಗ್ರಾಮದ ಅಂಚೆ ಕಚೇರಿಗೆ ತೆರಳಿ ವಿಚಾರಿಸಿದರೇ ಈಗಾಗಲೇ ಮೂರು ತಿಂಗಳ ಪಿಂಚಣಿ ಹಣ ಬಂದಿದ್ದು ಬೆಳಕಿಗೆ ಬಂದಿದೆ.ಆದರೂ ಇಲ್ಲಿನ ಸಿಬ್ಬಂದಿ ಮಾತ್ರ ನೀಡುವಲ್ಲಿ ನಿರ್ಲಕ್ಷ್ಯತನ ತೋರಿದ್ದಾರೆ.ಹಣ ಬಂದು ನಾಲ್ಕು ತಿಂಗಳು ಕಳೆದರೂ ಹಣ ಯಾಕೇ ವಿತರಿಸಿಲ್ಲ ಎಂದು ಕೇಳಿದರೇ ಮೇಲ್ವಿಚಾರಕಿ ಯಾವುದೇ ಉತ್ತರ ನೀಡುತ್ತಿಲ್ಲ.ಅಲ್ಲದೇ ಎಲ್ಲಾ ಫಲಾನುಭವಿಗಳ ಪಾಸ್ ಬುಕ್ ಕೂಡ ಅಂಚೆ ಇಲಾಖೆಯ ಮೇಲ್ವಿಚಾರಕರ ಹತ್ತಿರವೇ ಇದುದ್ದನ್ನು ಕಂಡು ಆಶ್ಚರ್ಯವಾಗಿದೆ. ಫಲಾನುಭವಿಗಳಿಗೆ ಹಣ ನೀಡಿ ಪಾಸ್‌ಬುಕ್ ಅವರ ಹತ್ತಿರವೇ ಇಟ್ಟುಕೊಳ್ಳುತ್ತಿರುವುದು ನೋಡಿದರೇ ಬಡವರ ಪಿಂಚಣಿ ಹಣವನ್ನು ಲಪಟಾಯಿಸುವ ತಂತ್ರ ಉಪಯೋಗಿಸುತ್ತಿದ್ದಾರೆಯೇ ಎಂಬ ಸಂಶಯ ಮೂಡುತ್ತಿದೆ.

ಪಿಂಚಣಿ ಹಣಕ್ಕಾಗಿ ಕಳೆದ ೪ ತಿಂಗಳಿಂದ ವೃದ್ಧಾಪ್ಯ, ವಿಧವಾ ಮತ್ತು ಅಂಗವಿಕಲ ಫಲಾನುಭವಿಗಳನ್ನು ಅಲೆದಾಡಿಸಲಾಗುತ್ತಿದೆ. ಕೂಡಲೇ ಪಿಂಚಣಿ ಹಣ ಫಲಾನುಭವಿಗಳ ಮನೆಗೆ ತಲುಪಿಸಬೇಕು.ಇಲ್ಲದಿದ್ದಲ್ಲಿ ಧರಣಿ ಸತ್ಯಾಗ್ರಹ ಕೈಗೊಳ್ಳಲಾಗುವುದೆಂದು ತಿಳಿಸಿದರು.ಅದಕ್ಕೆ ಅಂಚೆ ಇಲಾಖೆಯ ಮೇಲ್ವಿಚಾರಕಿ ಶೀಲಾ ಅವರು ಮೂರು ತಿಂಗಳ ಪಿಂಚಣಿ ಬಂದಿದ್ದು ವಿತರಿಸಲಾಗುವುದೆಂದು ಹೇಳಿದರು.

ಫಲಾನುಭವಿಗಳಾದ ಭೀಮಶಾ ಗೋಯಪ್ಪ, ನಿಂಗಪ್ಪ ಬಸಲಿಂಗಪ್ಪ, ಕಾಶಿಬಾಯಿ ಶಿವಯೋಗಿ, ಶರಣಪ್ಪ ಹುಸನಪ್ಪ, ಭಾಗಮ್ಮ ರಾಮು,ಪದಮ್ಮ ರಾಯಪ್ಪ, ಮರೆಮ್ಮ ಭಾಗಪ್ಪ, ದಲಿತ ವಿದ್ಯಾರ್ಥಿ ಒಕ್ಕೂಟದ ನಗರ ಸಂಚಾಲಕ ಶರಣಬಸಪ್ಪ, ದಲಿತ ವಿದ್ಯಾರ್ಥಿ ಒಕ್ಕೂಟದ ಹೊನಗುಂಟಾ ಗ್ರಾಮ ಸಂಚಾಲಕ ರಾಘವೇಂದ್ರ ಗುಡೂರ್, ಪ್ರಕಾಶ ಮರೆಪ್ಪ, ನಿಂಗಪ್ಪ ನ್ಯಾವನಿ ಇತರರು ಇದ್ದರು.

 

emedia line

Recent Posts

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

2 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

2 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

4 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

4 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

4 hours ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

4 hours ago