ಬಿಸಿ ಬಿಸಿ ಸುದ್ದಿ

ವಿಶ್ವ ಯೋಗ ದಿನ: ಕಲಬುರಗಿಯಲ್ಲಿ ನಾಳೆ ಸದ್ಭಾವನಾ ನಡಿಗೆ

ಕಲಬುರಗಿ: ನಗರದ ಚಂದ್ರಕಾಂತ್ ಪಾಟೀಲ್ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ಜೂನ್ 21 ರಂದು ಬೆಳಿಗ್ಗೆ 6:30ರಿಂದ ೮ರವರೆಗೆ ಐದನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಹಮ್ಮಿಕೊಂಡಿದ್ದು, ಆ ನಿಮಿತ್ಯ ನಗರದಲ್ಲಿ ಜೂನ್ ೧೯ರಂದು ಸದ್ಭಾವಣಾ ನಡಿಗೆ ಆಯೋಜಿಸಲಾಗಿದೆ ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯ ಹಾಗೂ ಶಾಲೆಯ ಸಂಸ್ಥಾಪಕ ಬಿ.ಜಿ. ಪಾಟೀಲ್ ಅವರು ಇಲ್ಲಿ ಹೇಳಿದರು.

ಸೋಮವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪತಂಜಲಿ ಯೋಗ ಸಮಿತಿ, ವಿವಿಧ ಸಂಘಟನೆಗಳು ಹಾಗೂ ಶಾಲಾ, ಕಾಲೇಜುಗಳ ಸಹಯೋಗದೊಂದಿಗೆ ಹಮ್ಮಿಕೊಂಡ ಯೋಗ ದಿನದ ಕಾರ್ಯಕ್ರಮದಲ್ಲಿ ಸುಮಾರು ೩೦೦೦ ಜನರು ಭಾಗವಹಿಸುವ ನಿರೀಕ್ಷೆಯಿದೆ. ಸದ್ಬಾವಣಾ ನಡಿಗೆಯು ನಗರದ ಜಗತ್ ವೃತ್ತದಿಂದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದವರೆಗೆ ಜರುಗಲಿದೆ ಎಂದರು.

ಭಾರತ್ ಸ್ವಾಭಿಮಾನ ಟ್ರಸ್ಟ್ ಜಿಲ್ಲಾಧ್ಯಕ್ಷ ಶಿವಾನಂದ್ ಸಾಲಿಮಠ್ ಅವರು ಮಾತನಾಡಿ, ಸಮಿತಿಯು ಕೇವಲ ಜೂನ್ ೨೧ರ ವಿಶ್ವ ಯೋಗ ದಿನದಂದು ಅಷ್ಟೇ ಕಾರ್ಯಕ್ರಮ ಮಾಡಿ ಮುಗಿಸುವುದಿಲ್ಲ. ಬದಲಾಗಿ ವರ್ಷದಲ್ಲಿ ೩೬೫ ಯೋಗ ಶಿಬಿರಗಳನ್ನು ಹಮ್ಮಿಕೊಳ್ಳಲಿದೆ ಎಂದರು.

ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ಯೋಗ ಶಿಕ್ಷಕರ ಶಿಬಿರ, ಬೊಜ್ಜು ನಿವಾರಣಾ ಶಿಬಿರ, ಮಧುಮೇಹ ನಿವಾರಣಾ ಶಿಬಿರ ಸೇರಿದಂತೆ ಒಟ್ಟು ಐದು ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು. ಮೊದಲು ಪ್ರತಿ ವಾರ್ಡ್‌ಗೆ ಸೀಮಿತವಾಗಿದ್ದ ಶಿಬಿರವು ಇನ್ನು ಮುಂದೆ ಗ್ರಾಮೀಣ ಪ್ರದೇಶದಲ್ಲಿಯೂ ಸಹ ಹಮ್ಮಿಕೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ೨೦ ಜನಗಳು ಇದ್ದಲ್ಲಿ ಪ್ರತಿಯೊಬ್ಬ ಯೋಗ ಶಿಕ್ಷಕ ಒಂದು ತರಬೇತಿ ಶಿಬಿರ ಪ್ರಾರಂಭಿಸುವರು ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ ೫೦೦ರಿಂದ ೬೦೦ ಜನ ಯೋಗ ಶಿಕ್ಷಕರಿದ್ದಾರೆ ಎಂದು ತಿಳಿಸಿದ ಅವರು, ಪ್ರತಿ ದಿನ ಒಂದೊಂದು ಹೊಸ ಯೋಗ ಕೇಂದ್ರ ಆರಂಭಿಸುವ ಸಂಕಲ್ಪ ಹೊಂದಲಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಪತಂಜಲಿ ಯೋಗ ಸಮಿತಿ ಜಿಲ್ಲಾಧ್ಯಕ್ಷ ಮಚೇಂದ್ರನಾಥ್ ಮೂಲಗೆ, ಮಹಿಳಾ ಪ್ರಭಾರಿ ಶ್ರೀಮತಿ ಸುಮಂಗಲಾ ಚಕ್ರವರ್ತಿ, ಸಹ ಪ್ರಭಾರಿ ಎಚ್. ಸುಭಾಷಚಂದ್ರ, ಜಾನಪ್ಪಗೌಡ ಪಾಟೀಲ್, ಬಸವರಾಜ್ ಕೊಳ್ಳೂರ್, ಶಿವಾನಂದ್ ಹಿರೇಮಠ್, ಮಂಜುಳಾ ಗದ್ದುಗೆ ಮುಂತಾದವರು ಉಪಸ್ಥಿತರಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

4 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

4 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

4 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

21 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

23 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago