ಕಲಬುರಗಿ: ನಗರದ ಬಿಗ್ ಬಜಾರ್ ಸಂಸ್ಥೆಯು (www.shop.bigbazaar.com) ಮೂಲಕವೇ 2500 ರೂ. ಮೌಲ್ಯದ ಪದಾರ್ಥಗಳನ್ನು ಖರೀದಿಸಿದರೆ 3 ಸಾವಿರ ರೂ. ಮೌಲ್ಯದ ವೋಚರ್‌ಗಳನ್ನು ಜ.25ರವರೆಗೆ ಪಡೆಯುವ ಅವಕಾಶ ಕಲ್ಪಿಸಿದೆ ಎಂದು ಕಲಬುರಗಿ ಬಿಗ್‌ಬಜಾರ್ ವ್ಯವಸ್ಥಾಪಕರಾದ ಬಸವರಾಜ ಗೌಡ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘ ’ಮಹಾ ಉಳಿತಾದಯ 6 ದಿನಗಳು’ಕೊಡುಗೆಯನ್ನು ಪ್ರಕಟಿಸಿದ್ದೇವೆ. ಕಲಬುರಗಿ ಮಾತ್ರವಲ್ಲದೆ, ದೇಶದ ಎಲ್ಲ ಬಿಗ್ ಬಜಾರ್ ಮತ್ತು ಹೈಪರ್ ಸಿಟಿ ಮಳಿಗೆಗಳಲ್ಲೂ ವೋಚರ್ ಪಡೆದುಕೊಳ್ಳುವ, ಬಳಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಈಗಾಗಲೇ ಮೊದಲ ಹಂತದಲ್ಲಿ ವೋಚರ್‌ಗಳನ್ನು ನೀಡಲು ಪ್ರಾರಂಭಿಸಿದ್ದು, ಜ.೨೫ಕ್ಕೆ ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದರು.
ಜ.26ರಿಂದ ಮಾ.31ರವರೆಗೆ 2ನೇ ಹಂತದಲ್ಲಿ ವೋಚರ್‌ಗಳನ್ನು ಖರೀದಿಸುವ ಅವಕಾಶ ನೀಡಲಾಗಿದೆ. ಫ್ಯಾಷನ್, ಗೃಹೋಪಯೋಗಿ, ಅಡುಗೆ ಮನೆ ಬಳಕೆ ಮತ್ತು ದಿನನಿತ್ಯದ ಅಗತ್ಯ ವಸ್ತುಗಳ ಮೇಲೆ ವಿಶೇಷ ಕೊಡುಗೆ, ಕೊಂಬೊ ಮತ್ತು ರಿಯಾಯಿತಿಗಳನ್ನು ನೀಡಲಾಗುತ್ತಿದೆ ಎಂದರು.
ಒಂದು ವೇಳೆ ಆನ್‌ಲೈನ್‌ನಲ್ಲಿ ಪಾವತಿಸಲಾಗದಿದ್ದವರು ನೇರವಾಗಿ ಬಿಗ್‌ಬಜಾರ್‌ನಲ್ಲೂ ಪಡೆಯಬಹುದು. ಈ ಸಮಯದಲ್ಲಿ ಗ್ರಾಹಕರು ಅಂಗಡಿಯ ಕೊಡುಗೆಗಳಿಗಿಂತ ಶೇ.೨೦ರಷ್ಟು ಹೆಚ್ಚಿನ ರಿಯಾಯಿತಿ ಪಡೆದುಕೊಳ್ಳಬಹುದು. ಕೂಪನ್ ಪಡೆಯದೇ ನೇರವಾಗಿ ಖರೀದಿಸುವ ಗ್ರಾಹಕರಿಗೂ ಉತ್ಪನ್ನಗಳ ಮೇಲಿನ ರಿಯಾಯಿತಿ ಇರುತ್ತದೆ ಎಂದು ಅವರು ಹೇಳಿದರು.
ಉಪಾ ವ್ಯವಸ್ಥಾಪಕರಾದ ಗುರುನಾಥ ಜೋಶಿ ಹಾಗೂ ಆಡಳಿತಧಿಕಾರಿ ಶೀಮಂತ ಸುಳ್ಯದ ಸೇರಿದಂತೆ ಮುಂತಾದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…