ಕಲಬುರಗಿ ಬಿಗ್ ಬಜಾರ್‌ನಲ್ಲಿ ’ಮಹಾ ಉಳಿತಾಯದ 6 ದಿನಗಳು’

0
51

ಕಲಬುರಗಿ: ನಗರದ ಬಿಗ್ ಬಜಾರ್ ಸಂಸ್ಥೆಯು (www.shop.bigbazaar.com) ಮೂಲಕವೇ 2500 ರೂ. ಮೌಲ್ಯದ ಪದಾರ್ಥಗಳನ್ನು ಖರೀದಿಸಿದರೆ 3 ಸಾವಿರ ರೂ. ಮೌಲ್ಯದ ವೋಚರ್‌ಗಳನ್ನು ಜ.25ರವರೆಗೆ ಪಡೆಯುವ ಅವಕಾಶ ಕಲ್ಪಿಸಿದೆ ಎಂದು   ಕಲಬುರಗಿ ಬಿಗ್‌ಬಜಾರ್ ವ್ಯವಸ್ಥಾಪಕರಾದ ಬಸವರಾಜ ಗೌಡ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘ ’ಮಹಾ ಉಳಿತಾದಯ 6 ದಿನಗಳು’ಕೊಡುಗೆಯನ್ನು ಪ್ರಕಟಿಸಿದ್ದೇವೆ. ಕಲಬುರಗಿ ಮಾತ್ರವಲ್ಲದೆ, ದೇಶದ ಎಲ್ಲ ಬಿಗ್ ಬಜಾರ್ ಮತ್ತು ಹೈಪರ್ ಸಿಟಿ ಮಳಿಗೆಗಳಲ್ಲೂ ವೋಚರ್ ಪಡೆದುಕೊಳ್ಳುವ, ಬಳಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಈಗಾಗಲೇ ಮೊದಲ ಹಂತದಲ್ಲಿ ವೋಚರ್‌ಗಳನ್ನು ನೀಡಲು ಪ್ರಾರಂಭಿಸಿದ್ದು, ಜ.೨೫ಕ್ಕೆ ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದರು.

Contact Your\'s Advertisement; 9902492681

ಜ.26ರಿಂದ ಮಾ.31ರವರೆಗೆ 2ನೇ ಹಂತದಲ್ಲಿ ವೋಚರ್‌ಗಳನ್ನು ಖರೀದಿಸುವ ಅವಕಾಶ ನೀಡಲಾಗಿದೆ. ಫ್ಯಾಷನ್, ಗೃಹೋಪಯೋಗಿ, ಅಡುಗೆ ಮನೆ ಬಳಕೆ ಮತ್ತು ದಿನನಿತ್ಯದ ಅಗತ್ಯ ವಸ್ತುಗಳ ಮೇಲೆ ವಿಶೇಷ ಕೊಡುಗೆ, ಕೊಂಬೊ ಮತ್ತು ರಿಯಾಯಿತಿಗಳನ್ನು ನೀಡಲಾಗುತ್ತಿದೆ ಎಂದರು.

ಒಂದು ವೇಳೆ ಆನ್‌ಲೈನ್‌ನಲ್ಲಿ ಪಾವತಿಸಲಾಗದಿದ್ದವರು ನೇರವಾಗಿ ಬಿಗ್‌ಬಜಾರ್‌ನಲ್ಲೂ ಪಡೆಯಬಹುದು. ಈ ಸಮಯದಲ್ಲಿ ಗ್ರಾಹಕರು ಅಂಗಡಿಯ ಕೊಡುಗೆಗಳಿಗಿಂತ ಶೇ.೨೦ರಷ್ಟು ಹೆಚ್ಚಿನ ರಿಯಾಯಿತಿ ಪಡೆದುಕೊಳ್ಳಬಹುದು. ಕೂಪನ್ ಪಡೆಯದೇ ನೇರವಾಗಿ ಖರೀದಿಸುವ ಗ್ರಾಹಕರಿಗೂ ಉತ್ಪನ್ನಗಳ ಮೇಲಿನ ರಿಯಾಯಿತಿ ಇರುತ್ತದೆ ಎಂದು ಅವರು ಹೇಳಿದರು.

ಉಪಾ ವ್ಯವಸ್ಥಾಪಕರಾದ ಗುರುನಾಥ ಜೋಶಿ ಹಾಗೂ ಆಡಳಿತಧಿಕಾರಿ ಶೀಮಂತ ಸುಳ್ಯದ ಸೇರಿದಂತೆ ಮುಂತಾದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here