ಬಿಸಿ ಬಿಸಿ ಸುದ್ದಿ

ನೀಡಿ, ಪಡೆದು ತೃಪ್ತಿ ಪಡೆಯುವುದು ಪ್ರಸಾದ: ಡಾ.ಜಯಶ್ರೀದಂಡೆ

ಕಲಬುರಗಿ: ಹಸಿವಿನ ತೊಳಲಾಟ ಇದ್ದಲ್ಲಿ, ಹುಸಿ ನಾಚಿಕೆ ಹೇಸಿಕೆ ಇದ್ದಲ್ಲಿತೃಪ್ತಿಇರಲಾರದು.  ಹೀಗಾಗಿ ನೀಡಿ, ಸ್ವೀಕರಿಸಿ ತೃಪ್ತಿ ಹೊಂದುವುದು ಪ್ರಸಾದವೆನಿಸುತ್ತದೆ ಎಂಬ ಮಹೋನ್ನತ ವಿಚಾರ ಶರಣರದಾಗಿದೆ ಎಂದು ಡಾ.ಜಯಶ್ರೀದಂಡೆ ಅವರು  ವಿವರಿಸಿದರು.

ಬಸವ ಸಮಿತಿಯಅನುಭವ ಮಂಟಪದಲ್ಲಿ ನಡೆದ ಲಿಂ.ಜಗದೇವಪ್ಪರೇವಪ್ಪ ಮೋತಕಪಲ್ಲಿ ಸ್ಮರಣಾರ್ಥ ೬೫೪ನೆಯದತ್ತಿಕಾರ್ಯಕ್ರಮದಲ್ಲಿ ಭಾಗವಹಿಸಿ ’ಶರಣರ ಪ್ರಸಾದತತ್ತ್ವ’ ಕುರಿತು ಮಾತನಾಡುತ್ತಿದ್ದರು.

ಶರಣರದೃಷ್ಟಿಯಲ್ಲಿ ಪ್ರಸಾದವೆಂದರೆಒಬ್ಬನು ಗಳಿಸಿದ ಒಟ್ಟು ಸಂಪತ್ತು.ಹೀಗೆ ತಮ್ಮ ಸತ್ಯ ಶುದ್ಧಕಾಯಕದಿಂದ ಗಳಿಸಿದ ಒಟ್ಟು ಸಂಪತ್ತು ಗಳಿಸಿದ, ಸಂಗ್ರಹಿಸಿದ ಸಂಪತ್ತು ಎನಿಸುತ್ತದೆ. ಹೀಗೆ ಗಳಿಸಿದ  ಎಲ್ಲ ಬಗೆಯ ಸಂಪತ್ತು ಪದಾರ್ಥವೆನಿಸುತ್ತದೆ. ಈ ಒಟ್ಟು ಪದಾರ್ಥ-ಸಂಪತ್ತುತನ್ನದಲ್ಲ,  ಇದೆಲ್ಲ ಶಿವನ ಸೊಮ್ಮು ಎಂಬ  ಭಾವದಿಂದ, ಗುರು, ಲಿಂಗಗಳಿಗೆ ಅರ್ಪಿಸಿದಾಗ ಅದು ’ಒಕ್ಕಪ್ರಸಾದ’ ಎನಿಸುತ್ತದೆ.

ಹೀಗೆ ಒಕ್ಕಪ್ರಸಾದದಲ್ಲಿತನ್ನ ಶಕ್ತ್ಯಾನುಸಾರ ಸ್ವಲ್ಪ ಭಾಗವನ್ನುಜಂಗಮಕ್ಕೆಅಂದರೆ ಸಮಾಜಕ್ಕೆದಾಸೋಹ ಮಾಡಬೇಕು. ಹೀಗೆ  ದಾಸೋಹ ಮಾಡಿ ಉಳಿದದ್ದು ’ಮಿಕ್ಕಪ್ರಸಾದ’ ಎನಿಸುತ್ತದೆ.  ಇದುಕಾಯಕ ಮಾಡಿದವನುತನಗಾಗಿ, ತನ್ನಕುಟುಂಬದ ಅಗತ್ಯಗಳಿಗಾಗಿ ಬಳಸಿಕೊಳ್ಳಬಹುದಾದ ಸಂಪತ್ತಿನ ಭಾಗವಾಗಿರುತ್ತದೆ.ಇದು ಶರಣರ ಪ್ರಸಾದತತ್ತ್ವದಒಟ್ಟು ಪರಿಕಲ್ಪನೆಆಗಿದೆಎಂದುಡಾ.ಜಯಶ್ರೀದಂಡೆಅವರು ವಿವರಿಸಿದರು.

ಆಹಾರಕ್ಕೆ ಸಂಬಂಧಿಸಿದಂತೆ ಪ್ರಸಾದಎಂದರೆಎಂಜಲುಅಲ್ಲ. ಅಟ್ಟಅಡಿಗೆಯಲ್ಲಿ ಸಂಬಂಧಿಸಿದ ಎಲ್ಲರೂ ಪ್ರಸಾದ ಸ್ವೀಕರಿಸಿದ ನಂತರ ಹೆಚ್ಚಿಗೆ ಉಳಿದ ಅಟ್ಟಅಡಿಗೆಅದಾಗಿರುತ್ತದೆ.ಶರಣರದೃಷ್ಟಿಯಲ್ಲಿಆಹಾರಅನಾವಶ್ಯಕವಾಗಿ ಹಾಳಾಗಬಾರದು ಎಂಬ ಚಿಂತನೆಯೂಇದೆ.ದೊಡ್ಡದೊಡ್ಡ ಸಮಾರಂಭಗಳಲ್ಲಿ ಮಾಡಿದಅಡಿಗೆ ಹಾಳಾಗದಂತೆ, ಅದನ್ನುಅವಶ್ಯವಿದ್ದವರಿಗೆ ಮುಟ್ಟುಸುವಅಂದರೆ ಪ್ರಸಾದವನ್ನುದಾಸೋಹ ಮಾಡುವ ಮಾತುಗಳನ್ನು ಶರಣರಆಡುತ್ತಾರೆಂದುಡಾ. ಜಯಶ್ರೀ ವಿವರಿಸಿದರು.

ಸಭೆಯಲ್ಲಿ ಕಲಬುರಗಿ ಬಸವ ಸಮಿತಿಯಅಧ್ಯಕ್ಷರಾದಡಾ. ವಿಲಾಸವತಿ ಖೂಬಾ,ಡಾ.ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಕೇಂದ್ರದ ನಿರ್ದೇಶಕರಾದಡಾ.ವೀರಣ್ಣದಂಡೆ,ದತ್ತಿ ದಾಸೋಹಿಗಳಾದ ಶ್ರೀ ಕಾಶೀನಾಥ ಜಗದೇವಪ್ಪ ಮೋತಕಪಲ್ಲಿ ಹಾಗೂ ಪರಿವಾರದವರು ಹಾಜರಿದ್ದರು.ಡಾ. ಆನಂದ ಸಿದ್ದಾಮಣಿ ಕಾರ್ಯಕ್ರಮ ನಡೆಸಿಕೊಟ್ಟರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

3 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

13 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

13 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

13 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago