ಕಲಬುರಗಿ: ತಮ್ಮ 47 ನೇ ಹುಟ್ಟುಹಬ್ಬ ಆಚರಣೆ ಕೈಬಿಟ್ಟು ಹಳ್ಳಿಗಳತ್ತ ಹೆಜ್ಜೆ ಹಾಕಿರುವ ಡಾ. ಅಜಯ್ ಸಿಂಗ್ ಇದೇ ಮೊದಲ ಬಾರಿಗೆ ತಮ್ಮ ಮತಕ್ಷೇತ್ರ ಜೇವರ್ಗಿಯ ಜೇರಟಗಿ ಊರಲ್ಲಿ ವಾಸ್ತವ್ಯ ಮಾಡುವ ಮೂಲಕ ತಮ್ಮ ಕನಸಿನ ಗ್ರಾಮ ವಾಸ್ತವ್ಯಕ್ಕೆ ಚಾಲನೆ ನೀಡಿದ್ದು ಮೊದಲ ಪ್ರಯತ್ನದಲ್ಲೇ ಜನಮನ ಸೆಳೆಯುವಲ್ಲಿ ಯಶ ಕಂಡಿದ್ದಾರೆ.
ಗ್ರಾಮ ವಾಸ್ತವ್ಯದಿಂದ ಆತ್ಮಿಯತೆ ಹೆಚ್ಚುತ್ತದೆ ಎಂದು ಹೇಳುತ್ತ ಹಳ್ಳಿಗಳತ್ತ ಚಿತ್ತ ನೆಟ್ಟಿರುವ ಡಾ. ಅಜಯ್ ಸಿಂಗ್ ಅವರನ್ನು ಜೇರಟಗಿಗೆ ಆತ್ಮೀಯವಾಗಿ ಬರಮಾಡಿಕೊಂಡ ಜನತೆ ಊರಲ್ಲಿನ ಹಲವಾರು ಸಮಸ್ಯೆಗಳನ್ನು ಗಮನಕ್ಕೆ ತರುವ ಮೂಲಕ ಪರಿಹಾರಕ್ಕೆ ಆಗ್ರಹಿಸಿದರು.
ಮೋದೀನ್ ಸಾಬ್ ಹಣಗಿಕಟ್ಟಿ ಮನೆಯಲ್ಲಿ ವಾಸ್ತವ್ಯ, ರಮೇಶ, ಸಿದ್ದರಾಮ ಹೊಸ್ಮನಿ ಮನೆಯಲ್ಲಿ ಉಪಹಾರ ಸೇವಿಸುವ ಮೂಲಕ ಸಮಾಜದಲ್ಲಿ ಸಾಮರಸ್ಯದ ಸಂದೇಶ ಸಾರುವಲ್ಲಿಯೂ ಯಶ ಕಂಡ ಡಾ. ಅಜಯ್ ಸಿಂಗ್ ಪ್ರತಿ ತಿಂಗಳು ವಾಸ್ತವ್ಯ ಮಾಡೋದಾಗಿಯೂ ಗೋಷಿಸಿ ಕ್ಷೇತ್ರದ ಜನರ ಗಮನ ಸೆಳೆಯುವಲ್ಲಿ ಯಶ ಕಂಡಿದ್ದಾರೆ ಎನ್ನಬಹುದು.
ಸಾಕಷ್ಟು ಅನುದಾನ ಬಂದರೂ ಜನರ ಬೇಕು- ಬೇಡ ಅರಿಯದೆ ಸರಿಯಾದ ರೀತಿಯಲ್ಲಿ ಅದನ್ನು ವೆಚ್ಚ ಮಾಡಲು ಆಗದು. ವಾಸ್ತವ್ಯ ಹೊಸ ನುಭವ ನೀಡಿದೆ. ತಂದೆಯವರಾದ ದಿ. ಧರಂಸಿಂಗ್ ಕಟಿರೊಟ್ಟಿ, ಶೇಂಗಾ ಹಿಂಡಿ ತಂದು ಉಣ್ಣಿಸುವ ಮೂಲಕ ಹಳ್ಳಿ ಜನರ ಗೋಳು ಹೇಳುತ್ತಿದ್ದರು. ಹುಟ್ಟಿದಾಗಿನಿಂದ ಇಂದಿಗೂ ಹಳ್ಳಿಯಲ್ಲಿ ಮಲಗಿದ್ದಿಲ್ಲ. ಜೇರಟಗಿಯಲ್ಲಿ ಮಲಗುವ ಮೂಲಕ ಬದುಕಿನಲ್ಲಿ ಹೊಸ ಪಾಠ, ಅನುಭವ ನನ್ನದಾಗಿಸಿಕೊಂಡಿರುವೆ ಎಂದೂ ಡಾ. ಅಜಯ್ ಹೇಳುವ ಮೂಲಕ ತಮ್ಮ ಹೊಸ ಯೋಜನೆಯೊಂದಿಗೆ ಜನರಿಗೆ ಹತ್ತಿರವಾಗುತ್ತ ಹೊರಟಿದ್ದಾರೆ.
ಶಾಸಕರು ಮತ ಹಾಕಿದ ಮೇಲೆ ಊರಿಗೇ ಬರೋದಿಲ್ಲ. ಆದರೆ ಡಾ. ಅಜಯ್ ಸಿಂಗ್ ನಮ್ಮೂರಿಗೆ ಬಂದಿದ್ದಾರೆ. ಇದು ಸಂತಸ ತಂದಿದೆ ಎಂದು ಊರಿನವರೇ ಆದ ವಿಜಯಪುರದಲ್ಲಿ ಉಪನ್ಯಾಸಕರಾಗಿರುವ ಮಾಲೀಪಾಟೀಲ್ ಹೇಳಿದರೆ, ಡಾ. ಅಜಯ್ ಸಿಂಗ್ ನಮ್ಮೂರಿಗೆ ಬಂದು ಸಮಸ್ಯೆ ಕೇಳಿz್ದÉೀ ಖುಷಿಯಾಗಿದೆ ಎಂದು ಮೊಹಮದ್ ಗಪೂರ್ ಹೇಳಿದ್ದಾರೆ. ಇದಲ್ಲದೆ ರಮೇಶ ಹೊಸ್ಮನಿ, ಸಿದ್ದರಾಮ ಸೇರಿದಂತೆ ಅನೇಕರು ಡಾ. ಅಜಯ್ ಸಿಂಗ್ ಅವರಿಗೆ ಅಭಿನಂದಿಸಿದ್ದಾರೆ.
ನಮ್ಮ ದೇಶ ಅಭಿವೃದ್ದಿಯಾಗಬೇಕ್ಕಾದರೆ ಹಳ್ಳಿಗಳ ಅಭಿವೃದ್ದಿಯಾಗಬೇಕು. ಗ್ರಾಮ ವಾಸ್ತವ್ಯದಿಂದ ಜನರ ಜೊತೆಯಲ್ಲಿ ಬೆರೆತು ಅವರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತ್ತಾಗುತ್ತದೆ. ಹಾಗೆ ವಾಸ್ತವ್ಯ ಮಾಡುವುದರಿಂದ ಅಲ್ಲಿನ ಜನರ ನಡುವೆ ಅತ್ಮೀಯತೆ ಹೆಚ್ಚುತ್ತದೆ. ಇಡೀ ವರ್ಷ ಪೂರ್ತಿ ಮಹಾ ಮಾರಿ ಕರೊನಾ ಆವರಿಸಿ ಇಡಿ ದೇಶದ ಜನ ತ್ತರಿಸುವಂತ್ತಾಗಿ ಜನ ಜೀವನವೆ ಅಸ್ತವ್ಯಸ್ತವಾದಂತ್ತಾಗಿತ್ತು. 13 ನೂರಕಿಂತ ಹೆಚ್ಚಿನ ಜನರಿಗೆ ಕರೊನಾ ಲಸಿಕೆಯನ್ನು ನೀಡಿದ್ದೆವೆ. ಅಭಿವೃದ್ದಿಯ ಕಾರ್ಯಗಳು ನಿರಂತರ ಪ್ರಕ್ರಿಯೆ ಇದು ಇಂದು ನಾನು ನಿಮ್ಮ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆ. -ಡಾ. ಅಜಯ್ ಸಿಂಗ್, ಶಾಸಕರು, ಜೇವರ್ಗಿ
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…