ಅಂಕಣ ಬರಹ

ಬಯಸದೆ ಬಂದ ಸ್ನೇಹ ಹೂವಿನಂತೆ ಅರಳಿತು

ಸ್ನೇಹ ಬಂದ ಜೀವನದ ನಿಜವಾದ ಆನಂದ ಎಂದು ಹೇಳಬಹುದು. ಏಕೆಂದರೆ ಸ್ನೇಹದ ನಂಟು ಬಿಡಿಸಲಾಗದ ಗಂಟು. ಈ ಮಾತು ಹೇಳತಿದೀನಿ ಅಂದ್ರೆ ನಾವುಗಳು ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಅಭ್ಯಾಸ ಎಂಬ ಹೆಸರಲ್ಲಿ ವಿದ್ಯಾ ಸಂಸ್ಥೆಗೆ ಬಂದು ಪರಿಚಯವು ಈ ಸ್ನೇಹಕ್ಕೆ ತಿರುಗಿತು.

ಈ ಸ್ನೇಹ ಎಂಬುದು ಚಿಗುರುವುದು ಸಾಮಾನ್ಯವಾಗಿ ಶಾಲೆ ಕಾಲೇಜು ಹಂತದಲ್ಲಿ ಜೀವನ ಪೂರ್ತಿ ಮುಂದುವರೆಯುವುದು. ಆ ಸ್ನೇಹ ಇದೀಗ ಆಳವಾಗಿ ಬೇರನ್ನೇ ಬಿಟ್ಟಿದೆ, ಕಾಲೇಜು ಜೀವನ ಎನ್ನುವುದು ಒಂತರ ಸ್ನೇಹದ ಕನಸುಗಳು, ಸಿಹಿ ಕಹಿ ನೆನಪುಗಳ ಸಂತೆ ಇದ್ದ ಹಾಗೆ ಈ ಹಲವಾರು ನೆನಪುಗಳು ಸಂತೆಯಲ್ಲಿ ಅದೆಷ್ಟೋ ಸ್ನೇಹಿತರನ್ನ ಸಂಪಾದಿಸುತ್ತೇವೆ ಆದ್ರೆ ಅದ್ರಲ್ಲಿ ಎಷ್ಟು ಜನ ಸ್ನೇಹಿತರು ನಮ್ಮವರಾಗಿರುವರೋ ಎಂದು ತಿಳಿವುದಿಲ್ಲ ತಾತ್ಕಾಲಿಕ ವಾಗಿವು ಇರಬಹುದು ನಿರಂತರವಾಗಿರಬೇಕೇಂದೆನಿಲ್ಲ.

ಅದೇ ರೀತಿ ಕಣ್ ಮುಂದೆ ಇದ್ದಾಗ ಎಲ್ಲವು ಚೆಂದ ಅನಿಸುತ್ತದೆ. ಆದ್ರೆ ಅದ್ರಲ್ಲಿ ಹಂತದ ಜೀವನ ಮುಗಿದಾಗ ಸ್ನೇಹತರಿಗೆ ಹೇಳುವ ಅಂತಿಮ ವಿದಾಯದ ನೋವನ್ನು ಮಾತ್ರ ಹೇಳುತಿರುವುದು. ಈ ಪ್ರಪಂಚದಲ್ಲಿ ಸ್ನೇಹಿತರಿಲ್ಲದವರು ಯಾರು ಇರುವುದಿಲ್ಲ ಏಕೆಂದರೆ ಆ ಜೀವನ ಕಲ್ಪನೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ, ಗೆಳೆತನ ಎಂಬುದು ಪರಿಪೂರ್ಣತೆಯಿಂದ ಕುಡಿದರೆ ನಮ್ಮ ಜೀವನವು ಕೂಡ ಪರಿಪೂರ್ಣತೆ ಇಂದ ಕೂಡಿರಲು ಸಾಧ್ಯ. ನಮ್ಮ ಸ್ನೇಹ ಹೇಗೆಂದರೆ “ಸ್ನೇಹ ಒಂದು ಸುಂದರ ಕವನ, ಬರೆದರೂ ಮುಗಿಯದ ಕತನಮರೆತರು ಮರೆಯಲಾಗದ ಸ್ಪಂದನ ಬಿಟ್ಟರು ಬಿಡಲಾಗದ ಗೆಳೆತನ ಅದುವೇ ಸ್ನೇಹದ ಬಂದ”. ಸ್ನೇಹದ ಮುಂದೆ ಯಾವ ವ್ಯಕ್ತಿ ಬೇಕಾದ್ರು ತನ್ನ ಮನಸ್ಸಿನ ಮಾತು ಮುಚ್ಚಿಡಲು ಆಗುವುದಿಲ್ಲ ಈ ಒಂದು ಪದ ಪವಿತ್ರವಾದ ಪದವಾಗಿದೆ.

ಕಾಲೇಜು ಜೀವನ ಒಂದು ರೀತಿಯ ಸಂಬಂಧ ದಲ್ಲಿರುವುದು ಅನಿವಾರ್ಯ ಎಂಬಂತೆ ಪರಿಗಣಿಸಲಾಗುವುದು. ಕಾಲೇಜಿನಲ್ಲಿ ಗುರುಗಳು ಹೇಳಿಕೊಡುವ ಪಾಠಗಳು, ಪರೀಕ್ಷೆಗೆ ಮಾತ್ರ ಸೀಮಿತವಾಗಿರುತ್ತವೆ ಹೊರತು ಜೀವನದಲ್ಲಿ ಅಳವಡಿಸಿಕೊಳ್ಳಳು ಆಗುವುದಿಲ್ಲ . ನಿಜವಾದ ಅನುಭವ ಸಿಗುವುದು ಕಾಲೇಜಿನ ಹೊರಗಡೆ ಅವರಿವರ ಜೊತೆಯಲ್ಲಿ ಬೇರೆತರೆ ಮಾತ್ರ ಆದರೂ ಕೂಡ ನಮಗೆ ಜೀವನ ಕಟ್ಟಿಕೊಳ್ಳಲು ಅಥವಾ ಸಂಘರ್ಷಸಿಸಲು ಕಲಿಸಿಕೊಡುವುದೇ ಈ ಕಾಲೇಜು. ಏಕೆಂದರೆ ಈ ಸಮಾಜದಲ್ಲಿ ಹೇಗೆ ವರ್ತಿಸಬೇಕು ಕಷ್ಟದ ಸಂದರ್ಭದಲ್ಲಿ ಯಾವ್ ರೀತಿ ಮುನ್ನುಗ್ಗಬೇಕು ಹೀಗೆ ಹಲವಾರು ವಿಷಯಗಳ ಬಗ್ಗೆ ಕಾಲೇಜಿನಲ್ಲಿ ಕಲಿಸುವಸ್ಟು ಬೇರೆಲ್ಲೂ ಕಲಿಯಲು ಸಾಧ್ಯವೇ ಇಲ್ಲ. ಗುರುಗಳು ಹೇಳಿಕೊಡುವ ರೀತಿ ನೀತಿಗಳ ಸ್ನೇಹಿತರಿಂದ ಪಡೆದುಕೊಳ್ಳುವ ಆತ್ಮೀಯತೆಯ ಸಂಬಂಧದ ಭಾವನೆ ಹೀಗೆ ಹಲವು ವಿಷಯಗಳಿಂದ ಎಲ್ಲವನ್ನು ಅನುಸರಿಸಿಕೊಂಡು ಹೋಗುವ ತಾಳ್ಮೆಯ ಗುಣವನ್ನು ಬೆಳೆಸಲು ಆಗುವುದು ಕಾಲೇಜಿನಿಂದ  ಅಲ್ಲಿರುವ ಗುರುಗಳಿಂದ ಹಾಗೂ ಸ್ನೇಹಿತರಿಂದ ಮಾತ್ರ.

ನಿಜವಾದ ಸ್ನೇಹಿತರೆಂದರೆ ನಮ್ಮ ಕಷ್ಟದ ಸಮಯದಲ್ಲಿ ನನ್ ಇದೀನಿ ಅಂತ ಹೇಳೋರು ಮಾತ್ರ ನಿಜವಾದ ಸ್ನೇಹಿತರು. ಸ್ನೇಹಿತರು ಹೇಗೆ ಇರಬೇಕೆಂದರೆ ಸದಾ ಹಿತ ಯಶಸ್ಸನ್ನು ಬಯಸುವ ಗುಣ ಹೊಂದಿರಬೇಕು. ಆದ್ರೆ ಇಂದಿನ ದಿನಗಳಲ್ಲಿ ಹೆಚ್ಚಾಗಿ ಕಾಣುತ್ತಿರುವುದು ಬರಿ ದುಡ್ಡಿಗೆ ಬೆಲೆ ಕೊಡೊ ಸ್ನೇಹಿತರನ್ನು ಕಂಡುಬರುತ್ತದೆ, ಆದರೆ ಕೆಲವರು ಶ್ರೀಮಂತಿಕೆಗೆ ಬೆಲೆ ಕೊಟ್ಟರೆ ಇನ್ನೂ ಕೆಲವರು ಸ್ನೇಹದ ಬಗ್ಗೆ ಪರಿಪೂರ್ಣವಾಗಿ ಅರಿತುಕೊಂಡು ಸದಾ ಅವರ ಬೇಕು ಬೇಡಿಕೆಗಳನ್ನು ಕಷ್ಟ ದುಃಖ, ನೋವು ನಲಿವುಗಳಲ್ಲಿ ಸದಾ ಭಾಗಿಯಾಗುತ್ತಾರೆ.

ಎಲ್ಲದಕ್ಕಿಂತ ಮುಖ್ಯವಾಗಿ ಕಾಲೇಜಿಗೆ ಹೋಗುವುದು ಹಾಜರಾತಿಯ ಪರೀಕ್ಷೆಯ ಸಲುವಾಗಿ ದಿನಾಲೂ ಹೋಗದಿದ್ದರೆ ಈ ಪರೀಕ್ಷೆ ಎಂಬ ಯುದ್ಧಕ್ಕೆ ಕುಡಿಸುವುದಿಲ್ಲ ತರಗತಿಗಳು ನಡೆಸುವುದೆ ವಿದ್ಯಾದ ಸಲುವಾಗಿ . ಆದರೂ ಕೂಡ ಪದವಿ ಓದುವ ಸಂದರ್ಭದಲ್ಲಿ ಎಲ್ಲರಿಗೂ ಯಾವುದೇ ರೀತಿಯ ಜವಾಬ್ದಾರಿಗಳು ಇರುವುದಿಲ್ಲ ಅಂದರೆ ತಾನಾತು ತನ್ನ ಕಾಲೇಜ್ ಆಯ್ತು ಸ್ನೇಹಿತರ ಹಾಗೂ ಗುರುಗಳ ಜೊತೆಯಲ್ಲಿ ಕಾಲಹರಣ ಮಾಡುವುದು ಎಲೆಂದರಲ್ಲಿ ಸುತಡುವುದು ಹೇಗೆ ಹಲವಾರು ತಂಟೆ ತಕರಾರುಗಳ ಮದ್ಯೆ ತಮ್ಮ ಜೀವನವನ್ನು ಕಳೆಯುತ್ತ ಸಂತೋಷದಿಂದ ಇರುತ್ತೇವೆ.

ಪದವಿ ಮುಗಿದ ನಂತರ ಹೊರಗಿನ ಪ್ರಪಂಚ ಏನು ಎಂಬುದು ತಿಳಿಯುತ್ತದೆ ಏಕೆಂದರೆ ಈ ಪ್ರಪಂಚದಲ್ಲಿ ನಾವು ನಮ್ಮ ಬದುಕನ್ನು ಕಟ್ಟಿಕೊಳ್ಳಲು ಹೇಗೆ ಮುಂದೆ ಜೀವನ ಸಾಗಿಸುವುದು ಎಂಬ ಅರಿವು ಮೂಡಿಸುತ್ತದೆ . ಈ ರೀತಿಯ ಭಾವನೆ ಉಂಟಾಗಲು ಪ್ರಮುಖ ಕಾರಣವೇ ಇಂದಿನ ದಿನಗಳಲ್ಲಿ ಸಹಸ್ರರು ಜನರು ತಮ್ಮ ಜೀವನವನ್ನು ಕಟ್ಟಿಕೊಳ್ಳಲು ಮುಂದೆ ಉತ್ತಮವಾದ ಭವಿಷ್ಯ ರೂಪಿಸಿ ಕೊಳ್ಳಲು ಎಷ್ಟು ಪೈಪೋಟಿಯ ಹಾದಿಯನ್ನು ಹಿಡಿದಿದ್ದಾರೆ ಎಂಬುದು ಪ್ರಮುಖವಾಗಿದೆ. ಪ್ರತಿಯೊಬ್ಬರೂ ತಮ್ಮ ಗುರಿಯನ್ನು ತಲುಪಲು ಪ್ರಮುಖ ಕಾರಣವೇ ಗುರುಗಳು.

ಕಾಲೇಜು ಜೀವನದಲ್ಲಿ ಮುಖ್ಯವಾದ ಹಂತವೆಂದರೆ ಪದವಿ ಹಂತ ಓದುತ್ತಿರುವ ಸಂದರ್ಭದಲ್ಲಿ ಸಾಮಾನ್ಯವಾಗಿ ತರಗತಿಗಳ ನಡುವೆ ಬಿಡುವು ಮಾಡಿಕೊಂಡು ಸ್ನೇಹಿತರ ಜೊತೆಗೆ ಆಕಡೆ ಈಕಡೆ ಕಾಲೇಜಿನ ಸುತ್ತ ಮುತ್ತ ಉಪಹಾರ ಮಂದಿರದಲ್ಲಿ ತಿರಗಾಡುವುದು, ಅದರ ಜೊತೆಗೆ ಹರಟೆ, ಹೊಡೆಯುವುದು ಕಾಲಹರಣ ಮಾಡುವುದು ಎಲ್ಲಕಿಂತ ಮುಖ್ಯವಾಗಿ ಮೊಬೈಲ್ ನಲ್ಲಿ ಸೆಲ್ಫಿ ಪ್ರಿಯರಾಗಿ ಸ್ನೇಹಿತರ ಜೊತೆ ಟೈಮ್ ಪಾಸ್ ಮಾಡುವುದು ಹೀಗೆ ಹಲವಾರು ರೀತಿಯಲ್ಲಿ ನಮ್ಮ ಸಂತೋಷವನ್ನು ಅನುಭವಿಸುವುದು. ಈ ಸಂದರ್ಭದಲ್ಲಿ ಹುಡುಗ ಹುಡುಗಿಯರ ಸ್ನೇಹಿತರಾಗಿ ತಮ್ಮ ತಮ್ಮ ಭಾವನೆಗಳನ್ನು ಹಂಚಿಕೊಂಡು ಆತ್ಮೀಯತೆಯ ಸಂಬಂಧವನ್ನು ಕಲ್ಪಿಸಿಕೊಂಡು ಕಾಲೇಜಿ ಅಂತಿಮ ವರ್ಷದಲ್ಲಿ ಎಲ್ಲರನ್ನು ಬಿಟ್ಟು ಎಲ್ಲಾ ಸವಿ ನೆನಪುಗಳ ಸರಮಾಲೆಯನ್ನು ನೆನಪಿನಲ್ಲಿಟ್ಟುಕೊಂಡು ಹೊರಬರುತ್ತೆವೆ . ವಿದ್ಯಾರ್ಥಿ ಎಂಬ ಮರಕ್ಕೆ ಅಕ್ಷರ ಎಂಬ ನೀರು ಹಾಕಿದಾಗ ಅಜ್ಞಾನ ಎಂಬ ಜೀವನಕ್ಕೆ ಜ್ಞಾನ ಎಂಬ ಹೂ ಅರಳಿಸುವವರೆ ಗುರುಗಳು .

ಕಾಶಿಬಾಯಿ. ಸಿ. ಗುತ್ತೇದಾರ ಪಾಳಾ
ಪತ್ರಿಕೋದ್ಯಮ ವಿದ್ಯಾರ್ಥಿನಿ ಶರಣಬಸವ ವಿ. ವಿ ಕಲಬುರಗಿ
emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

9 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

18 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

18 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

18 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago