ಸ್ನೇಹ ಬಂದ ಜೀವನದ ನಿಜವಾದ ಆನಂದ ಎಂದು ಹೇಳಬಹುದು. ಏಕೆಂದರೆ ಸ್ನೇಹದ ನಂಟು ಬಿಡಿಸಲಾಗದ ಗಂಟು. ಈ ಮಾತು ಹೇಳತಿದೀನಿ ಅಂದ್ರೆ ನಾವುಗಳು ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಅಭ್ಯಾಸ ಎಂಬ ಹೆಸರಲ್ಲಿ ವಿದ್ಯಾ ಸಂಸ್ಥೆಗೆ ಬಂದು ಪರಿಚಯವು ಈ ಸ್ನೇಹಕ್ಕೆ ತಿರುಗಿತು.
ಈ ಸ್ನೇಹ ಎಂಬುದು ಚಿಗುರುವುದು ಸಾಮಾನ್ಯವಾಗಿ ಶಾಲೆ ಕಾಲೇಜು ಹಂತದಲ್ಲಿ ಜೀವನ ಪೂರ್ತಿ ಮುಂದುವರೆಯುವುದು. ಆ ಸ್ನೇಹ ಇದೀಗ ಆಳವಾಗಿ ಬೇರನ್ನೇ ಬಿಟ್ಟಿದೆ, ಕಾಲೇಜು ಜೀವನ ಎನ್ನುವುದು ಒಂತರ ಸ್ನೇಹದ ಕನಸುಗಳು, ಸಿಹಿ ಕಹಿ ನೆನಪುಗಳ ಸಂತೆ ಇದ್ದ ಹಾಗೆ ಈ ಹಲವಾರು ನೆನಪುಗಳು ಸಂತೆಯಲ್ಲಿ ಅದೆಷ್ಟೋ ಸ್ನೇಹಿತರನ್ನ ಸಂಪಾದಿಸುತ್ತೇವೆ ಆದ್ರೆ ಅದ್ರಲ್ಲಿ ಎಷ್ಟು ಜನ ಸ್ನೇಹಿತರು ನಮ್ಮವರಾಗಿರುವರೋ ಎಂದು ತಿಳಿವುದಿಲ್ಲ ತಾತ್ಕಾಲಿಕ ವಾಗಿವು ಇರಬಹುದು ನಿರಂತರವಾಗಿರಬೇಕೇಂದೆನಿಲ್ಲ.
ಅದೇ ರೀತಿ ಕಣ್ ಮುಂದೆ ಇದ್ದಾಗ ಎಲ್ಲವು ಚೆಂದ ಅನಿಸುತ್ತದೆ. ಆದ್ರೆ ಅದ್ರಲ್ಲಿ ಹಂತದ ಜೀವನ ಮುಗಿದಾಗ ಸ್ನೇಹತರಿಗೆ ಹೇಳುವ ಅಂತಿಮ ವಿದಾಯದ ನೋವನ್ನು ಮಾತ್ರ ಹೇಳುತಿರುವುದು. ಈ ಪ್ರಪಂಚದಲ್ಲಿ ಸ್ನೇಹಿತರಿಲ್ಲದವರು ಯಾರು ಇರುವುದಿಲ್ಲ ಏಕೆಂದರೆ ಆ ಜೀವನ ಕಲ್ಪನೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ, ಗೆಳೆತನ ಎಂಬುದು ಪರಿಪೂರ್ಣತೆಯಿಂದ ಕುಡಿದರೆ ನಮ್ಮ ಜೀವನವು ಕೂಡ ಪರಿಪೂರ್ಣತೆ ಇಂದ ಕೂಡಿರಲು ಸಾಧ್ಯ. ನಮ್ಮ ಸ್ನೇಹ ಹೇಗೆಂದರೆ “ಸ್ನೇಹ ಒಂದು ಸುಂದರ ಕವನ, ಬರೆದರೂ ಮುಗಿಯದ ಕತನಮರೆತರು ಮರೆಯಲಾಗದ ಸ್ಪಂದನ ಬಿಟ್ಟರು ಬಿಡಲಾಗದ ಗೆಳೆತನ ಅದುವೇ ಸ್ನೇಹದ ಬಂದ”. ಸ್ನೇಹದ ಮುಂದೆ ಯಾವ ವ್ಯಕ್ತಿ ಬೇಕಾದ್ರು ತನ್ನ ಮನಸ್ಸಿನ ಮಾತು ಮುಚ್ಚಿಡಲು ಆಗುವುದಿಲ್ಲ ಈ ಒಂದು ಪದ ಪವಿತ್ರವಾದ ಪದವಾಗಿದೆ.
ಕಾಲೇಜು ಜೀವನ ಒಂದು ರೀತಿಯ ಸಂಬಂಧ ದಲ್ಲಿರುವುದು ಅನಿವಾರ್ಯ ಎಂಬಂತೆ ಪರಿಗಣಿಸಲಾಗುವುದು. ಕಾಲೇಜಿನಲ್ಲಿ ಗುರುಗಳು ಹೇಳಿಕೊಡುವ ಪಾಠಗಳು, ಪರೀಕ್ಷೆಗೆ ಮಾತ್ರ ಸೀಮಿತವಾಗಿರುತ್ತವೆ ಹೊರತು ಜೀವನದಲ್ಲಿ ಅಳವಡಿಸಿಕೊಳ್ಳಳು ಆಗುವುದಿಲ್ಲ . ನಿಜವಾದ ಅನುಭವ ಸಿಗುವುದು ಕಾಲೇಜಿನ ಹೊರಗಡೆ ಅವರಿವರ ಜೊತೆಯಲ್ಲಿ ಬೇರೆತರೆ ಮಾತ್ರ ಆದರೂ ಕೂಡ ನಮಗೆ ಜೀವನ ಕಟ್ಟಿಕೊಳ್ಳಲು ಅಥವಾ ಸಂಘರ್ಷಸಿಸಲು ಕಲಿಸಿಕೊಡುವುದೇ ಈ ಕಾಲೇಜು. ಏಕೆಂದರೆ ಈ ಸಮಾಜದಲ್ಲಿ ಹೇಗೆ ವರ್ತಿಸಬೇಕು ಕಷ್ಟದ ಸಂದರ್ಭದಲ್ಲಿ ಯಾವ್ ರೀತಿ ಮುನ್ನುಗ್ಗಬೇಕು ಹೀಗೆ ಹಲವಾರು ವಿಷಯಗಳ ಬಗ್ಗೆ ಕಾಲೇಜಿನಲ್ಲಿ ಕಲಿಸುವಸ್ಟು ಬೇರೆಲ್ಲೂ ಕಲಿಯಲು ಸಾಧ್ಯವೇ ಇಲ್ಲ. ಗುರುಗಳು ಹೇಳಿಕೊಡುವ ರೀತಿ ನೀತಿಗಳ ಸ್ನೇಹಿತರಿಂದ ಪಡೆದುಕೊಳ್ಳುವ ಆತ್ಮೀಯತೆಯ ಸಂಬಂಧದ ಭಾವನೆ ಹೀಗೆ ಹಲವು ವಿಷಯಗಳಿಂದ ಎಲ್ಲವನ್ನು ಅನುಸರಿಸಿಕೊಂಡು ಹೋಗುವ ತಾಳ್ಮೆಯ ಗುಣವನ್ನು ಬೆಳೆಸಲು ಆಗುವುದು ಕಾಲೇಜಿನಿಂದ ಅಲ್ಲಿರುವ ಗುರುಗಳಿಂದ ಹಾಗೂ ಸ್ನೇಹಿತರಿಂದ ಮಾತ್ರ.
ನಿಜವಾದ ಸ್ನೇಹಿತರೆಂದರೆ ನಮ್ಮ ಕಷ್ಟದ ಸಮಯದಲ್ಲಿ ನನ್ ಇದೀನಿ ಅಂತ ಹೇಳೋರು ಮಾತ್ರ ನಿಜವಾದ ಸ್ನೇಹಿತರು. ಸ್ನೇಹಿತರು ಹೇಗೆ ಇರಬೇಕೆಂದರೆ ಸದಾ ಹಿತ ಯಶಸ್ಸನ್ನು ಬಯಸುವ ಗುಣ ಹೊಂದಿರಬೇಕು. ಆದ್ರೆ ಇಂದಿನ ದಿನಗಳಲ್ಲಿ ಹೆಚ್ಚಾಗಿ ಕಾಣುತ್ತಿರುವುದು ಬರಿ ದುಡ್ಡಿಗೆ ಬೆಲೆ ಕೊಡೊ ಸ್ನೇಹಿತರನ್ನು ಕಂಡುಬರುತ್ತದೆ, ಆದರೆ ಕೆಲವರು ಶ್ರೀಮಂತಿಕೆಗೆ ಬೆಲೆ ಕೊಟ್ಟರೆ ಇನ್ನೂ ಕೆಲವರು ಸ್ನೇಹದ ಬಗ್ಗೆ ಪರಿಪೂರ್ಣವಾಗಿ ಅರಿತುಕೊಂಡು ಸದಾ ಅವರ ಬೇಕು ಬೇಡಿಕೆಗಳನ್ನು ಕಷ್ಟ ದುಃಖ, ನೋವು ನಲಿವುಗಳಲ್ಲಿ ಸದಾ ಭಾಗಿಯಾಗುತ್ತಾರೆ.
ಎಲ್ಲದಕ್ಕಿಂತ ಮುಖ್ಯವಾಗಿ ಕಾಲೇಜಿಗೆ ಹೋಗುವುದು ಹಾಜರಾತಿಯ ಪರೀಕ್ಷೆಯ ಸಲುವಾಗಿ ದಿನಾಲೂ ಹೋಗದಿದ್ದರೆ ಈ ಪರೀಕ್ಷೆ ಎಂಬ ಯುದ್ಧಕ್ಕೆ ಕುಡಿಸುವುದಿಲ್ಲ ತರಗತಿಗಳು ನಡೆಸುವುದೆ ವಿದ್ಯಾದ ಸಲುವಾಗಿ . ಆದರೂ ಕೂಡ ಪದವಿ ಓದುವ ಸಂದರ್ಭದಲ್ಲಿ ಎಲ್ಲರಿಗೂ ಯಾವುದೇ ರೀತಿಯ ಜವಾಬ್ದಾರಿಗಳು ಇರುವುದಿಲ್ಲ ಅಂದರೆ ತಾನಾತು ತನ್ನ ಕಾಲೇಜ್ ಆಯ್ತು ಸ್ನೇಹಿತರ ಹಾಗೂ ಗುರುಗಳ ಜೊತೆಯಲ್ಲಿ ಕಾಲಹರಣ ಮಾಡುವುದು ಎಲೆಂದರಲ್ಲಿ ಸುತಡುವುದು ಹೇಗೆ ಹಲವಾರು ತಂಟೆ ತಕರಾರುಗಳ ಮದ್ಯೆ ತಮ್ಮ ಜೀವನವನ್ನು ಕಳೆಯುತ್ತ ಸಂತೋಷದಿಂದ ಇರುತ್ತೇವೆ.
ಪದವಿ ಮುಗಿದ ನಂತರ ಹೊರಗಿನ ಪ್ರಪಂಚ ಏನು ಎಂಬುದು ತಿಳಿಯುತ್ತದೆ ಏಕೆಂದರೆ ಈ ಪ್ರಪಂಚದಲ್ಲಿ ನಾವು ನಮ್ಮ ಬದುಕನ್ನು ಕಟ್ಟಿಕೊಳ್ಳಲು ಹೇಗೆ ಮುಂದೆ ಜೀವನ ಸಾಗಿಸುವುದು ಎಂಬ ಅರಿವು ಮೂಡಿಸುತ್ತದೆ . ಈ ರೀತಿಯ ಭಾವನೆ ಉಂಟಾಗಲು ಪ್ರಮುಖ ಕಾರಣವೇ ಇಂದಿನ ದಿನಗಳಲ್ಲಿ ಸಹಸ್ರರು ಜನರು ತಮ್ಮ ಜೀವನವನ್ನು ಕಟ್ಟಿಕೊಳ್ಳಲು ಮುಂದೆ ಉತ್ತಮವಾದ ಭವಿಷ್ಯ ರೂಪಿಸಿ ಕೊಳ್ಳಲು ಎಷ್ಟು ಪೈಪೋಟಿಯ ಹಾದಿಯನ್ನು ಹಿಡಿದಿದ್ದಾರೆ ಎಂಬುದು ಪ್ರಮುಖವಾಗಿದೆ. ಪ್ರತಿಯೊಬ್ಬರೂ ತಮ್ಮ ಗುರಿಯನ್ನು ತಲುಪಲು ಪ್ರಮುಖ ಕಾರಣವೇ ಗುರುಗಳು.
ಕಾಲೇಜು ಜೀವನದಲ್ಲಿ ಮುಖ್ಯವಾದ ಹಂತವೆಂದರೆ ಪದವಿ ಹಂತ ಓದುತ್ತಿರುವ ಸಂದರ್ಭದಲ್ಲಿ ಸಾಮಾನ್ಯವಾಗಿ ತರಗತಿಗಳ ನಡುವೆ ಬಿಡುವು ಮಾಡಿಕೊಂಡು ಸ್ನೇಹಿತರ ಜೊತೆಗೆ ಆಕಡೆ ಈಕಡೆ ಕಾಲೇಜಿನ ಸುತ್ತ ಮುತ್ತ ಉಪಹಾರ ಮಂದಿರದಲ್ಲಿ ತಿರಗಾಡುವುದು, ಅದರ ಜೊತೆಗೆ ಹರಟೆ, ಹೊಡೆಯುವುದು ಕಾಲಹರಣ ಮಾಡುವುದು ಎಲ್ಲಕಿಂತ ಮುಖ್ಯವಾಗಿ ಮೊಬೈಲ್ ನಲ್ಲಿ ಸೆಲ್ಫಿ ಪ್ರಿಯರಾಗಿ ಸ್ನೇಹಿತರ ಜೊತೆ ಟೈಮ್ ಪಾಸ್ ಮಾಡುವುದು ಹೀಗೆ ಹಲವಾರು ರೀತಿಯಲ್ಲಿ ನಮ್ಮ ಸಂತೋಷವನ್ನು ಅನುಭವಿಸುವುದು. ಈ ಸಂದರ್ಭದಲ್ಲಿ ಹುಡುಗ ಹುಡುಗಿಯರ ಸ್ನೇಹಿತರಾಗಿ ತಮ್ಮ ತಮ್ಮ ಭಾವನೆಗಳನ್ನು ಹಂಚಿಕೊಂಡು ಆತ್ಮೀಯತೆಯ ಸಂಬಂಧವನ್ನು ಕಲ್ಪಿಸಿಕೊಂಡು ಕಾಲೇಜಿ ಅಂತಿಮ ವರ್ಷದಲ್ಲಿ ಎಲ್ಲರನ್ನು ಬಿಟ್ಟು ಎಲ್ಲಾ ಸವಿ ನೆನಪುಗಳ ಸರಮಾಲೆಯನ್ನು ನೆನಪಿನಲ್ಲಿಟ್ಟುಕೊಂಡು ಹೊರಬರುತ್ತೆವೆ . ವಿದ್ಯಾರ್ಥಿ ಎಂಬ ಮರಕ್ಕೆ ಅಕ್ಷರ ಎಂಬ ನೀರು ಹಾಕಿದಾಗ ಅಜ್ಞಾನ ಎಂಬ ಜೀವನಕ್ಕೆ ಜ್ಞಾನ ಎಂಬ ಹೂ ಅರಳಿಸುವವರೆ ಗುರುಗಳು .