ಬಿಸಿ ಬಿಸಿ ಸುದ್ದಿ

ಪರಿಶಿಷ್ಟ ಜಾತಿಯಿಂದ ಲಂಬಾಣಿ, ಭೋವಿ, ವಡ್ಡರ್ ಸಮುದಾಯ ವಜಾ: ರಾಜ್ಯದಲ್ಲಿ ಜಾರಿಗೆ ಪಟ್ಟೇದಾರ್ ಆಗ್ರಹ

ಕಲಬುರಗಿ: ಕೇಂದ್ರ ಸರ್ಕಾರವು ಪರಿಶಿಷ್ಟ ಜಾತಿ ಪಟ್ಟಿಯಿಂದ ಲಂಬಾಣಿ, ಭೋವಿ, ವಡ್ಡರ್ ಸಮುದಾಯವನ್ನು ತೆಗೆದುಹಾಕುವ ನಿರ್ಧಾರ ಕೈಗೊಂಡಿದ್ದು ಸ್ವಾಗತಾರ್ಹ. ಇಂತಹ ಕ್ರಮವನ್ನು ರಾಜ್ಯ ಸರ್ಕಾರವು ಜಾರಿಗೆ ತರಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ದಲಿತ ಧುರೀಣ ಗುರುಶಾಂತ್ ಪಟ್ಟೇದಾರ್ ಅವರು ಇಲ್ಲಿ ಒತ್ತಾಯಿಸಿದರು.

ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಕೇಂದ್ರ ಸಚಿವರು ಸೂಕ್ತ ನಿರ್ಧಾರ ಕೈಗೊಂಡಿದ್ದು ಅಭಿನಂದನೀಯ ಎಂದು ಸಂತೋಷ ವ್ಯಕ್ತಪಡಿಸಿದರು.

ದೇಶದ ಯಾವುದೇ ರಾಜ್ಯಗಳಲ್ಲಿ ಲಂಬಾಣಿ ಸಮುದಾಯವು ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಇಲ್ಲ. ಆದಾಗ್ಯೂ, ಕರ್ನಾಟಕದಲ್ಲಿ ೧೯೭೬ರಲ್ಲಿ ದಿ. ದೇವರಾಜ್ ಅರಸು ಅವರು ಮುಖ್ಯಮಂತ್ರಿಗಳಾಗಿದ್ದಾಗ ಲಂಬಾಣಿ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಿದರು. ಇದರಿಂದ ಮಾದಿಗರು ಹಾಗೂ ಡೋರ, ಸಮಗಾರರು ಅನ್ಯಾಯಕ್ಕೆ ಒಳಗಾಗುವಂತಾಗಿತ್ತು ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಅಸ್ಪೃಶ್ಯರಿಗೆ ಸಿಗಬೇಕಾದ ಸೌಲಭ್ಯಗಳು ಸೇರಿದಂತೆ ನೀರಾವರಿ, ಶಿಕ್ಷಣ ಮುಂತಾದವುಗಳು ಲಂಬಾಣಿ, ಭೋವಿ, ವಡ್ಡರ್ ಸಮಾಜದವರ ಪಾಲಾಗಿತ್ತು. ಶೇಕಡಾ ೭೫ರಷ್ಟು ಸೌಲಭ್ಯಗಳು ಅವರಿಗೆ ದೊರಕುತ್ತಿದ್ದವು. ಇದರಿಂದಾಗಿಯೇ ರಾಜ್ಯದಲ್ಲಿ ಎ.ಜೆ. ಸದಾಶಿವ್ ಆಯೋಗದ ವರದಿ ಜಾರಿಗಾಗಿ ಕಳೆದ ೧೫ರಿಂದ ೨೦ ವರ್ಷಗಳಿಂದ ಹೋರಾಟ ನಡೆಯುತ್ತಿದೆ ಎಂದು ಅವರು ಸ್ಮರಿಸಿದರು.

ರಾಜ್ಯದಲ್ಲಿ ಸದಾಶಿವ್ ಆಯೋಗ ಜಾರಿಯಾಗದೇ ಇದ್ದರೂ ಪರವಾಗಿಲ್ಲ. ಕೇಂದ್ರ ಸರ್ಕಾರದ ನಿರ್ಧಾರದಂತೆ ಕರ್ನಾಟಕ ಸರ್ಕಾರವು ಲಂಬಾಣಿ, ಭೋವಿ, ವಡ್ಡರ್, ಕೊರವ, ಕೊರಚ ಜನಾಂಗದವರಿಗೆ ಹಿಂದುಳಿದ ವರ್ಗಕ್ಕೆ ಸೇರಿಸಬೇಕು ಎಂದು ಅವರು ಒತ್ತಾಯಿಸಿದರು.

ಲಂಬಾಣಿ. ಭೋವಿ, ವಡ್ಡರ್, ಕೊರವ, ಕೊರಚ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ತೆಗೆದುಹಾಕುವುದರ ವಿರುದ್ಧ ಈಗಾಗಲೇ ಬೀದರ್ ಜಿಲ್ಲೆಯಲ್ಲಿ ಆ ಸಮುದಾಯದವರು ಕೇಂದ್ರದ ವಿರುದ್ಧ ಪ್ರತಿಭಟಿಸಿದ್ದಾರೆ. ಅಲ್ಲದೇ ಕರ್ನಾಟಕದಲ್ಲಿ ಜಾರಿಗೆ ತರದಂತೆ ನೋಡಿಕೊಳ್ಳುತ್ತಿದ್ದಾರೆ. ಹಲವಾರು ಪತ್ರಿಕೆಗಳಲ್ಲಿ ಈ ಕುರಿತು ಪ್ರಕಟಗೊಂಡ ವರದಿಗಳನ್ನು ಸ್ವಾಗತಿಸುವುದಾಗಿ ಹೇಳಿದ ಅವರು, ಕೂಡಲೇ ಕೇಂದ್ರದ ಕ್ರಮವನ್ನು ರಾಜ್ಯ ಸರ್ಕಾರವು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಜೂನ್ ೨೧ರಂದು ಯಾದಗಿರಿ ಜಿಲ್ಲೆಯ ಚಂಡ್ರಕಿ ಹಾಗೂ ಅಫಜಲಪೂರ್ ತಾಲ್ಲೂಕಿನ ಹೇರೂರ್ (ಬಿ) ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದು, ಆ ಎರಡೂ ಗ್ರಾಮಗಳಿಗೆ ಭೇಟಿ ನೀಡಿ ಮುಖ್ಯಮಂತ್ರಿಗಳಿಗೆ  ಕೇಂದ್ರದ ನಿರ್ಧಾರ ಜಾರಿಗೆ ತರಲು ಕೋರುವುದಾಗಿ ಪಟ್ಟೇದಾರ್ ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ದಿಗಂಬರ್ ಕಾಳೆ, ಶಿವಕುಮಾರ್ ಮದ್ರಿ, ಸುಭಾಷ್ ತಾರಫೈಲ್ ವಕೀಲರು, ರವೀಂದ್ರ ವರ್ಮಾ ಅವರು ಉಪಸ್ಥಿತರಿದ್ದರು.

emedialine

View Comments

  • Alla niv en akondidira doddadagi sabheyalli kutkond matadadre saladu pratiyondu lambani tandagalige hogi avara jeenana shaili avaru jeevana nadesuvudakke ellelli gule hogidare annodu modlu samikshe madi natara nirdharana kaigolli en onde samudayana kannige kanoda nimge yaro obru chanagidre ....idi samudayane pragati sadiside annodu yava nyaya pradhaan mukhya mantrigalu idara bagge hege grama vastavya madidaro hage lambani tandagaligu hogi avara samassenu alisi nantara yaude nirdhara tagoli adeno nayi bogaldre devaloka halagalla hage madya varti gala matina bagge tale kedisi kollabaradu

  • ಇಂತಹ ಹೇಳಿಕೆ ಕೊಡಲು ನಾಚಿಕೆಯಾಗಬೇಕು. ಯಾಕಂದ್ರೆ ಇಂದು ಪರಿಶಿಷ್ಟ ಜಾರಿಯಲ್ಲಿರುವ ಎಲ್ಲ ಸಮುದಾಯಗಳು ಸಹೋದರತೆಯಿಂದ ಬಾಳುತಿವೆ, ಆದರೆ ನಮ್ಮಲಿಯೆ ಇಂತಹ ಅಸಮಾಧಾನ ಉಂಟಾಗುವುದು ಉಳ್ಳೆಯದಲ್ಲ. ಉಳ್ಳವರು ನಮ್ಮಲಿ ಜಗಳ ತಂದು SC ಎಂಬ ಮೀಸಲಾತಿಯನ್ನು ತಗಿಬೇಕು ಎಂಬ ಷಡ್ಯಂತ್ರ ರೂಪಿಸಿದೆ. ಅವರ ಮಾತಿಗೆ ನಂಬಬಾರದು . ಇವತ್ತು ಏನು ಮದಿಗರಿಗೆ ಅನ್ಯಾಯ ಆಗುತ್ತಿದೆ ಎಂದು ಕೂಗು ಬರುತಿದೆ ಅದು ಒಂದು ರಾಜಕೀಯ ಡಂಬರಾಟ ಅಷ್ಟೆ . SC ಸಮುದಾಯಗಳು ಶೈಷಣಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ, ಸಮಾಜದ ವಾಹಿನಿಗೆ ಬರುವಂತ ಕಾರ್ಯಗಳನ್ನ ಮಾಡಿ . ಎಲ್ಲರೂ ಮೀಸಲಾತಿಯನ್ನು ಪಡೆದುಕೊಳ್ಳಬೇಕು ಮೀಸಲಾತಿ ನಮ್ಮ ಹಕ್ಕು.

  • Le huchhhaaa..... yavanu ninu duddu bekaaa ela jenarige bere dari tusake madtha ediya nim anthavaru endha hal agudu nam deshaaa nim anthavarige nam anthvaru heng boys serri sayasbeku.. Tuuu bekuff makal lambani ets.. Jenaru sumne ertara nim antavarige. Galige altara much kudu eruu... Agee agide....

  • Bhovi mathe vaddaru everadu onde but ennu lambani bhovi galu yaaru arthikavagi yaru sabalaragilla...edondu pithuri ashte

  • Plz first research made. Lambani samudayada ellaru vandu hottina kuligagi gule hugova ururu aledaduva badavaragiddare. Intavarannu SC misalituyinda tappisivudu Maha anyaya

  • ಲಂಬಾಣಿ, ಭೋವಿ ಸಮುದಾಯದವರು ಪರಿಶಿಷ್ಟ ಜಾತಿಯಲ್ಲಿ ಇದ್ದು ಸರ್ಕಾರದ ಸೌಲಭ್ಯಗಳನ್ನು ಎಷ್ಟರ ಮಟ್ಟಿಗೆ ಪಡೆದುಕೊಂಡಿದ್ದಾರೆ ಎಂಬುದನ್ನು ಸಮೀಕ್ಷೆ ಮಾಡಿ ಅದುಬಿಟ್ಟು ಅವರನ್ನು ಒಬಿಸಿ ಗೆ ಸೇರಿಸಿ ಅನ್ನೋಕೆ ನೀವು ಯಾರು ಸರ್ಕಾರ ಖಾತೆಗಳಲ್ಲಿ ಬಹಳ ಜನ ಮಾದಿಗರು ಇದ್ದಾರೆ ಲಂಬಾಣಿ ವಡ್ಡರ ಸಮುದಾಯದ ಜನರನ್ನು ತೋರಿಸಿ ಇಲ್ಲ ನೀವು ಕೂಡ ಒಬಿಸಿ ಗೆ ಬನ್ನಿ ನೋಡೋಣ

  • Good day! Do you know if they make any plugins to assist
    with SEO? I'm trying to get my blog to rank for some targeted keywords
    but I'm not seeing very good gains. If you know of any please share.
    Thanks!

  • It's perfect time to make some plans for the future
    and it is time to be happy. I have read this post and if I could I want to suggest you few interesting things or tips.
    Maybe you can write next articles referring to
    this article. I desire to read more things about it!

  • Hi there colleagues, its great article regarding educationand completely explained,
    keep it up all the time.

Recent Posts

ಮೇ 13 ರಿಂದ 27 ರ ವರೆಗೆ ಮಕ್ಕಳಿಗೆ ಜಂತುಹುಳ ನಿವಾರಣೆ ದಿನ

ಕಲಬುರಗಿ: ಜಿಲ್ಲಾದ್ಯಂತ ನೆಡೆಯುತ್ತಿರುವ ರಾಷ್ಟ್ರೀಯ ಜಂತುಹುಳ ನಿವಾರಣೆ ದಿನದ ಅಂಗವಾಗಿ ಎರಡನೇ ಹಂತದಲ್ಲಿ ಶಾಲಾಪೂರ್ವ ಮಕ್ಕಳು ಮನೆಯಲ್ಲಿ ಇದ್ದಂತ ನಗರ…

3 hours ago

ಕಲಬುರಗಿ ಕಿವುಡ ಮಕ್ಕಳ ಸರ್ಕಾರಿ ಶಾಲೆಯಲ್ಲಿ ಪ್ರವೇಶ ಪಡೆಯಲು ಅರ್ಜಿ ಆಹ್ವಾನ

ಕಲಬುರಗಿ; ಕಲಬುರಗಿ ಆಳಂದ ಕಾಲೋನಿಯಲ್ಲಿನ ಶ್ರವಣದೋಷವುಳ್ಳ (ಕಿವುಡ) ಮಕ್ಕಳ ಸರ್ಕಾರಿ ಶಾಲೆಯಲ್ಲಿ 2024-25ನೇ ಶೈಕ್ಷಣಿಕ ಸಾಲಿಗೆ 2024ರ ಮೇ 29…

3 hours ago

ಮೊರಾಜಿ ದೇಸಾಯಿ ವಿಜ್ಞಾನ ಪದವಿ ಪೂರ್ವ ವಸತಿ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಅರ್ಜಿ ಆಹ್ವಾನ

ಕಲಬುರಗಿ; ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಚಿತ್ತಾಪುರ ತಾಲೂಕಿನ ಗುಂಡಗುರ್ತಿ (ಎಸ್.ಸಿ.-927) ಮೊರಾರ್ಜಿ ದೇಸಾಯಿ ವಿಜ್ಞಾನ ಪದವಿ ಪೂರ್ವ ವಸತಿ…

3 hours ago

ಕಲಬುರಗಿ ಅಂಧ ಬಾಲಕರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಪ್ರವೇಶ ಪಡೆಯಲು ಅರ್ಜಿ ಆಹ್ವಾನ

ಕಲಬುರಗಿ; ಪ್ರಸಕ್ತ 2024-25ನೇ ಸಾಲಿಗೆ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಡಿಯಲ್ಲಿ ನಡೆಸಲಾಗುತ್ತಿರುವ ನಗರದ ಚಂದ್ರಶೇಖರ ಪಾಟೀಲ…

3 hours ago

ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಚುನಾವಣೆ: 8 ಅಭ್ಯರ್ಥಿಗಳಿಂದ 10 ನಾಮಪತ್ರ ಸಲ್ಲಿಕೆ

ಕಲಬುರಗಿ; ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರಕ್ಕೆ 2024ರ ಜೂನ್ 3ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಮೂರನೇ ದಿನವಾದ ಮಂಗಳವಾರ…

3 hours ago

ಸರ್ಕಾರಿ ಕಚೇರಿಯಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಡಿ.ಸಿ. ಸೂಚನೆ

ಕಲಬುರಗಿ;  ಸರ್ಕಾರಿ ಕಚೇರಿಗೆ ದೈನಂದಿನ ಕೆಲಸಕ್ಕೆ ಬರುವ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ವಿಶೇಷಚೇತನರಿಗೆ ಅನುಕೂಲವಾಗುವಂತೆ ರ‌್ಯಾಂಪ್…

3 hours ago