ಪರಿಶಿಷ್ಟ ಜಾತಿಯಿಂದ ಲಂಬಾಣಿ, ಭೋವಿ, ವಡ್ಡರ್ ಸಮುದಾಯ ವಜಾ: ರಾಜ್ಯದಲ್ಲಿ ಜಾರಿಗೆ ಪಟ್ಟೇದಾರ್ ಆಗ್ರಹ

15
24766

ಕಲಬುರಗಿ: ಕೇಂದ್ರ ಸರ್ಕಾರವು ಪರಿಶಿಷ್ಟ ಜಾತಿ ಪಟ್ಟಿಯಿಂದ ಲಂಬಾಣಿ, ಭೋವಿ, ವಡ್ಡರ್ ಸಮುದಾಯವನ್ನು ತೆಗೆದುಹಾಕುವ ನಿರ್ಧಾರ ಕೈಗೊಂಡಿದ್ದು ಸ್ವಾಗತಾರ್ಹ. ಇಂತಹ ಕ್ರಮವನ್ನು ರಾಜ್ಯ ಸರ್ಕಾರವು ಜಾರಿಗೆ ತರಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ದಲಿತ ಧುರೀಣ ಗುರುಶಾಂತ್ ಪಟ್ಟೇದಾರ್ ಅವರು ಇಲ್ಲಿ ಒತ್ತಾಯಿಸಿದರು.

ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಕೇಂದ್ರ ಸಚಿವರು ಸೂಕ್ತ ನಿರ್ಧಾರ ಕೈಗೊಂಡಿದ್ದು ಅಭಿನಂದನೀಯ ಎಂದು ಸಂತೋಷ ವ್ಯಕ್ತಪಡಿಸಿದರು.

Contact Your\'s Advertisement; 9902492681

ದೇಶದ ಯಾವುದೇ ರಾಜ್ಯಗಳಲ್ಲಿ ಲಂಬಾಣಿ ಸಮುದಾಯವು ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಇಲ್ಲ. ಆದಾಗ್ಯೂ, ಕರ್ನಾಟಕದಲ್ಲಿ ೧೯೭೬ರಲ್ಲಿ ದಿ. ದೇವರಾಜ್ ಅರಸು ಅವರು ಮುಖ್ಯಮಂತ್ರಿಗಳಾಗಿದ್ದಾಗ ಲಂಬಾಣಿ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಿದರು. ಇದರಿಂದ ಮಾದಿಗರು ಹಾಗೂ ಡೋರ, ಸಮಗಾರರು ಅನ್ಯಾಯಕ್ಕೆ ಒಳಗಾಗುವಂತಾಗಿತ್ತು ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಅಸ್ಪೃಶ್ಯರಿಗೆ ಸಿಗಬೇಕಾದ ಸೌಲಭ್ಯಗಳು ಸೇರಿದಂತೆ ನೀರಾವರಿ, ಶಿಕ್ಷಣ ಮುಂತಾದವುಗಳು ಲಂಬಾಣಿ, ಭೋವಿ, ವಡ್ಡರ್ ಸಮಾಜದವರ ಪಾಲಾಗಿತ್ತು. ಶೇಕಡಾ ೭೫ರಷ್ಟು ಸೌಲಭ್ಯಗಳು ಅವರಿಗೆ ದೊರಕುತ್ತಿದ್ದವು. ಇದರಿಂದಾಗಿಯೇ ರಾಜ್ಯದಲ್ಲಿ ಎ.ಜೆ. ಸದಾಶಿವ್ ಆಯೋಗದ ವರದಿ ಜಾರಿಗಾಗಿ ಕಳೆದ ೧೫ರಿಂದ ೨೦ ವರ್ಷಗಳಿಂದ ಹೋರಾಟ ನಡೆಯುತ್ತಿದೆ ಎಂದು ಅವರು ಸ್ಮರಿಸಿದರು.

ರಾಜ್ಯದಲ್ಲಿ ಸದಾಶಿವ್ ಆಯೋಗ ಜಾರಿಯಾಗದೇ ಇದ್ದರೂ ಪರವಾಗಿಲ್ಲ. ಕೇಂದ್ರ ಸರ್ಕಾರದ ನಿರ್ಧಾರದಂತೆ ಕರ್ನಾಟಕ ಸರ್ಕಾರವು ಲಂಬಾಣಿ, ಭೋವಿ, ವಡ್ಡರ್, ಕೊರವ, ಕೊರಚ ಜನಾಂಗದವರಿಗೆ ಹಿಂದುಳಿದ ವರ್ಗಕ್ಕೆ ಸೇರಿಸಬೇಕು ಎಂದು ಅವರು ಒತ್ತಾಯಿಸಿದರು.

ಲಂಬಾಣಿ. ಭೋವಿ, ವಡ್ಡರ್, ಕೊರವ, ಕೊರಚ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ತೆಗೆದುಹಾಕುವುದರ ವಿರುದ್ಧ ಈಗಾಗಲೇ ಬೀದರ್ ಜಿಲ್ಲೆಯಲ್ಲಿ ಆ ಸಮುದಾಯದವರು ಕೇಂದ್ರದ ವಿರುದ್ಧ ಪ್ರತಿಭಟಿಸಿದ್ದಾರೆ. ಅಲ್ಲದೇ ಕರ್ನಾಟಕದಲ್ಲಿ ಜಾರಿಗೆ ತರದಂತೆ ನೋಡಿಕೊಳ್ಳುತ್ತಿದ್ದಾರೆ. ಹಲವಾರು ಪತ್ರಿಕೆಗಳಲ್ಲಿ ಈ ಕುರಿತು ಪ್ರಕಟಗೊಂಡ ವರದಿಗಳನ್ನು ಸ್ವಾಗತಿಸುವುದಾಗಿ ಹೇಳಿದ ಅವರು, ಕೂಡಲೇ ಕೇಂದ್ರದ ಕ್ರಮವನ್ನು ರಾಜ್ಯ ಸರ್ಕಾರವು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಜೂನ್ ೨೧ರಂದು ಯಾದಗಿರಿ ಜಿಲ್ಲೆಯ ಚಂಡ್ರಕಿ ಹಾಗೂ ಅಫಜಲಪೂರ್ ತಾಲ್ಲೂಕಿನ ಹೇರೂರ್ (ಬಿ) ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದು, ಆ ಎರಡೂ ಗ್ರಾಮಗಳಿಗೆ ಭೇಟಿ ನೀಡಿ ಮುಖ್ಯಮಂತ್ರಿಗಳಿಗೆ  ಕೇಂದ್ರದ ನಿರ್ಧಾರ ಜಾರಿಗೆ ತರಲು ಕೋರುವುದಾಗಿ ಪಟ್ಟೇದಾರ್ ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ದಿಗಂಬರ್ ಕಾಳೆ, ಶಿವಕುಮಾರ್ ಮದ್ರಿ, ಸುಭಾಷ್ ತಾರಫೈಲ್ ವಕೀಲರು, ರವೀಂದ್ರ ವರ್ಮಾ ಅವರು ಉಪಸ್ಥಿತರಿದ್ದರು.

15 ಕಾಮೆಂಟ್ಗಳನ್ನು

  1. Alla niv en akondidira doddadagi sabheyalli kutkond matadadre saladu pratiyondu lambani tandagalige hogi avara jeenana shaili avaru jeevana nadesuvudakke ellelli gule hogidare annodu modlu samikshe madi natara nirdharana kaigolli en onde samudayana kannige kanoda nimge yaro obru chanagidre ….idi samudayane pragati sadiside annodu yava nyaya pradhaan mukhya mantrigalu idara bagge hege grama vastavya madidaro hage lambani tandagaligu hogi avara samassenu alisi nantara yaude nirdhara tagoli adeno nayi bogaldre devaloka halagalla hage madya varti gala matina bagge tale kedisi kollabaradu

  2. ಇಂತಹ ಹೇಳಿಕೆ ಕೊಡಲು ನಾಚಿಕೆಯಾಗಬೇಕು. ಯಾಕಂದ್ರೆ ಇಂದು ಪರಿಶಿಷ್ಟ ಜಾರಿಯಲ್ಲಿರುವ ಎಲ್ಲ ಸಮುದಾಯಗಳು ಸಹೋದರತೆಯಿಂದ ಬಾಳುತಿವೆ, ಆದರೆ ನಮ್ಮಲಿಯೆ ಇಂತಹ ಅಸಮಾಧಾನ ಉಂಟಾಗುವುದು ಉಳ್ಳೆಯದಲ್ಲ. ಉಳ್ಳವರು ನಮ್ಮಲಿ ಜಗಳ ತಂದು SC ಎಂಬ ಮೀಸಲಾತಿಯನ್ನು ತಗಿಬೇಕು ಎಂಬ ಷಡ್ಯಂತ್ರ ರೂಪಿಸಿದೆ. ಅವರ ಮಾತಿಗೆ ನಂಬಬಾರದು . ಇವತ್ತು ಏನು ಮದಿಗರಿಗೆ ಅನ್ಯಾಯ ಆಗುತ್ತಿದೆ ಎಂದು ಕೂಗು ಬರುತಿದೆ ಅದು ಒಂದು ರಾಜಕೀಯ ಡಂಬರಾಟ ಅಷ್ಟೆ . SC ಸಮುದಾಯಗಳು ಶೈಷಣಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ, ಸಮಾಜದ ವಾಹಿನಿಗೆ ಬರುವಂತ ಕಾರ್ಯಗಳನ್ನ ಮಾಡಿ . ಎಲ್ಲರೂ ಮೀಸಲಾತಿಯನ್ನು ಪಡೆದುಕೊಳ್ಳಬೇಕು ಮೀಸಲಾತಿ ನಮ್ಮ ಹಕ್ಕು.

  3. Le huchhhaaa….. yavanu ninu duddu bekaaa ela jenarige bere dari tusake madtha ediya nim anthavaru endha hal agudu nam deshaaa nim anthavarige nam anthvaru heng boys serri sayasbeku.. Tuuu bekuff makal lambani ets.. Jenaru sumne ertara nim antavarige. Galige altara much kudu eruu… Agee agide….

  4. ಲಂಬಾಣಿ, ಭೋವಿ ಸಮುದಾಯದವರು ಪರಿಶಿಷ್ಟ ಜಾತಿಯಲ್ಲಿ ಇದ್ದು ಸರ್ಕಾರದ ಸೌಲಭ್ಯಗಳನ್ನು ಎಷ್ಟರ ಮಟ್ಟಿಗೆ ಪಡೆದುಕೊಂಡಿದ್ದಾರೆ ಎಂಬುದನ್ನು ಸಮೀಕ್ಷೆ ಮಾಡಿ ಅದುಬಿಟ್ಟು ಅವರನ್ನು ಒಬಿಸಿ ಗೆ ಸೇರಿಸಿ ಅನ್ನೋಕೆ ನೀವು ಯಾರು ಸರ್ಕಾರ ಖಾತೆಗಳಲ್ಲಿ ಬಹಳ ಜನ ಮಾದಿಗರು ಇದ್ದಾರೆ ಲಂಬಾಣಿ ವಡ್ಡರ ಸಮುದಾಯದ ಜನರನ್ನು ತೋರಿಸಿ ಇಲ್ಲ ನೀವು ಕೂಡ ಒಬಿಸಿ ಗೆ ಬನ್ನಿ ನೋಡೋಣ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here