ಬಿಸಿ ಬಿಸಿ ಸುದ್ದಿ

ಬೆಂಗಳೂರು: ಹುತಾತ್ಮ ದಿನ ಉಪವಾಸ ಸತ್ಯಾಗ್ರಹ: ರೈತರಿಗೆ ವ್ಯಾಪಕ ಬೆಂಬಲ

ಬೆಂಗಳೂರು : ಅಖಿಲ ಭಾರತ ಸಂಯುಕ್ತ ಕಿಸಾನ್ ಮೋರ್ಚಾದ ಕರೆಯ ಮೇರೆಗೆ ಬೆಂಗಳೂರು ನಗರದಲ್ಲಿ ಇಂದು ಮಹಾತ್ಮಾ ಗಾಂಧಿಯವರ ಹುತಾತ್ಮ ದಿನದಂದು “ಸಂಯುಕ್ತ ಹೋರಾಟ”ದ ಅಡಿಯಲ್ಲಿ ‘ಸಂಘರ್ಷ ಸಂಕಲ್ಪ ದಿನ’ದ ಅಂಗವಾಗಿ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ ಉಪವಾಸ ಸತ್ಯಾಗ್ರಹ ಆಚರಿಸಲಾಯಿತು.

ಸುಮಾರು 200 ಕ್ಕೂ ಹೆಚ್ಚು ಜನರು ಸೇರಿದ್ದ ಈ ಸತ್ಯಾಗ್ರಹದಲ್ಲಿ ಕೆ.ಆರ್.ಆರ್.ಎಸ್.ನ ಬಡಗಲಪುರ ನಾಗೇಂದ್ರ, ಕೋಡಿಹಳ್ಳಿ ಚಂದ್ರಶೇಖರ್, ವೀರಸಂಗಯ್ಯ, ಪೂಣಚ್ಚ; ಕೆ.ಪಿ.ಆರ್.ಎಸ್. ನ ಎನ್.ವೆಂಕಟಾಚಲಯ್ಯ, ಚಂದ್ರು ತೇಜಸ್ವಿ, ಯಶವಂತ ಮದ್ದೂರು; ಕ.ರಾ.ಕೃ.ಕೂ.ಸಂಘದ ನಿತ್ಯಾನಂದಸ್ವಾಮಿ, ಡಿ.ಎಸ್.ಎಸ್.(ಅಂಬೇಡ್ಕರ್ ವಾದಿ) ಮಾವಳ್ಳಿ ಶಂಕರ್, ಸಿ.ಐ.ಟಿ.ಯು.ನ ಮೀನಾಕ್ಷಿ ಸುಂದರಂ, ಕೆ.ಎನ್.ಉಮೇಶ್, ಕೆ.ಪ್ರಕಾಶ್, ಬಿ.ಎನ್.ಮಂಜುನಾಥ್; ಜನವಾದಿ ಮಹಿಳಾ ಸಂಘಟನೆಯಿಂದ ಗೌರಮ್ಮ, ಕೆ.ಎಸ್.ವಿಮಲಾ, ಕೆ.ಎಸ್.ಲಕ್ಷ್ಮಿ, ಲಲಿತಾ ಶೆಣೈ;  ಡಿ.ಹೆಚ್.ಎಸ್.ನ ಬಿ.ರಾಜಶೇಖರ್ ಮೂರ್ತಿ, ಬಿಜಿವಿಎಸ್ ನ ಆರ್.ರಾಮಕೃಷ್ಣ, ಸಮಕಾಲೀನರು ಬಿ.ಆರ್.ಮಂಜುನಾಥ್, ಸಮುದಾಯ ಕರ್ನಾಟಕದ ಟಿ.ಸುರೇಂದ್ರ ರಾವ್, ಎಂ.ಜಿ.ವೆಂಕಟೇಶ್; ಇಪ್ಟಾದ ಶಶಿಕಾಂತ ಯಡಹಳ್ಳಿ, ಚಿಂತಕರಾದ ಡಾ.ವಿಜಯಾ, ಜಿ.ಎನ್.ನಾಗರಾಜ್, ಸುಕನ್ಯಾ ಮಾರುತಿ, ಜೆ.ಲೋಕೇಶ್, ಸಿರಿಗೆರೆ ನಾಗರಾಜ್, ಟಿ.ಆರ್.ಚಂದ್ರಶೇಖರ್, ಎಸ್.ಆರ್.ಹಿರೇಮಠ್; ಕರ್ನಾಟಕ ಜನಶಕ್ತಿಯ ಹೆಚ್.ವಿ.ವಾಸು, ಎ.ಐ.ಡಿ.ಎಸ್.ಒ.ದ ರಾಜಶೇಖರ್, ಎ.ಐ.ಎಂ.ಎಸ್.ಎಸ್.ನ ಸೀಮಾ, ಎಸ್.ಎಫ್.ಐ.ನ ಶಿವಕುಮಾರ ಮ್ಯಾಗಳಮನಿ, ಭೀಮನ ಗೌಡ, ದಿಲೀಪ ಶೆಟ್ಟಿ, ಕೆವಿಸ್ ಸಂಘಟನೆಯ ಸರೋವರ ಬೆಂಕಿಕೆರೆ, ಎಯ್.ವೈ.ಎಫ್.ನ ಹರೀಶ್ ಬಾಲು ಸೇರಿ ಮುಂತಾದವರು ಪಾಲ್ಗೊಂಡಿದ್ದರು.

ಮಾಜಿ ಮುಖ್ಯಮಂತ್ರಿಗಳು ಹಾಲಿ ವಿರೋಧ ಪಕ್ಷದ ನಾಯಕರಾಗಿರುವ ಶ್ರೀಯುತ ಸಿದ್ದರಾಮಯ್ಯನವರು ಭೇಟಿ ನೀಡಿ ತಮ್ಮ ಶುಭಾಶಯಕ ಕೋರಿ ಮಾತನಾಡಿದರು.

ಯಾವುದೇ ಕಾರಣಕ್ಕೂ ಆ ಕೃಷಿ ಕಾಯಿದೆಗಳನ್ನು ಹಿಂತೆಗೆದುಕೊಳ್ಳದೇ ಹೋರಾಟವನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಎಲ್ಲರೂ ಒಕ್ಕೊರಲಿನಿಂದ ಘೋಷಿಸಿದರು.

ಈ ಹೋರಾಟವನ್ನು ರಾಜ್ಯದ ಹಳ್ಳಿಗಳಿಗೂ ವಿಸ್ತರಿಸಬೇಕು ಮತ್ತು ಮುಂದಿನ ಹೋರಾಟಗಳಲ್ಲಿ ಕಾರ್ಮಿಕ ವರ್ಗದವರನ್ನೂ ಒಳಗೊಳ್ಳಬೇಕೆಂದು ಬಹುತೇಕರು ಒತ್ತಾಯಿಸಿದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

19 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago