ಬಿಸಿ ಬಿಸಿ ಸುದ್ದಿ

ದೇಶದ ಮೊದಲ ಉಗ್ರವಾದಿ ನಾಥೋರಾಮ್ ಗೋಡ್ಸೆ: ಸಂಸದ ಅಸಾದೋದ್ದಿನ್ ಓವೈಸಿ

ಕಲಬುರಗಿ: ಸ್ವತಂತ್ರ ಭಾರತದ ಮೊದಲ ಉಗ್ರವಾದಿ ನಾಥೋರಾಮ್ ಗೋಡ್ಸೆಯಾಗಿದ್ದು, ಇಂದು ದೆಹಲಿಯಲ್ಲಿ ರೈತರಿಗೆ ಕೊಲ್ಲಲು ಸಂಚು ಗೋಡ್ಸೆ ಅನುಯಾಯಿಗಳು ಮಾಡುತ್ತಿದ್ದಾರೆ. ಈ ದೇಶ ಗೋಡ್ಸೆ ಮಾರ್ಗದಲ್ಲಿ ನಡೆಯುತ್ತಿದೆ ಎಂದು ಎಐಎಮ್ಐಎಮ್ ಪಕ್ಷದ ಸಂಸ್ಥಾಪಕ ಅಧ್ಯಕ್ಷ, ಸಂಸದ ಅಸಾದೊದ್ದೀನ್ ಓವೈಸಿ ಹೇಳಿದರು.

ಇಂದು ನಗರದ ಮೋಘಲ್  ಗಾರ್ಡನ್ ಫಂಕ್ಷನ್ ಹಾಲ್ ನಡೆದ ಜನಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ರಾಮನ ಹೆಸರಲ್ಲಿ ದೇಶದಲ್ಲಿ ದ್ವೇಷ ಹರಡಿಸುವ ಕೆಲಸ ನಡೆಯುತ್ತಿದೆ ಎಂದರು.

ಇಷ್ಟು ದಿನ ನಮ್ಮಗೆ ಬಿಜೆಪಿಯ ಬಿ ಟಿಮ್ ಎಂದು ಕಾಂಗ್ರೆಸ್ ನವರು ಹೇಳುತ್ತಿದ್ದರು, ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಶಾಸಕರು ಪಕ್ಷ ಬಿಟ್ಟು ಹೊಗಿದ್ದಾರಲ್ಲ ಅವರೆಲ್ಲರೂ ನನ್ನಗೆ ಕೇಳ್ಬಿಟ್ಟು ಹೊಗಿದಾರಾ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವ್ಯಂಗ್ಯ ವ್ಯಕ್ತಪಡಿಸಿ, ಕುಮಾರಸ್ವಾಮಿ ಸಹ ಬಿಜೆಪಿ ಜೊತೆ ಲವಿಡವಿ ಶುರು ಆಗಿದೆ. ರಾಜಕೀಯ ಲಾಭಕ್ಕಾಗಿ ಮಾರಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

ನಮ್ಮ ಪಕ್ಷದಲ್ಲಿ ಅಧಿಕಾರಕ್ಕೆ ಆಸೆ ಪಡೆಯುವರು ಬೇಕಾಗಿಲ್ಲ, ಮುಸ್ಲಿಂ ಹಾಗೂ ದಲಿತರಿಗಾಗಿ ಹೋರಾಡುವ ಬೇಬಾಕ್ ನಾಯಕರು ಬೇಕು. ಸಮುದಾಯದ ಧ್ವನಿಯಾಗಿ ಅವರ ಸಮಸ್ಯೆಗಳಿಗೆ ಸ್ಪಂದಿಸುವವರು ಬೇಕು. ಬರುವ ಚುನಾವಣೆಯಲ್ಲಿ ಬೀದರ್, ಕಲಬುರಗಿಯಲ್ಲಿ ಪಕ್ಷದಿಂದ ಅಭ್ಯರ್ಥಿ ಸ್ಪರ್ಧೆಗೆ ಇಳಿಸಲಾಗುವುದು ಅದಕ್ಕಾಗಿ ಇಂದಿನಿಂದ ಪಕ್ಷವನ್ನು ಗಟ್ಟಿಗೊಳಿಸುವ ಕೆಲಸ ಎಲ್ಲರೂ ಮಾಡಬೇಕೆಂದು ಕರೆ ನೀಡಿದರು.

ದೇಶದಲ್ಲಿ ಕಾಂಗ್ರೆಸ್ ಪಕ್ಷ ಸಂಪೂರ್ಣ ಕುಸಿದ್ದು, ಮೂಲೆ ಗುಂಪಾಗಿದೆ, ಅವರಿಂದ ಎನು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಓವೈಸಿನ್ನು ಮಾತ್ರ ವಿರೋಧಿಯಾಗಿ ನೋಡುತ್ತಿದ್ದಾರೆ. ಅವರ ಈ ಎಡಬಿಡಂಗಿ ಹೇಳಿಕೆಗೆ ನಾವು ಬೆಲೆಕೊಡಲ್ಲ. ಪಕ್ಷಕ್ಕೆ ಬಿಹಾರದಲ್ಲಿ ಸಿಕ್ಕಿರುವ ಬೆಂಬಲ ಕರ್ನಾಟಕದಲ್ಲಿ ಸಿಗಲಿದೆ ಎಂದರು.

ದಿವಂಗತ ಖಮರುಲ್ ಇಸ್ಲಾಂ ಅವರ ಕಲಬುರಗಿ ಜನರಿಗೆ ಮಾಡಿರುವ ಸೇವೆ ಅವಿಸ್ಮರಣಿಯ, ಮುದೊಂದು ದಿನ ಅವರ ಸ್ಥಾನವನ್ನು ತುಂಬಲು ಹೊಸ ನಾಯಕ ಹುಟ್ಟುತಾನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗೋವು ಹತ್ಯೆ ಕುರಿತು ಮತನಾಡಿದ ಅವರು ಗೋವು ಹತ್ಯೆ ನಿಷೇಧ ಕಾಯ್ದೆ ಅವೈಜ್ಞಾನಿಕತೆಯಿಂದ
ಕುಡಿದೆ, ಇದರಿಂದ ಪಶು ಪಾಲನೆ ನಡೆಸುವ ಮುಸ್ಲಿಮರು ಸೇರಿ ಬಹುತೇಕರಿಗೆ ತೊಂದರೆಗಳಿಗೆ ಸಿಲುಕಿಸಲಿದೆ, ಕಾಯ್ದೆಯ ಹೆಸರಲ್ಲಿ ಜೈಲಿಗೆ ತಳಬಹುದು, ಮನೆ ಮಟ್ಟಗಳನ್ನು ಮಾರಾಟ ಮಾಡಿ ಬಿದಿಗೆ ತಂದು ನಿಲ್ಲಿಸುವ ಅವೈಜ್ಞಾನಿಕ ಕಾಯ್ದೆ ಇದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದ 8.35 ಕೋಟಿ ಜನರು ಮಾಂಸಾಹಾರಿಗಳಾಗಿದ್ದಾರೆ, ಆಹಾರ ಪದಾರ್ಥಗಳಾದ ತೊಗರಿ, ಕಡ್ಲೆ, ಹೆಸರು ಸೇರಿದಂತೆ ಇತ್ಯದಿ ಬೆಳೆಕಾಳುಗಳ ಬೆಲೆ ಏರಿಕೆ ಗಗನಕ್ಕೆ ಏರಿದ್ದು, ಜನರಿಗೆ ಕಡಿಮೆ ಬೆಲೆಯಲ್ಲಿ ಪೌಷ್ಠಿಕಾಂಶ ಉಳ್ಳ ಆಹಾರ ಅವರ ಸೇವಿಸುವುದು ಬಿಜೆಪಿ ಅವರಿಗೆ ಇಷ್ಟವಿಲ್ಲ. ಕೊರೊನಾ ಹೆಸರಲ್ಲಿ ಅವೈಜ್ಞಾನಿಕ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿದ್ದಾರೆ. ಕೆಲಸ ಇಲ್ಲದೆ ಪರದಾಡುತ್ತಿದ್ದಾರೆ. ಸರಕಾರದ ತಪ್ಪು ನೀತಿಯಿಂದ ದೇಶ ಹಸಿವಿನಿಂದ ನರಳುವಂತಾಗಿದೆ ಎಂದು ಅಸಮಧಾನ ಹೋರಹಾಕಿದರು.

ಜಿಲ್ಲಾಧ್ಯಕ್ಷ ರಹಿಮ್ ಮಿರ್ಚಿ, ಮಾಜಿ‌ ಜಿ.ಪಂ ಸದಸ್ಯ ಗುರುಶಾಂತ ಪಟ್ಟೇದ್ದಾರ್, ಇಲಿಯಾಜ್ ಸೇಠ್, ಹಿರಿಯ ಪತ್ರಕರ್ತ, ಅಜಿಜುಲ್ಲಾ ಸರ್ಮಸ್ತ್, ಮಾಜಿದ್ ಪ್ಯಾರೆ, ಮೌಲಾನಾ ವಾಜೀದ್, ಪಕ್ಷದ ರಾಜ್ಯ ಅಧ್ಯಕ್ಷ ಉಸ್ಮಾನ ಗನಿ, ಹಬ್ಬಿಬ್ ಪಟೇಲ್, ಶಿರಾಜ್ ಪಟೇಲ್, ಅಬ್ದುಲ್ ಖಾದರ ಉಪಸ್ಥಿತರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

21 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago