ಬಿಸಿ ಬಿಸಿ ಸುದ್ದಿ

ಕುಡಿಯುವ ನೀರಿನ ಪೈಪ್‌ಲೈನ್ ಯೋಜನೆಗೆ ಶಾಸಕ ಮತ್ತಿಮಡು ಚಾಲನೆ

ಶಹಾಬಾದ: ಸುಮಾರು ಮೂರು ಕೋಟಿ ಅನುದಾನದಲ್ಲಿ ಗೋಳಾ(ಕೆ) ಕಾಗಿಣಾ ನದಿಯಿಂದ ತೊನಸನಹಳ್ಳಿ(ಎಸ್) ಗ್ರಾಮಕ್ಕೆ ಕುಡಿಯುವ ನೀರಿನ ಪೈಪ್‌ಲೈನ್ ಯೋಜನೆ ಕೈಗೊಳ್ಳಲಾಗುತ್ತಿದ್ದು, ತೊನಸನಹಳ್ಳಿ(ಎಸ್) ಗ್ರಾಮದ ಜನರ ಬಹು ದಿನಗಳ ಕನಸು ನನಸಾಗುವ ಕಾಲ ಬಂದಿದೆ ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಹೇಳಿದರು.

ಅವರು ಶನಿವಾರ ತೊನಸನಹಳ್ಳಿ(ಎಸ್) ಗ್ರಾಮದಲ್ಲಿ ಆಯೋಜಿಸಲಾದ ಕೆಕೆಆರ್‌ಡಿಬಿ ಯೋಜನೆಯಡಿ ಸುಮಾರು ೩ ಕೋಟಿ ರೂ. ಅನುದಾನದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿಯನ್ನು ಉದ್ಘಾಟಿಸಿ ಮಾತನಾಡಿದರು.

ಶಾಸಕರಾಗುವುದಕ್ಕಿಂತ ಮುಂಚೆ ಹಾಗೂ ಶಾಸಕರಾದ ನಂತರ ಗ್ರಾಮಕ್ಕೆ ಬಂದಾಗ ಜನರು ಕೇಳುವ ಮೊದಲ ಪ್ರಶ್ನೆ ನಮಗೆ ನೀರು ಯಾವಾಗ ಕೊಡ್ತೀರಾ ಎಂದು.ನಮ್ಮೂರಿಗೆ ಯಾವುದೇ ಕೆಲಸ ಮಾಡ್ರಿ ಬಿಡ್ರಿ.ಮೊದಲು ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಎಂದು ಗ್ರಾಮದ ಜನರು ಒಕ್ಕೊರಲದಿಂದ ಮನವಿ ಮಾಡುತ್ತಿದ್ದರು. ಗ್ರಾಮಕ್ಕೆ ನೀರಿನ ಯೋಜನೆ ತರುವ ತನಕ ಗ್ರಾಮಕ್ಕೆ ಕಾಲಿಡುವುದಿಲ್ಲ ಎಂದು ಅವತ್ತೆ ನಾನು ನಿರ್ಧಾರ ಮಾಡಿದೆ.ಇಂದು ಆ ಕಾಮಗಾರಿ ಉದ್ಘಾಟನೆಯಾಗಿದ್ದರಿಂದ ಸದ್ಯದಲ್ಲೆ ಗ್ರಾಮಕ್ಕೆ ಕುಡಿಯುವ ನೀರು ಬರಲಿದೆ.ಕೇವಲ ಶಾಸಕರು ಬಂದು ಉದ್ಘಾಟನೆ ಮಾಡಿ ಹೋದರೂ ಎಂಬ ಭಾವನೆ ನಿಮ್ಮ ಹತ್ತಿರ ಬರದಿರಲಿ.ಗುತ್ತಿಗೆದಾರರು ನಿಗದಿತ ಅವಧಿಯೊಳಗೆ ಕಾಮಗಾರಿ ಮುಗಿಸಬೇಕು.ಇದರಲ್ಲಿ ಯಾವುದೇ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದರು.ಅಲ್ಲದೇ ತೊನಸನಹಳ್ಳಿ ಗ್ರಾಮದಲ್ಲಿ ನೀರಿನ ಟ್ಯಾಂಕ್ ಹಾಗೂ ಇತರ ಕಾಮಗಾರಿಗಳಿಗಾಗಿ ಸುಮಾರು ೪೦ ಲಕ್ಷ ರೂ. ಅನುದಾನ ಒದಗಿಸಲಾಗಿದೆ.ಅಲ್ಲದೇ ತೊನಸನಹಳ್ಳಿ(ಎಸ್) ಗ್ರಾಮದಿಂದ ಮರತೂರ ಗ್ರಾಮಕ್ಕೆ ರಸ್ತೆ ನಿರ್ಮಾಣ ಮಾಡಲು ಮನವಿ ಮಾಡಲಾಗಿದೆ.ಅದಕ್ಕಾಗಿ ಸುಮಾರು ಮೂರು ಕೋಟಿ ರೂ. ಅನುದಾನ ಬೇಕಾಗುತ್ತದೆ.ಅನುದಾನ ತಂದ ಮೇಲೆ ರೈತರು ನ್ಯಾಯಾಲಯದಿಂದ ತಡೆಯಾಜ್ಞೆ ತಂದರೆ ತೊಂದರೆಯಾಗುತ್ತದೆ.ಆದ್ದರಿAದ ಗ್ರಾಮದ ಮುಖಂಡರು ಎಲ್ಲರಿಂದ ಒಪ್ಪಿಗೆ ಪಡೆದುಕೊಳ್ಳಿ.ನಿಮ್ಮ ಯಾವುದೇ ಸಮಸ್ಯೆಯನ್ನು ಶಾಸಕನಾಗಿ ಅಲ್ಲ, ನಿಮ್ಮ ಮನೆಯ ಮಗನಾಗಿ ಕೆಲಸ ಮಾಡಿ ಕೊಡುತ್ತೆನೆ ಎಂದು ಭರವಸೆ ನೀಡಿದರು.
ಜಿಪಂ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ ಮರತೂರ, ತಾಪಂ ಅಧ್ಯಕ್ಷೆ ಸಂಗೀತಾ ದೇವೆಂದ್ರ ಕಾರೊಳ್ಳಿ, ತಾಪಂ ಉಪಾಧ್ಯಕ್ಷೆ ವಿಜಯಲಕ್ಷಿö್ಮ ಸುರೇಶ ಚವ್ಹಾಣ, ತಹಸೀಲ್ದಾರ ಸುರೇಶ ವರ್ಮಾ, ಶಿವಲಿಂಗಪ್ಪ ಗೊಳೇದ್, ಅಣವೀರ ಇಂಗಿನಶೆಟ್ಟಿ., ಕೊತ್ತಲಪ್ಪ ಮುತ್ಯಾ,ನಿಂಗಣ್ಣಗೌಡ ಪಾಟೀಲ,ಸಂಗಮೇಶ ರಾಮಶೆಟ್ಟಿ, ಸಿದ್ದು ಗೊಳೇದ್, ಬಸವರಾಜ ಮದ್ರಕಿ,ನಾಗರಾಜ ಮೇಲಗಿರಿ, ಶೇರ ಅಲಿ,

emedia line

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

11 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

21 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

21 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

21 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago