ಶಹಾಬಾದ:ನಗರದ ಇಂದಿರಾ ನಗರದ ಮಡ್ಡಿ ನಂ.೧ ಮತ್ತು ಇಂದಿರಾ ನಗರ ಮಡ್ಡಿ ನಂ. ೨ರ ಜೆಪಿ ಕಾಲೋನಿಯ ಬಂಜಾರಾ ಸಮಾಜದವರಿಗೆ ಸ್ಮಶಾನ ಭೂಮಿ ನೀಡಬೇಕೆಂದು ನಗರದ ಬಂಜಾರ ಸಮಾಜದ ಅಧ್ಯಕ್ಷ ಭರತಕುಮಾರ ರಾಠೋಡ ಶಾಸಕ ಬಸವರಾಜ ಮತ್ತಿಮಡು ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಂಜಾರ ಸಮಾಜದ ಅಧ್ಯಕ್ಷ ಭರತಕುಮಾರ ರಾಠೋಡ ನಗರದ ಇಂದಿರಾ ನಗರದ ಮಡ್ಡಿ ನಂ.೧ ಮತ್ತು ಇಂದಿರಾ ನಗರ ಮಡ್ಡಿ ನಂ. ೨ರ ಜೆಪಿ ಕಾಲೋನಿಯ ಬಂಜಾರಾ ಸಮಾಜದªರಿಗೆ ಭೂಮಿ ಇರುವುದಿಲ್ಲ . ಈ ಹಿಂದಿನಿAದಲೂ ಸಮಾಜದಲ್ಲಿ ಯಾರಾದರೂ ಸಾವನಪ್ಪಿದರೇ ಕಾರ್ಖಾನೆಯ ವ್ಯಾಪ್ತಿಯ ಪ್ರದೇಶದಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತಿತ್ತು. ಆದರೆ ಈಗ ಜೆಪಿ ಕಂಪನಿಯವರು ಅದಕ್ಕೆ ಅನುಮತಿ ನೀಡದಿರುವುದರಿಂದ ಸಾಕಷ್ಟು ತೊಂದರೆಯಾಗುತ್ತಿದೆ.ಆದ್ದರಿAದ ಮಡ್ಡಿ ಪ್ರದೇಶದಲ್ಲಿ ಯಾವುದಾದರೂ ಖಾಸಗಿ ಜಮೀನನ್ನು ಸರ್ಕಾರದಿಂದ ಖರೀದಿಸಿ ಇಲ್ಲಿನ ಬಂಜಾರಾ ಸಮಾಜದವರಿಗೆ ರುದ್ರಭೂಮಿ ಒದಗಿಸಿಕೊಡಬೇಕೆಂದು ಒತ್ತಾಯಿಸಿ, ಮನವಿ ಪತ್ರವನ್ನು ಶಾಸಕ ಬಸವರಾಜ ಮತ್ತಿಮಡು ಅವರಿಗೆ ನೀಡಿದರು.
ಬಂಜಾರಾ ಸಮಾಜದ ಮುಖಂಡರಾದ ಅರ್ಜುನ ರಾಠೋಡ,ಪ್ರೀತಮ ಚವ್ಹಾಣ, ನಾಗರಾಜ ಚವ್ಹಾಣ,ಶೇರು ಚವ್ಹಾಣ,ಜಗನ ರಾಠೋಡ,ಅಣ್ಣಾ ಚವ್ಹಾಣ,ಸುಮೀತ ಚವ್ಹಾಣ ಹೊಂದ ನಾಯಕ್, ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ನಾಗರಾಜ ಮೇಲಗಿರಿ, ಕನಕಪ್ಪ ದಂಡಗುಲಕರ್ ಇತರರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…