ಕಲಬುರಗಿ: ಭಾರತರತ್ನ ಡಾ. ಬಿ ಆರ್ ಅಂಬೇಡ್ಕರ್ ಅವರ ವಿಚಾರಗಳು ಹಾಗೂ ಚಿಂತನೆಗಳು ಸಾರ್ವಕಾಲಿಕ ಎಂದು ಆಳಂದಾ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನಾಗಮೂರ್ತಿ ಶೀಲವಂತ ಹೇಳಿದರು.
ಅವರು ತಾಲೂಕಿನ ಕೆರಿಅಂಬಲಗಾ ಗ್ರಾಮದಲ್ಲಿ ಭಾರತರತ್ನ ಡಾ.ಬಿ ಆರ್ ಅಂಬೇಡ್ಕರ್ ಅವರ ಜೀವನಾಧಾರಿತ “ಮಹಾನಾಯಕ” ಧಾರವಾಹಿ ಬ್ಯಾನರ್ ಉದ್ಘಾಟಿಸಿ ಮಾತನಾಡಿದರು.
ಡಾ.ಅಂಬೇಡ್ಕರ್ ರವರು ಸಂವಿಧಾನದ ಮೂಲಕ ನೀಡಿರುವ ಸಮಾನತೆ,ಸ್ವಾತಂತ್ರ್ಯ , ಮತ್ತು ಮೂಲಭೂತ ಹಕ್ಕುಗಳನ್ನು ಹಾಗೂ ಸೌಲಭ್ಯಗಳನ್ನು ಎಲ್ಲರೂ ಸದುಪಯೋಗ ಪಡಿಸಿಕೋಳ್ಳಬೇಕೆಂದು ಶೀಲವಂತ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಬಿಜೆಪಿ ಯುವ ಮುಖಂಡ ಪ್ರೊ ಯಶವಂತರಾಯ್ ಅಷ್ಠಗಿ ಅವರು ಮಾತನಾಡಿ, ಬಾಬಾಸಾಹೇಬ್ ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ಧಾರವಾಹಿಯ ಮುಖಾಂತರ ಅವರ ಸಂದೇಶಗಳನ್ನು ವಿಚಾರಗಳನ್ನು ಮನೆಮನೆಗೆ ತಲುಪುವಂತೆ ಮಾಡುತ್ತಿರುವ ಶಾಸಕಿ ಪ್ರಣೀತಿ ಶಿಂಧೆ ಹಾಗೂ ಝಿ ಟಿವಿ ಕನ್ನಡ ವಾಹಿನಿಯ ರಾಘವೇಂದ್ರ ಹುಣಸೂರ ರವರ ಕಾರ್ಯ ಶ್ಲಾಘನೀಯ ಎಂದರು. ಅಂಬೇಡ್ಕರ್ ಅವರ ವಿಚಾರಗಳು ಚಿಂತನೆಗಳು ಇಂದಿನ ಯುವ ಜನತೆಗೆ ಹೆಚ್ಚು ತಲುಪಬೇಕಾದ ಅವಶ್ಯಕತೆ ಇದೆ ಎಂದು ಯಶವಂತರಾಯ್ ಅಷ್ಠಗಿ ಹೇಳಿದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಸಾಹಿತಿ ಡಾ. ಕೆ.ಗಿರಿಮಲ್ಲ ರವರು ಮಾತನಾಡಿ ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಸಂವಿಧಾನದಲ್ಲಿ ಸರ್ವರಿಗೂ ಸಮಾನ ಅವಕಾಶ ಕಲ್ಪಿಸಿದ ಮಹಾನ್ ನಾಯಕ ಡಾ. ಅಂಬೇಡ್ಕರ್ ಎಂದರು.
ಇಂದಿನ ದಿನಗಳಲ್ಲಿ ಜಾತಿ-ಜಾತಿಗಳ ಮಧ್ಯೆ ಸಾಮರಸ್ಯ ಮೂಡಿಸುವ ವಾತಾವರಣ ನಿರ್ಮಾಣವಾಗಿದ್ದು, ಸಂವಿಧಾನದಿಂದ ಸಾಧ್ಯವಾಗಿದೆ ಎಂದರು.
ಭಾರತ ಸರ್ವಜನಾಂಗದ ಶಾಂತಿ ತೋಟವಾಗಿದೆ.ಇಲ್ಲಿ ರಕ್ತ ಕ್ರಾಂತಿಗೆ ಜಾಗವಿಲ್ಲ ಎಂದರು. ಭಗವಾನ್ ಗೌತಮ ಬುದ್ಧ, ಮಹಾತ್ಮ ಗಾಂಧೀಜಿ ಡಾ. ಅಂಬೇಡ್ಕರ್ ಅವರು ಅಹಿಂಸಾ ಮಾರ್ಗದಿಂದಲೇ ದೇಶದಲ್ಲಿ ಮಹಾಕ್ರಾಂತಿ ಮಾಡಿದ್ದಾರೆ ಎಂದು ಬಣ್ಣಿಸಿದರು. ಇನ್ನೋರ್ವ ಮುಖ್ಯ ಭಾಷಣಕಾರ ಲೇಖಕ ವಿಠ್ಠಲ ವಗ್ಗನ್ ಕಾರ್ಯಕ್ರಮ ಕುರಿತು ಸವಿಸ್ತಾರವಾಗಿ ಮಾತನಾಡಿದರು ಕಾರ್ಯಕ್ರಮದಲ್ಲಿ ಸಹಾಯಕ ಅಭಿಯಂತರರಾದ ದೇವಣ್ಣ ಕಟ್ಟಿ, ಬಾಬುರಾವ ಜ್ಯೋತಿ, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಶಿವ ಅಷ್ಠಗಿ, ವಿಠ್ಠಲ ಸಿರಸಗಿ, ಶಿವಶರಣ ಸಜ್ಜನ್, ವಿಠ್ಠಲ್ ಜ್ಯೋತಿ, ಹನುಮಂತ್ ಜ್ಯೋತಿ, ಶಿವಪ್ಪ ಶೃಂಗೇರಿ, ಅನ್ವರ್ ಜಮಾದಾರ್, ಶ್ರೀಚಂದ್ ಜೈಭೀಮ್ ಶೃಂಗೇರಿ ಆಕಾಶ್, ವಿಕ್ರಂ,ಹಣಮಂತ ನವಲೆ ಇದ್ದರು. ಮಲ್ಲಿಕಾರ್ಜುನ ಗಡದನ ನಿರೂಪಿಸಿದರು, ಜಿನೇಶ್ ಜ್ಯೋತಿ ಸ್ವಾಗತಿಸಿದರು, ರಾಹುಲ್ ಶೃಂಗೇರಿ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದ ಮೊದಲು ಸಂವಿಧಾನದ ಪೀಠಿಕೆಯನ್ನು ಸೋನುಬಾಯಿ ಶೃಂಗೇರಿ ಒದಿದರು.
ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರು ಕಂಡಿದ್ದ ಅಖಂಡ ಭಾರತದ ಕನಸು ಮುಂದುವರಿಕೊಂಡು ಹೋಗಬೇಗಾದ ಕರ್ತವ್ಯ ಯುವ ಶಕ್ತಿಯ ಮೇಲೆ ಹೆಚ್ಚಿದೆ. – ಶಿವ ಅಷ್ಠಗಿ, ಜಿಲ್ಲಾ ಉಪಾಧ್ಯಕ್ಷ ಬಿಜೆಪಿ ಯುವ ಮೋರ್ಚಾ
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…