ಬೀದರ್: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಗಂದಗೆ ಪೆನಾಲ್‌ನಿಂದ ಆಯ್ಕೆಯಾದ ನೂತನ ಸದಸ್ಯರಿಗೆ ಸಾಮೂಹಿಕವಾಗಿ ಅಭಿನಂದಿಸಿ ಶಾಲು ಹೊದಿಸಿ ಸತ್ಕರಿಸಲಾಯಿತು.
ಆರಂಭದಲ್ಲಿ ಪ್ರಾಸ್ತಾವಿಕವಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ರಾಜಶೇಖರ್ ಮಂಗಲಗಿ ಅವರು ಮಾತನಾಡಿ, ವಿವಿಧ ಇಲಾಖೆಗಳ ಒಟ್ಟು ೬೨ ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಗಂದಗೆ ಪೆನಾಲ್‌ನಿಂದ ೫೦ ಸದಸ್ಯರು ಆಯ್ಕೆಯಾಗಿದ್ದು, ಸರ್ಕಾರಿ ನೌಕರ ಸಂಘದ ಇತಿಹಾಸದಲ್ಲಿ ಒಂದು ದಾಖಲೆಯಾಗಿದೆ ಎಂದರು.
ನೂತನವಾಗಿ ಆಯ್ಕೆಯಾದ ಆರೋಗ್ಯ ಇಲಾಖೆಯ ಓಂಕಾರ್ ಮಲ್ಲಿಗೆ, ಜಿಲ್ಲಾ ಆಸ್ಪತ್ರೆಯ ಪ್ರಕಾಶ್ ಮಡಿವಾಳ್, ಪ್ರಾಥಮಿಕ ಶಾಲೆಗಳ ಪ್ರಭುಲಿಂಗ್, ಗ್ರಾಹಕ ನ್ಯಾಯಾಲಯದ ಸಿದ್ದಮ್ಮ, ಆಯುಷ್ ಇಲಾಖೆಯ ಡಾ. ವೈಶಾಲಿ ಎಸ್. ಮತ್ತು ಸಾಂಖಿಕ ಇಲಾಖೆಯ ಶರಣಯ್ಯ ಎಸ್. ಮಠಪತಿಯವರು ಮಾತನಾಡಿ, ತಮ್ಮ ತಮ್ಮ ಚುನಾವಣೆಯ ಅನುಭವಗಳನ್ನು ಹಂಚಿಕೊಂಡಾಗ ಸಭೆಯು ನಗೆಗಡದಲ್ಲಿ ತೆಲಾಡಿತು. ಮುಂದುವರೆದು ರಾಜೇಂದ್ರಕುಮಾರ ಗಂದಗೆಯವರ ನೇತ್ರತ್ವದಲ್ಲಿ ಜಿಲ್ಲೆಯ ನೌಕರರ ಸಮಸ್ಯೆ ಬಗೆಹರಿಸಲು ಒಗಟ್ಟಿನಿಂದ ಹೋರಾಡೋಣ ಎಂದರು.
ಅಧ್ಯಕ್ಷತೆ ವಹಿಸಿದ್ದ ರಾಜೇಂದ್ರಕುಮಾರ್ ಗಂದಗೆಯವರು ಮಾತನಾಡಿ, ಕಳೆದ ಅವಧಿಯಲ್ಲಿ ತಮ್ಮ ತಂಡವು ಮಾಡಿದ ಕೆಲಸಗಳನ್ನು ಮೆಚ್ಚಿಕೊಂಡು ಜಿಲ್ಲೆಯ ಸರ್ಕಾರಿ ನೌಕರರು ದಾಖಲಾತ್ಮಕವಾದ ತಮ್ಮ ತಂಡದ ೫೦ ಸದಸ್ಯರನ್ನು ಗೆಲ್ಲಿಸಿ ಆಶಿರ್ವದಿಸಿದ್ದಾರೆ. ಸರ್ಕಾರಿ ನೌಕರರ ವಿಶ್ವಾಸವನ್ನು ಉಳಿಸಿಕೊಂಡು ಪ್ರಮಾಣಿಕವಾಗಿ ಸರ್ಕಾರಿ ನೌಕರರ ಸೇವೆಯಲ್ಲಿ ತೊಡಗಿಸಿಕೊಳ್ಳುವೆನೆಂದು ಹೇಳಿದರು. ಅಧ್ಯಕ್ಷ ಚುನಾವಣೆಯಲ್ಲಿ ತಮ್ಮ ತಂಡವೇ ಗೆಲ್ಲುವುದು ನಿಶ್ಚಿತವೆಂದು ಘೋಷಿಸಿದರು.
ರಾಜಕುಮಾರ್ ಪಾಟೀಲ್ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರಾಚಪ್ಪ ಪಾಟೀಲ್, ಪ್ರಕಾಶ್ ಮಾಳಗೆ, ಮಾಣಿಕಪ್ಪ ಗೋರನಾಳೆ, ರಾಜೇಂದ್ರ ಜೊನ್ನಿಕೇರಿ, ಕುಶಾಲರಾವ್ ಪಾಟೀಲ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…