ಬಿಸಿ ಬಿಸಿ ಸುದ್ದಿ

ಪೆಟ್ರೊಲ್ ಡೀಸೆಲ್ ಸೇರಿದಂತೆ ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಎಸ್ಯುಸಿಐ ಪ್ರತಿಭಟನೆ

ಕಲಬುರಗಿ: ಪೆಟ್ರೊಲ್ ಡೀಸೆಲ್ ಬೆಲೆ ಏರಿಕೆ ಮಾಡಿ ಸೀಮೆ ಎಣ್ಣೆ ಮೇಲಿನ ಸಬ್ಸಿಡಿಯನ್ನು ತೆಗೆದುಹಾಕಿರುವ ಮತ್ತು ಸೀಮೆ ಎಣ್ಣೆ ಹಾಗು ಎಲ್‌ಪಿಜಿ ಬೆಲೆ ಏರಿಕೆಯನ್ನು ಖಂಡಿಸಿ, ಎಸ್‌ಯುಸಿಐ(ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಸಮಿತಿಯಿಂದ ಎಸ್,ವಿ,ಪಿ ಸರ್ಕಲ್‌ನಲ್ಲಿ ಇಂದು ಪ್ರತಿಭಟನೆ ಮಾಡಲಾಯಿತ್ತು.

ಈ ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿಗಳಾದ ಕಾಮ್ರೇಡ್ ಎಚ್,ವಿ,ದಿವಾಕರ್ ಅವರು ಮಾತನಾಡಿ  ಕೇಂದ್ರ ಸರ್ಕಾರದ ೨೦೨೧ನೆ ಇಸವಿಯ ಬಜೆಟ್, ಮುಂಬರುವ ೨೦೨೧ ಏಪ್ರಿಲ್‌ನಲ್ಲಿ ಆರಂಭವಾಗುವ ಆರ್ಥಿಕ ವರ್ಷದಲ್ಲಿ ಸೀಮೆ ಎಣ್ಣೆ ಮೇಲಿನ ಸಬ್ಸಿಡಿ ಪಾವತಿಗೆ ಯಾವುದೇ ಅವಕಾಶವನ್ನು ಒದಗಿಸಿಲ್ಲ. ಈ ಮೊದಲು, ೨೦೧೬ರಲ್ಲಿ ಸರ್ಕಾರವು ಹಂತ ಹಂತವಾಗಿ ಸಬ್ಸಿಡಿಯನ್ನು ಕಡಿತಗೊಳಿಸಲು, ಪ್ರತಿ ಹದಿನೈದು ದಿನಗಳಿಗೊಮ್ಮೆ ಸೀಮೆ ಎಣ್ಣೆ ಬೆಲೆಯನ್ನು ಪ್ರತಿ ಲೀಟರ್‌ಗೆ ೨೫ ಪೈಸೆ ಹೆಚ್ಚಿಸಲು ರಾಜ್ಯ ಮಾಲೀಕತ್ವದ ಇಂಧನ ರೀಟೇಲ್ ಸಂಸ್ಥೆಗಳಿಗೆ ಅವಕಾಶ ಒದಗಿಸಿತ್ತು. ಬಡಜನರ ಇಂಧನವಾದ ಸೀಮೆ ಎಣ್ಣೆಯ ಮೇಲೆ ಪಾಕ್ಷಿಕ ಬೆಲೆ ಏರಿಕೆಯ ಮೂಲಕ ಸಬ್ಸಿಡಿಯನ್ನು ಕಡಿತಗೊಳಿಸುತ್ತಿರುವುದು ಈಗಾಗಲೇ ಆರ್ಥಿಕವಾಗಿ ಜರ್ಜರಿತರಾಗಿರುವ ಬಡಜನರ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದರು.

ಈಗಾಗಲೆ ದೇಶದ ಜಿಡಿಪಿ ಕೆಳಗೆ ಬಿಳುತ್ತಿದೆ. ಜನರಿಗೆ ಉದ್ಯೋಗವಿಲ್ಲದೆ ಯುವಕರು ಅಲೆದಾಡುತ್ತಿದ್ದಾರೆ ದೇಶದಲ್ಲಿ ಬಡತನ ಹೆಚ್ಚಾಗುತ್ತಿದೆ ಇಂತಹ ಪರಿಸ್ಥಿತಿಯಲ್ಲಿ ಪೆಟ್ರೊಲ್ ಮತ್ತು ಡೀಸೆಲ್ ಬಲೆ ಏರಿಕೆ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.  ಮೇಲಾಗಿ, ಸಬ್ಸಿಡಿ ಬೆಲೆಯಲ್ಲಿ ದೊರಕುತ್ತಿದ್ದ ಅಡುಗೆ ಅನಿಲ(ಎಲ್‌ಪಿಜಿ)ದ ಬೆಲೆಯನ್ನು ಕೂಡ ಪ್ರತಿ ಸಿಲಿಂಡರ್‌ಗೆ ರೂ.೨ ಏರಿಸಲಾಗಿದೆ. ಕಾರ್ಪೊರೇಟ್‌ಗಳನ್ನು ತೃಪ್ತಿಪಡಿಸುವ ಮತ್ತು ಬಡವರಿಗೆ ಕನಿಷ್ಟ ಬೆಂಬಲ ಒದಗಿಸುವುದನ್ನು ನಿರಾಕರಿಸುತ್ತಿರುವ ಕೇಂದ್ರ ಸರ್ಕಾರದ ಈ ನೀತಿಯು ಅದರ ಪ್ರತಿಯೊಂದು ಆರ್ಥಿಕ ಹೆಜ್ಜೆಯಲ್ಲೂ ಕಣ್ಣಿಗೆ ರಾಚುವಂತೆ  ಕಾಣಿಸುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಈ ಬಾರಿ ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ಬಂಡವಾಳಶಾಹಿಗಳ ಪರವಾಗಿ ಮತ್ತು ಜನ ಸಾಮನ್ಯರ ವಿರೋಧಿ ಬಜೆಟ್ ಆಗಿದೆ. ಸಾಮಾನ್ಯ ಜನರ ಇಂಧನಗಳ ಮೇಲಿನ ಸಬ್ಸಿಡಿಯು ಈ ಹಿಂದಿನಂತೆ ಮುಂದುವರಿಸಬೇಕೆಂದು ನಾವು ಆಗ್ರಹಿಸುತ್ತಿದ್ದೇವೆ. ಬಿಜೆಪಿ ಸರ್ಕಾರದ ಈ ಜನವಿರೋಧಿಯಾದ ಮತ್ತು ಕಾರ್ಪೊರೇಟ್ ಪರ ಧೋರಣೆ ವಿರುದ್ಧ ಬೃಹತ್ ಸಮೂಹ ಆಂದೋಲಗಳನ್ನು ಸಂಘಟಿಸಬೇಕೆಂದು ಅವರು  ಜನರಿಗೆ ಕರೆ ನೀಡಿದರು.

ನಂತರ ಪ್ರತಿಭಟನಾ ಸಭೆಯನ್ನು ಉದ್ದೇಸಿಸಿ ಕಾ ಮಹೇಶ ನಾಡಗೌಡರವರು ಮಾತನಾಡಿ, ಕೇಂದ್ರ ಬಿಜೆಪಿ ಸರ್ಕಾರವು ಅತ್ಯಂತ ಜನ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಪೆಟ್ರೊಲ್ ಮತ್ತು ಡೀಸೆಲ್ ಏರಿಕೆ ಮಾಡಿ ಎಲ್ಲ ವಸ್ತುಗಳ ಬೆಲೆ ಏರಿಕೆಗೆ ಅನುವು ಮಾಡಿಕೊಟಂತಾಗಿದೆ ಜನ ಸಮಾನ್ಯರು ಇನ್ನು ಮುಂದೆ ಜೀವನ ನಿರ್ವಹಣೆ ಮಾಡೋದು ತಂಬಾ ಕಷ್ಟವಾಗುತ್ತದೆ. ದೆಹಲಿಯಲ್ಲಿ ರೈತರು ಜನ ವಿರೋಧಿ ಕೃಷಿ ಮಸೂದೆಗಳನ್ನು ಹಿಂದಕ್ಕೆ ತೆಗೆದುಕೊಳ್ಳಬೇಕೆಂದು ಹೋರಾಟ ನಡೆಸುತ್ತಿದ್ದಾರೆ ಆದರೆ ಸರ್ಕಾರ ಅವರ ಸಮಸ್ಯೆ ಪರಿಹರಿಸುತ್ತಿಲ್ಲ. ಯುವಕರು ಉದ್ಯೋಗಕಾಗಿ ಅಲೆದಾಡುತ್ತಿದ್ದಾರೆ ಕಾರ್ಮಿಕರು ಕೆಲಸ ಕಳೆದುಕೊಳ್ಳುತ್ತಿದಾರೆ ದೇಶದಲ್ಲಿ ಜನರು ಈಗಾಗಲೆ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿದ್ದಾರೆ ಇದರ ಬಗ್ಗೆ ಸರ್ಕಾರಕ್ಕೆ ಯಾವುದೆ ಕಾಳಜಿ ಇಲ್ಲ. ಕೇವಲ ಬಂಡವಾಳಶಾಹಿಗಳ ಹಿತಸಕ್ತಿ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಿದೆ. ಆದ್ದರಿಂದ ಇಂತ ಸರ್ಕಾರವನ್ನು ಸೋಲಿಸಲು ಜನರು ಹೋರಾಟಕ್ಕೆ ಸಜ್ಜಾಗಬೇಕೆಂದು ಅವರು ಹೇಳಿದ್ದರು.

ಈ ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾ ಸಮಿತಿಯಾ ಸದಸ್ಯರಾದ ಕಾ ವಿ,ನಾಗಮ್ಮಾಳ್. ಕಾ ವಿ,ಜಿ ದೇಸಾಯ್.  ಕಾ ಸೀಮಾ ದೇಶಪಾಂಡೆ. ಕಾ ಮಹೇಶ ಎಸ್,ಬಿ. ಹಾಗೂ ಹಣಮಂತ್ ಎಸ್,ಹೆಚ್ ರಾಧಾ ಜಿ. ಗೌರಮ್ಮ ಸಿ,ಕೆ. ಈರಣ್ಣ ಇಸಬಾ. ಸ್ನೇಹಾ ಕಟ್ಟಿಮನಿ. ಶಿಲ್ಪಾ ಬಿ,ಕೆ. ಪ್ರೀತಿ ದೊಡ್ಡಮನಿ. ಹರೀಶ್ ಸಂಗಾಣೆ. ಭೀಮು ಆಂದೊಲ. ನಾಗರಾಜ ರಾವೂರ್. ಈಶ್ವರ್ ಕುಂಬಾರ್. ಸೇರಿದಂತೆ ನೂರಾರು ಜನ ಈ ಪ್ರತಿಭಟನೆಯಲ್ಲಿ ಭಾಗವಹಿಸಿ.

ಪೆಟ್ರೊಲ್ ಡೀಸೆಲ್ ಬೆಲೆ ಏರಿಕೆಯನ್ನು ಮಾಡಿರುವ ಜನ ವಿರೋಧಿ ಕೇಂದ್ರ ಸರ್ಕಾರಕ್ಕೆ ಧಿಕ್ಕಾರದ ಘೋಷಣೆ ಕೂಗಿ, ಬೆಲೆ ಏರಿಕೆ ಹಿಂದಕ್ಕೆ ತೆಗೆದುಕೊಳಬೆಕೆಂದು ಸರ್ಕಾರಕ್ಕೆ ಆಗ್ರಹಿಸಿದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

8 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

18 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

18 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

18 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago