ಸುರಪುರ: ತಾಲೂಕಿನಲ್ಲಿ ಕುತೂಹಲ ಮೂಡಿಸಿದ್ದ ಬಾದ್ಯಾಪುರ ಗ್ರಾಮ ಪಂಚಾಯಿತಿನಲ್ಲಿ ಕೈ ಮತ್ತು ಕಮಲ ಪಾಳ್ಯವು ಸಮಬಲ ಸದಸ್ಯರನ್ನು ಹೊಂದಿದ್ದರಿಂದ ಚೀಟಿ ಎತ್ತುವ ಮೂಲಕ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಅಧ್ಯಕ್ಷ ಸ್ಥಾನ ಒಲಿದರೆ, ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಒಲಿದಿದೆ.
ಸಹಾಯಕ ಚುನಾವಣಾಧಿಕಾರಿ ಎಸ್.ಜಿ. ಪಾಟೀಲ್ ಬೆಳಗ್ಗೆ ಬಾದ್ಯಾಪುರ ಗ್ರಾಪಂನಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯನ್ನು ಆರಂಭಿಸಿದರು. ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಸದಸ್ಯರು ಗೌಪ್ಯವಾಗಿ ಮತದಾನ ಮಾಡಿದರು. ಎರಡು ಕಡೆಯವರಿಗೆ ಸಮಾನಂತರ ಏಳೇಳು ಮತಗಳು ಬಿದ್ದಿದ್ದವು. ಎಲ್ಲ ಸದಸ್ಯರ ಒಪ್ಪಿಗೆ ಮೇರೆಗೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಹೆಸರಗಳನ್ನು ಒಂದೊಂದು ಬಾಕ್ಸ್‌ನಲ್ಲಿ ಹಾಕಿ ಚೀಟಿ ಎತ್ತಿದರು.
೩೦ ತಿಂಗಳ ಅವಧಿಗೆ ಅಧ್ಯಕ್ಷ ಸ್ಥಾನ ಮತ್ತು ಉಪಾಧ್ಯಕ್ಷ ಸ್ಥಾನ ಮೊದಲ ಚೀಟಿ ಎತ್ತಿದಾಗ ಬಿಜೆಪಿ ಬೆಂಬಲಿತ ಅಧ್ಯಕ್ಷೆ ಶಿಮೊಗ್ಗೆಮ್ಮ ಚನ್ನೂರು ಅವರ ಹೆಸರು ಬಂದರೆ ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಬೆಂಲಿತ ಅಭ್ಯರ್ಥಿ ಮಹಾದೇವಮ್ಮ ಮಾಚಗೊಂಡಾಳ್ ಅವರಿಗೆ ಒಲಿಯಿತು. ಶಿವಮೊಗ್ಗೆಮ್ಮ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಮಹಾದೇವಮ್ಮ ಅವರು ಆಯ್ಕೆಯಾಗಿದ್ದಾಗೆ ಚುನಾವಣಾಧಿಕಾರಿ ಘೋಷಿಸಿ ಪ್ರಮಾಣ ಪತ್ರ ವಿತರಿಸಿದರು.
ಅಧ್ಯಕ್ಷೆ ಶಿವಮೊಗ್ಗೆಮ್ಮ ಚನ್ನೂರು ಬಾದ್ಯಾಪುರ, ರವಿಕುಮಾರ ನಾಯಕ ಭೈರಮಡ್ಡಿ, ನಿಂಗಣ್ಣ ಮಾಚಿಗೊಂಡಾಳ್, ಬಲಭೀಮರಾಯ ಬಾದ್ಯಾಪುರ, ಗುರಪ್ಪ ಹೆಮ್ಮಡಗಿ, ಹೊನ್ನಮ್ಮ ಗೋಸಿ, ಪಾರ್ವತಿ ಬ್ಯಾಳಿ, ಜಿಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪನಾಯಕ ತಾತಾ, ದೊಡ್ಡದೇಸಾಯಿ ದೇವರಗೋನಾಲ, ಬಲಭೀಮನಾಯಕ ಭೈರಿಮಡ್ಡಿ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಶರಣುನಾಯಕ ಭೈರಿಮಡ್ಡಿ, ವೆಂಕಟೇಶ ನಾಯಕ ಭೈರಿಮಡ್ಡಿ, ಕೊತ್ಲಪ್ಪ ಹಾವಿನ್ ಇತರರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…