ಸುರಪುರ: ತಾಲೂಕಿನ ಮಾಲಗತ್ತಿ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷ ಉಪಾಧ್ಯಕ್ಷರ ನೇಮಕಾತಿ ನಡೆಯಿತು. ಚುನಾವಣಾಧಿಕಾರಿಗಳಾಗಿದ್ದ ಅಕ್ಷರದಾಸೋಹ ಸಹಾಯಕ ನಿರ್ದೇಶಕ ಮೌನೇಶ ಕಂಬಾರವರು ಬೆಳಿಗ್ಗೆ ಚುನಾವಣಾ ಪ್ರಕ್ರೀಯೆಗಳನ್ನು ನಡೆಸಿದರು.
ಒಟ್ಟು ೧೭ ಸದಸ್ಯ ಬಲದ ಮಾಲಗತ್ತಿ ಗ್ರಾಮ ಪಂಚಾಯತಿಯಲ್ಲಿ ೧೧ ಗಂಟೆಯ ವರೆಗೆ ಅಧ್ಯಕ್ಷಸ್ಥಾನಕ್ಕೆ ಒಬ್ಬರು ಹಾಗು ಉಪಾಧ್ಯಕ್ಷ ಸ್ಥಾನಕ್ಕೆ ಒಬ್ಬರಂತೆ ಎರಡು ನಾಮತ್ರಗಳು ಮಾತ್ರ ಸಲ್ಲಿಕೆಯಾಗಿದ್ದವು,ಅದರಂತೆ ಚುನಾವಣಾಧಿಕಾರಿಗಳು ಮದ್ಹ್ಯಾನದ ವೇಳೆಗೆ ಯಲ್ಲಮ್ಮ ಚಂದಪ್ಪ ಗೌಡಗೇರಾ ಅಧ್ಯಕ್ಷರಾಗಿ ಹಾಗು ನಿಂಗಣ್ಣ ಹಯ್ಯಾಳಪ್ಪ ಮಾಲಗತ್ತಿಯವರನ್ನು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.
ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯ ನಂತರದಲ್ಲಿ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಅನೇಕ ಮುಖಂಡರು ಸನ್ಮಾನಿಸಿ ಗೌರವಿಸಿದರು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅಧ್ಯಕ್ಷ ಉಪಾಧ್ಯಕ್ಷರು ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಎಲ್ಲಾ ಗ್ರಾಮಗಳ ಸರ್ವಾಂಗಿಣ ಅಭೀವೃಧ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.ಅಲ್ಲದೆ ಇಲ್ಲಿ ನಾವು ಮಾತ್ರ ಅಧ್ಯಕ್ಷ ಉಪಾಧ್ಯಕ್ಷರಾದಂತೇನಲ್ಲ ಎಲ್ಲರು ಒಂದಾಗಿ ನಮ್ಮ ಗ್ರಾಮಗಳ ಅಭೀವೃಧ್ಧಿಗೆ ಕೆಲಸ ಮಾಡೋಣ ಅದಕ್ಕೆ ಎಲ್ಲರು ಸಹಕಾರ ನೀಡುವಂತೆ ತಿಳಿಸಿದರು.ಅಲ್ಲದೆ ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷ ಉಪಾಧ್ಯಕ್ಷರು ಮತ್ತು ಎಲ್ಲಾ ಸದಸ್ಯರು ಸೇರಿ ಮಾಲಗತ್ತಿ ಗೌಡಗೇರಾ ಹಾಗು ತಿಪ್ಪನಟಿಗಿ ಶಾಲೆಗಳಿಗೆ ಟಿವಿಯನ್ನು ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ದೇವಿಂದ್ರಪ್ಪಗೌಡ ಗೌಡಗೇರಾ ಶಂಕ್ರೆಪ್ಪ ಹವಲ್ದಾರ್ ಭೀಮನಗೌಡ ಮಾಲಿ ಬಿರಾದಾರ,ಯಂಕಣ್ಣ ದೊರಿ ನಿಂಗರಡ್ಡಿ ಕುಲಕರ್ಣಿ ಮಲ್ಲನಗೌಡ ಶಂಕ್ರಯ್ಯ ಹಿರೇಮಠ ರಾಮಣ್ಣ ಗುರಿಕಾರ ರಾಮಕೃಷ್ಣ ತಿಪ್ಪನಟಿಗಿ ಮಲ್ಲಪ್ಪ ಸೇರಿದಂತೆ ಅನೇಕರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…